ಚಿಕ್ಕಮಗಳೂರು

ಶೆಟ್ಟಿಕೊಪ್ಪ ವಲಯದಲ್ಲಿ ಮದ್ಯವರ್ಜನ ಶಿಬಿರ ಮೇ 2 ರಿಂದ

Published On :

ನರಸಿಂಹರಾಜಪುರ:  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೆಟ್ಟಿಕೊಪ್ಪ ವಲಯದ ಆಶ್ರಯದಲ್ಲಿ 678 ನೇ ಮದ್ಯವರ್ಜನ ಶಿಬಿರವು ಕಳ್ಳಿಕೊಪ್ಪದ ಜಿ.ಟಿ. ನಾರಾಯಣಗೌಡ ಸಮುದಾಯ ಭವನದಲ್ಲಿ ಮೇ 2 ರಿಂದ 9 ರವರೆಗೆ ನಡೆಯಲಿದೆ ಎಂದು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಲ್.ಎಂ.ಸತೀಶ್, ಕಾರ್ಯದರ್ಶಿ ಜಿ.ಉಮೇಶ್ ತಿಳಿಸಿದ್ದಾರೆ.
ಮೇ 2 ರಂದು ಬೆಳಗ್ಗೆ 10.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ದ್ವಾರಮಕ್ಕಿಯ ಇಂದಿರಮ್ಮ ಉದ್ಘಾಟಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅರವಿಂದ ಸೋಮಯಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ದ್ವಾರಮಕ್ಕಿಯ ಕೃಷಿಕ ಶ್ರೀನಾಥ್, ಕಳ್ಳಿಕೊಪ್ಪದ ಶ್ರೀಕಂಠಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕು.ಉಮಾವತಿ, ದ್ವಾರಮಕ್ಕಿಯ ಕೃಷಿಕ ಡಿ.ಎಲ್. ವೆಂಕಟೇಶ್ ಉಪಸ್ಥಿತರಿರುವರು.
ಪ್ರತಿ ದಿನ ಶಿಬಿರಾರ್ಥಿಗಳಿಗಾಗಿ ಮಾಹಿತಿ ಮಾರ್ಗದರ್ಶನ ಸಭೆಯಲ್ಲಿ ವಿವಿಧ ಕ್ಷೇತ್ರದ ತಜ್ಞರು ಮಾಹಿತಿ ನೀಡಲಿದ್ದಾರೆ. ಪ್ರತಿದಿನ ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಗುಂಪು ಸಲಹೆ, ಕೌಟುಂಬಿಕ ಸಲಹೆ, ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಕರ್ತವ್ಯ ನಿರ್ವಹಣಾ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೇ 3 ರಂದು ಆರೋಗ್ಯ ತಪಾಸಣಾ ಕಾರ್ಯಕ್ರಮವಿದೆ. ಈಗಾಗಲೇ 678 ನೇ ಮದ್ಯ ವರ್ಜನ ಶಿಬಿರವನ್ನು ನಡೆಸಲು ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಮೇ 9 ರಂದು ಬೆಳಿಗ್ಗೆ 11.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಹಿತಿಗಾಗಿ ಎಲ್.ಎಂ. ಸತೀಶ್ (9448964433), ಉಮಾವತಿ (9964257003), ಜಿ.ಉಮೇಶ್  (8277281837) ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.