ಜಾನಪದ ಕಲೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ
ಕ.ಪ್ರ.ವಾರ್ತೆ, ತರೀಕೆರೆ, ಫೆ.1 ನಶಿನುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಕರ್ನಾಟಕ ಜಾನಪದ ಪರಿಷತ್ ತರೀಕೆರೆ ತಾಲೂಕು ಘಟಕದಿಂದ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಹಾಡಿರೋ ರಾಗಗಳ- ತೂಗಿರೋ ದೀಪಗಳ ಜಾನಪದ ಕಲಾ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ತರೀಕೆರೆಗೆ ಕೀರ್ತಿ; ರಾಜ್ಯಕ್ಕೆ ಪ್ರಪ್ರಥಮ ಬಾರಿಗೆ ಜಾನಪದ ಸಮ್ಮೇಳನ ನಡೆಸಿದ ಕೀರ್ತಿ ತರೀಕೆರೆಗೆ ಸಂದಿದೆ. ಜಾನಪದ ರತ್ನ ಕೆ.ಆರ್. ಲಿಂಗಪ್ಪನವರನ್ನು ಸ್ಮರಿಸಬೇಕು, ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾವೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ತರೀಕೆರೆಯಲ್ಲಿ ಜಾನಪದ ಕಲಾ ಪರಿಷತ್ತು ತಾಲೂಕು ಘಟಕ ಪ್ರಾರಂಭವಾಗುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದರು.
ಪರಿಷತ್ತು ರಾಜ್ಯ ಸಂಚಾಲಕ ಎಸ್. ಬಾಲಾಜಿ ಮಾತನಾಡಿ, ಜಾನಪದ ಮೂಲ ಕಲೆಗಳ ಸಂರಕ್ಷಣೆಯಾಗಬೇಕು, ಜಾನಪದ ಕಲೆಗಳನ್ನು ಕುರಿತು ಯುವಕರಿಗೆ ತರಬೇತಿ ನೀಡಲಾಗುವುದು ಜಾನಪದ ಕಲೆ ಹಾಡುಗಾರಿಕೆ, ತತ್ವ ಪದ ದಾಖಲೀಕರಣ, ಕೈಪಿಡಿ ಮಾಡಲಾಗುವುದು ಎಂದು ತಿಳಿಸಿದ ಅವರು ಎಚ್.ಎಲ್. ನಾಗೇಗೌಡ ಅವರ ಶತಮಾನೋತ್ಸವ, ವಿಚಾರಧಾರೆ ಇತ್ಯಾದಿಗಳಿಗೆ ಸರ್ಕಾರ ಕೈಜೋಡಿಸುತ್ತದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಅರಿವು ಅಗತ್ಯ: ಗಾಯಕ, ಕಲಾವಿದ ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ, ಹಾಡುಗಾರಿಕೆ, ನೃತ್ಯ ಇತ್ಯಾದಿಗಳಲ್ಲಿ ಕ್ಯಾಸೆಟ್ ಬಳಕೆ ಕೂಡದು. ಶಿಕ್ಷಕರು ಮತ್ತು ಪಾಲಕರು ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಜಾನಪದ ಕಲೆಯ ವೈಶಿಷ್ಠವನ್ನು ಅಳವಡಿಸಬೇಕು. ಕಲೆಗೆ ಸರ್ಕಾರ ಕೂಡ ಪ್ರೋತ್ಸಾಹಿಸಬೇಕು. ಡೊಳ್ಳು, ವೀರಗಾಸೆ ನಮ್ಮ ಅಪೂರ್ವ ಜಾನಪದ ಕಲೆಗಳು ಎಂದು ತಿಳಿಸಿದರು. ತಾಲೂಕು ಘಟಕದ ಅಧ್ಯಕ್ಷ ಕೆ.ಸಿ. ಕೆಂಚಪ್ಪ ಮಾತನಾಡಿ ಮಾತನಾಡಿದರು. ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎಸ್. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ರಾಮಚಂದ್ರಪ್ಪ, ಬಿ.ಆರ್.ಸಿ. ತಿಮ್ಮಯ್ಯ, ಕೆ. ಜಯಸ್ವಾಮಿ, ಸ್ಫೂರ್ತಿ ಯುವ ಕಲಾ ಸಂಘದ ಅಧ್ಯಕ್ಷ ಇಮ್ರಾನ್ ಅಹಮದ್ ಬೇಗ್, ವೀರಗಾಸೆ ಕಲಾವಿದರಾದ ಹಳಿಯೂರು ನಂಜುಂಡಸ್ವಾಮಿ, ಟಿ.ಜಿ. ಶಶಾಂಕ, ನವೀನ್ ಕುಮಾರ್, ಪುರಸಭಾ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

