ಚಿಕ್ಕಮಗಳೂರು

ಯುವ ಪೀಳಿಗೆ ತುಳು ಸಂಸ್ಕೃತಿ ಉಳಿಸಲಿ

Published On :

ಮೂಡಿಗೆರೆ: (ಡಾ.ಕೋಟ ಶಿವರಾಮ ಕಾರಂತ ಚಾವಡಿ): ತುಳುವರು ತಮ್ಮ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಯುವ ಪೀಳಿಗೆ ತುಳು ಸಂಪ್ರಾದಾಯ ಉಳಿಸಿ ಬೆಳೆಸುವಂತೆ ಶಾಸಕ ಬಿ.ಬಿ. ನಿಂಗಯ್ಯ ಕರೆ ನೀಡಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದ ಡಾ. ಕೋಟ ಶಿವರಾಮ ಕಾರಂತ ಚಾವಡಿಯಲ್ಲಿ ಮೂಡಿಗೆರೆ ತುಳು ಕೂಟದ ವತಿಯಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ತುಳು ವೈಭವೋ-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ವೈಶಿಷ್ಟ್ಯ: ತುಳುನಾಡು ಹಲವು ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿದೆ. ಭೂತಾರಾಧನೆ, ಯಕ್ಷಗಾನ, ನೇಮ, ಕೋಲ, ನಾಗಮಂಡಲ, ನಾಗ ತಂಬಿಲ, ಕಂಗಿಲು, ಚೆನ್ನುಲಿಕೆ, ಹುಲಿ ಹಂದಿ ಆಟ, ಅಂಕ ಆಯನ, ಕಂಬಳ, ಬಿಸು, ಪತ್ತೆನಾಚೆ, ಆಟಿ ಅಮವಾಸ್ಯೆ, ಸೋಣ ಶನಿವಾರ, ಮನೆ ತುಂಬಿಸುವುದು, ಹೊಸ ಅಕ್ಕಿ ಊಟ, ಕಾವೇರಿ ಸಂಕ್ರಾತಿ, ದೀಪಾವಳಿ, ಕೆಡ್ಡಸ ಇನ್ನು ಮುಂತಾದ ಆಚರಣೆಗಳು ತುಳುನಾಡಿನ ಸಾಂಸ್ಕೃತಿಕ ಧಾರ್ಮಿಕ ವಿಧಿಗಳಾಗಿ ರೂಢಿಯಲ್ಲಿವೆ ಎಂದರು.
ಸಂತ ಅಂತೋಣಿ ಚರ್ಚ್‌ನ ಧರ್ಮಗುರು ರೆ.ಫಾ. ಲ್ಯಾನ್ಸಿ ಪಿಂಟೋ ಮಾತನಾಡಿ, ದೇಶವು ಹಲವು ಸಂಸ್ಕೃತಿ ಹೊಂದಿದೆ. ಜಾತಿ, ಭೇದಭಾವ ಮರೆತು ಎಲ್ಲರೂ ಒಂದಾಗಿ ಬಾಳಿ ದೇಶ, ಭಾಷೆ, ಆಚಾರ- ವಿಚಾರಗಳ ಮತ್ತು ಸಂಪ್ರದಾಯ ಉಳಿಸುವಂತೆ ಕರೆ ನೀಡಿದರು.
ಸಂಸ್ಕೃತಿ ಕಣ್ಮರೆ: ತಾಲೂಕು ಪಂಚಾಯಿತಿ ಅಧ್ಯಕ್ಷ ಶೇಷಗಿರಿ ಮಾತನಾಡಿ, ತುಳು ತನ್ನದೇ ಆದ ಲಿಪಿ ಹೊಂದಿದೆ. ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು, ಕೆಳದಿ ನಾಯಕರು ಇವರೆಲ್ಲರು ಸಾಮಂತರಾಗಿ ತುಳುನಾಡನ್ನು ಆಳಿರುವುದು ಇತಿಹಾಸವೇ ತಿಳಿಸುತ್ತದೆ. ಪ್ರಸ್ತುತ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ಆತಂಕಕಾರಿ. ನಶಿಸುತ್ತಿರುವ ಶ್ರೀಮಂತ ಸಂಸ್ಕೃತಿಗಳ ಮೂಲ ಸ್ವರೂಪ ತಿಳಿದು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ವಿಶ್ವದೆಲ್ಲೆಡೆ ತುಳು ನಾಡ ಸಂಸ್ಕೃತಿ ಬೆಳೆಸಲು ಮುಂದಾಗುವಂತೆ ಕರೆ ನೀಡಿದರು. ದೇವಾಲಯಗಳ ಊರು: ಅಧ್ಯಕ್ಷತೆ ವಹಿಸಿದ್ದ ತುಳು ಕೂಟದ ಅಧ್ಯಕ್ಷ ಡಿ.ಬಿ.ನರೇಂದ್ರ ಶೆಟ್ಟಿ ಮಾತನಾಡಿ, ತುಳುನಾಡು ದೇವಾಲಯಗಳ ಊರು ಎಂದೆ ಪ್ರಸಿದ್ಧಿ. ಪ್ರತಿನಿತ್ಯ ಸಾವಿರಾರು ಭಕ್ತರು ಯಾತ್ರೆಗೆ ಬಂದು ಪುನೀತರಾಗುತ್ತಾರೆ. ತುಳು ಭಾಷೆ ಉಳಿಸಿ ಬೆಳೆಸಲು ಶ್ರಮಿಸುವಂತೆ ತಿಳಿಸಿದರು.  ಬಿಳಗುಳದ ಧರ್ಮಗುರು ಅನ್ವರ್ ಸಾಧಿಕ್ ಮೌಲವಿ, ಶಿವಪ್ರಸಾದ್ ಭಟ್, ಡಾ. ರಾಮಚರಣ್ ಅಡ್ಯಂತಾಯ, ಬಿ.ಎಲ್. ವಿಶ್ವನಾಥ್ ರೈ, ಕೇಶವ ಸುವರ್ಣ, ಸುರೇಶ್ ಎಸ್. ಶೆಟ್ಟಿ, ಜಾನಪ್ಪ ಮಾಸ್ಟರ್, ವಸಂತ ಎಸ್. ಪೂಜಾರಿ ಇದ್ದರು.
ರಾಷ್ಟ್ರ ಪ್ರಶಸ್ತಿ ವಿಜೇತ ಕುದಿ ವಸಂತ ಶೆಟ್ಟಿ ಉಪನ್ಯಾಸ ನೀಡಿದರು. ಡಾ. ರಾಮಚರಣ್ ಅಡ್ಯಂತಾಯ ಮತ್ತು ಡಿ.ಬಿ. ನರೇಂದ್ರ ಶೆಟ್ಟಿ ಡೋಲು ಬಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ತುಳುನಾಡು ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳ ರಾಜ ಬೀದಿಯಲ್ಲಿ ನಡೆದ ಮೆರವಣಿಗೆ ಜನಮನ ಸೂರೆಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.