ಬಿಎಸ್ಎನ್ಎಲ್ ಟವರ್ಗೆ ಬೀಗ ಹಾಕಿ ಪ್ರತಿಭಟನೆ
ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಏ.30
ಕಟ್ಟಿನಮನೆ ಬಿಎಸ್ಸೆನ್ನೆಲ್ ಟವರ್ನ ಅಸಮರ್ಪಕ ನಿರ್ವಹಣೆಯಿಂದ 4 ದಿನದಿಂದ ಸಿಗ್ನಲ್ ಸಂಪೂರ್ಣ ನಿಂತು ಹೋಗಿರುವುದರಿಂದ ಆಕ್ರೋಶಗಂಡ ಮೊಬೈಲ್ ಗ್ರಾಹಕರು ಹಕರು ಬಿಎಸ್ಎನ್ಎಲ್ ಟವರ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಕಟ್ಟಿನಮನೆ ಬಿಎಸ್ಸೆನ್ನೆಲ್ ಟವರ್ ನಂಬಿ ಕಟ್ಟಿನಮನೆ, ದಾವಣ, ಜೋಗಿಮಕ್ಕಿ, ಹಕ್ಕಲುಮನೆ, ಕಾನೂರು, ಹರಾವರಿ, ಹಂತುವಾನಿ, ಕೆರೆಮನೆ ಮೊದಲಾದ ಗ್ರಾಮಗಳ ಸಾವಿರಾರು ಜನರು ಬಿಎಸ್ಸೆನ್ನೆಲ್ ಸಿಮ್ ಕೊಂಡಿದ್ದು, ಮನೆಯಲ್ಲಿದ್ದ ಲ್ಯಾಂಡ್ ಫೋನ್ ತೆಗೆದು ಹಾಕಿದ್ದಾರೆ.
ದಿಢೀರ್ ಸಿಗ್ನಲ್ ಡೌನ್: ಈಗ ಆ ಭಾಗದಲ್ಲಿ ಕೆಲವೇ ಜನರು ಮಾತ್ರ ತಮ್ಮ ಮನೆಯಲ್ಲಿ ಲ್ಯಾಂಡ್ ಫೋನ್ ಇಟ್ಟುಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ಕಟ್ಟಿನಮನೆ ಬಿಎಸ್ಸೆನ್ನೆಲ್ ಟವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದ್ದಕ್ಕಿದ್ದಂತೆ ಸಿಗ್ನಲ್ ಹೋಗಿ ಬಿಡುತ್ತದೆ.
ಈ ಬಗ್ಗೆ ಬಿಎಸ್ಸೆನ್ನೆಲ್ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ಕೊಡುತ್ತಿಲ್ಲ. ಕಳೆದ ಶನಿವಾರದಿಂದ ಈ ಟವರ್ನ ಸಿಗ್ನಲ್ ಸಂಪೂರ್ಣ ನಿಂತು ಹೋಗಿದೆ. ಸಿಗ್ನಲ್ ನಿಂತ ಕೂಡಲೇ ಲ್ಯಾಂಡ್ ಫೋನ್ ಸಹ ಡೆಡ್ ಆಗಿಬಿಡುತ್ತದೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಟವರ್ಗೆ ಬೀಗ: ಬುಧವಾರ ಬೆಳಗ್ಗೆವರೆಗೂ ಕಾದ ಗ್ರಾಹಕರು ತಾಳ್ಮೆ ಕಳೆದುಕೊಂಡು ಟವರ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಬಿಎಸ್ಸೆನ್ನೆಲ್ ಕೊಪ್ಪ ವಿಭಾಗದ ಡಿವಿಜನಲ್ ಎಂಜಿನಿಯರ್ ಹೆಬ್ಬಾಳ ಮತ್ತು ಸಿಬ್ಬಂದಿ ಕಟ್ಟಿನಮನೆ ಟವರ್ಗೆ ಆಗಮಿಸಿ ಗ್ರಾಮಸ್ಥರೊಂದಿಗೆ ಚಚಿಸಿದರು.
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಕರೆಂಟು ಹೋದ ಕೂಡಲೇ ಬಿಎಸ್ಸೆನ್ನೆಲ್ ಟವರ್ ನಿಷ್ಕ್ರಿಯವಾಗುತ್ತದೆ. ಜನರೇಟರ್ ಯಾಕೆ ಸ್ಟಾರ್ಟ್ ಮಾಡುತ್ತಿಲ್ಲ. ಹಣ ಖರ್ಚು ಮಾಡಿ ಕರೆನ್ಸಿ ಹಾಕುತ್ತೇವೆ. ಉತ್ತಮ ಸೇವೆ ನೀಡಿ ಎಂದು ಆಗ್ರಹಿಸಿದರು.
ತಾಂತ್ರಿಕ ಸಮಸ್ಯೆ: ಈ ಸಂದರ್ಭದಲ್ಲಿ ಸಮಜಾಯಿಸಿ ನೀಡಿದ ಬಿಎಸ್ಸೆನ್ನೆಲ್ ಅಧಿಕಾರಿ ಹೆಬ್ಬಾಳ, ಕಟ್ಟಿನಮನೆ ಟವರ್ನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಜೊತೆಗೆ ವಿದ್ಯುತ್ ಸಮಸ್ಯೆಯೂ ಸೇರಿದೆ. ಟವರ್ಗೆ ವಿದ್ಯುತ್ ನೀಡುವ ಟಿ.ಸಿ. ಯಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಮೆಸ್ಕಾಂಗೆ ದೂರು ನೀಡಿದ್ದೇವೆ. ಸಿಡಿಲು ಬಂದು ಟವರ್ ಒಂದು ಯೂನಿಟ್ ಸುಟ್ಟು ಹೋಗಿದ್ದು, ಕೆಲವು ಪರಿಕರಗಳೂ ಸುಟ್ಟುಹೋಗಿದೆ. ಎಲ್ಲವನ್ನೂ ಸರಿಪಡಿಸಿ ಟವರ್ ಸುಸ್ಥಿತಿಯಲ್ಲಿಡುತ್ತೇವೆ ಎಂದು ಭರವಸೆ ನೀಡಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬೀಗ ಹಾಕಿ ಪ್ರತಿಭಟನೆ ನಡೆಸಿದ ಗ್ರಾಹಕರು ನಂತರ ಬಿಎಸ್ಸೆನ್ನೆಲ್ ಅಧಿಕಾರಿಗಳ ಭರವಸೆಯಿಂದ ಪ್ರತಿಭಟನೆ ಕೈ ಬಿಟ್ಟು ಬೀಗ ತೆಗೆದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

