ಚಿಕ್ಕಮಗಳೂರು

ಹೃದಯರೋಗಕ್ಕೆ ನಿರ್ಲಕ್ಷ್ಯ ಬೇಡ: ಡಾ.ನವಾಜ್

Published On :

ಉಚಿತ ಹೃದಯರೋಗ ತಪಾಸಣಾ ಶಿಬಿರ ಟಿ 25-30 ವರ್ಷಕ್ಕೇ ಕಾಣಿಸಿಕೊಳ್ಳುತ್ತಿರುವ ರೋಗದ ಬಗ್ಗೆ ಎಚ್ಚರಿಕೆ ಅಗತ್ಯ


ಕನ್ನಡಪ್ರಭ ವಾರ್ತೆ ಟಿ ಬೀರೂರು ಟಿ ಫೆ.28
ಪಟ್ಟಣದ ಕನ್ನಡ ಸೇನೆ ಮಂಗಳೂರಿನ ಇಂಡಿಯಾನ ಹಾರ್ಟ್ ಇನ್ ಸ್ಟಿಟ್ಯೂಟ್ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಇಲ್ಲಿನ ಪತ್ರೆ ಕೆ. ಶಿವಪ್ಪಯ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಪಟ್ಟಣದ ನೂರಾರು ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು ಸೂಕ್ತ ತಪಾಸಣೆ ಹಾಗೂ ಮಾಹಿತಿ ಪಡೆದರು. ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಹೃದಯರೋಗ ತಜ್ಞ ಡಾ.ಸರ್‌ಫ್ರಾಜ್ ನವಾಜ್ ಮಾಹಿತಿ ನೀಡಿ ಒತ್ತಡಯುಕ್ತ ಜೀವನಶೈಲಿ, ಆಹಾರ ಸೇವನೆ ಪದ್ಧತಿ ಸೂಕ್ತವಾಗಿ ಇಲ್ಲದಿರುವುದು, ಕೆಟ್ಟ ಅಭ್ಯಾಸ, ಸಕ್ಕರೆ ಕಾಯಿಲೆಯನ್ನು ನಿರ್ಲಕ್ಷಿಸಿರುವುದು ಹಾಗೂ ಅನುವಂಶಿಕವಾಗಿ ಸಹ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿವೆ ಎಂದರು.
ನಿರ್ಲಕ್ಷ್ಯ ಬೇಡ: ಹಿಂದೆ 45- 50 ವರ್ಷಗಳ ಮೇಲ್ಪಟ್ಟವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದರೆ, ಈಗ 25-30 ವರ್ಷಗಳಿಂದಲೇ ಈ ರೋಗದಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದ ಅವರು, ಕಾಯಿಲೆ ಲಕ್ಷಣಗಳ ಬಗ್ಗೆ ಪ್ರಾಥಮಿಕ ಹಂತದ ಪರೀಕ್ಷೆ  ಮಾಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಅನಾಹುತ ಸಂಭವ ಹೆಚ್ಚಿದ್ದು ನಿರ್ಲಕ್ಷ ವಹಿಸದೆ ತಪಾಸಣೆಗೊಳಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬೀರೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವಾಸುದೇವಮೂರ್ತಿ ಮಾತನಾಡಿ, ಜನರಲ್ಲಿ ಹೃದಯ ರೋಗಗಳ ಜಾಗೃತಿ ಹಾಗೂ ಅರಿವನ್ನು ಮೂಡಿಸುವಲ್ಲಿ ಇಂತಹ ಶಿಬಿರಗಳ ಅಗತ್ಯತೆ ಹೆಚ್ಚಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲದಿದ್ದರೂ ಪ್ರಾಥಮಿಕ ಹಂತದಲ್ಲಿ ಉತ್ತಮ ಚಿಕಿತ್ಸೆ ನೀಡಿ ರೋಗಿಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕಳುಹಿಸುತ್ತಿದ್ದು, ಕನಿಷ್ಠ ಜಿಲ್ಲಾ ಕೇಂದ್ರಗಳಲ್ಲಾದರೂ ಬೆಂಗಳೂರಿನ ಜಯದೇವದಂತಹ ಕೇಂದ್ರಗಳ ಅವಶ್ಯಕತೆ ಇದೆ ಎಂದರು.
ಶಿಬಿರ ಸಂಚಾಲಕ ವೈದ್ಯ ಡಾ. ನಾಗನಾಥ್ ಮಾತನಾಡಿ, ನಾವು ಅನುಸರಿಸುವ ಜೀವನ ಪದ್ಧತಿಯ ಅಂಶಗಳಿಂದ ಹೃದಯರೋಗ ಬರುವ ಸಂಭವಗಳಿವೆ ಎಂಬುದನ್ನು ತಿಳಿಸಿ ಸರ್ಕಾರ ಸಹ ಸುವರ್ಣ ಆರೋಗ್ಯ ಚೇತನ, ಯಶಸ್ವಿನಿ, ಬಿಪಿಎಲ್ ಹಾಗೂ ವಾಜಪೇಯಿ ಆರೋಗ್ಯ ಶ್ರೀ ಮೊದಲಾದ ಯೋಜನೆಗಳ ಮೂಲಕ ಬಡವರ್ಗದವರಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಸೇನೆ ಆಯೋಜನೆಯ ಈ ಕಾರ್ಯಕ್ರಮಕ್ಕೆ 200ಕ್ಕೂ ಹೆಚ್ಚಿನ ಜನರು ತಪಾಸಣೆಗೊಳಪಡುವ ಮೂಲಕ ಶಿಬಿರದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ತಾಲೂಕು ಕನ್ನಡ ಸೇನೆ ಅಧ್ಯಕ್ಷ ಮೋಹನ್ ಕುಮಾರ್ ಅಭಿನಂದಿಸಿದರು. ಬೀರೂರು ಕನ್ನಡಸೇನೆ ಘಟಕ ಅಧ್ಯಕ್ಷ ಎನ್. ಮುಬಾರಕ್, ಶ್ರೀನಿವಾಸ್, ಗಿರೀಶ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.