ವರದಿಗೆ ಮುನ್ನವೇ ಪ್ರಕರಣ ದಾಖಲು ಸರಿಯಲ್ಲ
ನರಸಿಂಹರಾಜಪುರ: ತನಿಕೋಡು ಚೆಕ್ ಪೋಸ್ಟ್ ಸಮೀಪದಲ್ಲಿ ಎಎನ್ಎಫ್ ಗುಂಡಿಗೆ ಕಬೀರ್ ಎಂಬ ವ್ಯಕ್ತಿ ಮೃತರಾದ ಪ್ರಕರಣದ ತನಿಖೆಗೆ ಸಿಐಡಿ ಹಾಗೂ ನ್ಯಾಯಂಗ ತನಿಖೆಗೆ ಒಪ್ಪಿಸಿರುವ ಸಂದರ್ಭದಲ್ಲಿ ವರದಿ ಬರುವ ಮುನ್ನವೇ ಎನ್ಎನ್ಎಫ್ ಸಿಬ್ಬಂದಿ ಮೇಲೆ ಸರ್ಕಾರ ಕೇಸು ದಾಖಲಿಸಿರುವುದು ಖಂಡನೀಯ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಷೇಧಿತ ಪ್ರದೇಶವಾದ ತನಿಕೋಡು ಚೆಕ್ಪೋಸ್ಟ್ನಲ್ಲಿ ಈ ಘಟನೆ ನಡೆದಿರುವುದು ಮಧ್ಯರಾತ್ರಿಯಲ್ಲಿ. ಆ ಸಂದರ್ಭದಲ್ಲಿ ಏನು ನಡೆಯಿತು ಎಂಬ ಸತ್ಯ ತನಿಖೆಯಿಂದ ಹೊರ ಬೀಳಲಿದೆ.
ನೈತಿಕ ಸ್ಥೈರ್ಯ ಕುಸಿತ: ಸರ್ಕಾರ ಸತ್ಯಾಸತ್ಯತೆಗಾಗಿ ಸಿಐಡಿ ಹಾಗೂ ನ್ಯಾಯಾಂಗ ತನಿಖೆ ಮಾಡಲು ಆದೇಶ ನೀಡಿದೆ. ಈ ತನಿಖೆಯ ವರದಿ ಬರುವ ಮುನ್ನವೇ ಸರ್ಕಾರ ಎಎನ್ಎಫ್ ಸಿಬ್ಬಂದಿ ಮೇಲೆ ಕೇಸು ದಾಖಲಿಸಿದರೆ ಅವರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದವರು ಹೇಳಿದರು.
ನನಗೆ ಬಂದ ಮಾಹಿತಿ ಪ್ರಕಾರ ಆ ಭಾಗವು ನಕ್ಸಲೈಟ್ ಏರಿಯಾ ಆಗಿರುವುದರಿಂದ ಚುನಾವಣಾ ಸಮಯಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆಯಬಹುದು ಎಂದು ಎ.ಎನ್.ಎಫ್ ಹಾಗೂ ಪೊಲೀಸರು ಜಾಗೃತರಾಗಿದ್ದರು. ಮತ ಪೆಟ್ಟಿಗೆಯನ್ನು ಚಿಕ್ಕಮಗಳೂರಿನಿಂದ ಉಡುಪಿಗೆ ಕೊಂಡೊಯ್ಯಬೇಕಾದರೆ ಎರಡು ಘಾಟಿಯಲ್ಲಿ ಪ್ರಯಾಣಿಸಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಮಧ್ಯರಾತ್ರಿ ವಾಹನದಲ್ಲಿ ಬಂದವರನ್ನು ನಿಲ್ಲಿಸಿ ದಾಖಲೆ ಕೇಳಿದಾಗ ಓಡಿ ಹೋಗುವ ಪ್ರಯತ್ನ ಮಾಡಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜೀವರಾಜ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

