7ರಂದು ದುರ್ಗಾಂಬಿಕಾ ದೇವಿ ರಥೋತ್ಸವ
ಕಡೂರು: ಫೆ.7ರಂದು ಪಟ್ಟಣದ ಸುಭಾಷ್ ನಗರದ ಶ್ರೀ ದುರ್ಗಾಂಬಿಕಾ ದೇವಿಯವರ ಮಹಾರಥೋತ್ಸವವು ಅದ್ಧೂರಿಯಾಗಿ ನಡೆಯಲಿದೆ.
ಫೆಬ್ರವರಿ 3ರಿಂದ ಚಾಲನೆಗೊಂಡಿರುವ ಶ್ರೀ ದೇವಿಯವರ ಜಾತ್ರಾ ಮಹೋತ್ಸವಕ್ಕೆ ಕುಂತಿಹೊಳೆ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ಸಿಕ್ಕಿದ್ದು, ಫೆಬ್ರವರಿ 5ರ ಬುಧವಾರ ಕಳಸ ಸ್ಥಾಪನೆ ನಡೆಯಲಿದೆ. 7ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶ್ರೀ ಅಮ್ಮನವರಿಗೆ ಮದುವಣಿಗಿತ್ತಿ ಶಾಸ್ತ್ರ ನಡೆಯಲಿದ್ದು, ಸಂಜೆ ಬಾವುಟದ ಹರಾಜು ನಡೆಯಲಿದೆ. ಸಂಜೆ 5.30ಕ್ಕೆ ಶ್ರೀ ಅಮ್ಮನವರ ಮಹಾರಥೋತ್ಸವವು ಸರ್ವ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಲಿದೆ. 8ರ ಶನಿವಾರ ಶ್ರೀ ಅಮ್ಮನವರ ಉತ್ಸವ ನಡೆಯಲಿದೆ. ರಾತ್ರಿ 8.30ಕ್ಕೆ ದೇವಾಲಯದ ಅವರಣದಲ್ಲಿ ಅರಸೀಕರೆಯ ಶ್ರೀ ನಾಟ್ಯಾಂಜಲಿ ನೃತ್ಯ ವೃಂದದಿಂದ ಜನಪ್ರಿಯ ಗೀತೆಗಳ ನೃತ್ಯ ಪ್ರದರ್ಶನ ನಡೆಯಲಿದೆ.
ಶ್ರೀ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ 8 ರ ಶನಿವಾರ ರಾತ್ರಿ 8 ಗಂಟೆಗೆ ಕರ್ನಾಟಕ ರಾಜ್ಯದ ಸುಪ್ರಸಿದ್ದ ಮದ್ದೂರು ರಂಗಭೂಮಿ ಕಲಾವಿದರ ಸಂಘದಿಂದ ಬೆಸಗರಹಳ್ಳಿ ಡಾ ಆಗ್.ಡಿ. ಈಶ್ವರಾಚಾರ್ ರಚಿತ ತಂಡದ ವ್ಯವಸ್ಥಾಪಕರಾದ ಹೆಮ್ಮನಹಳ್ಳಿ ಪುಟ್ಟಸ್ವಾಮಿಯವರ 71ನೇ ಪ್ರಯೋಗವಾದ ಕುರಿದೊಡ್ಡಿ ಕುರುಕ್ಷೇತ್ರ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಪಾತ್ರವರ್ಗದಲ್ಲಿ ಕಡೂರು ಆಹಾರ ಇಲಾಖೆ ನಿರೀಕ್ಷಕರಾದ ಎಂ.ವಿ. ಚಂದ್ರಮೂರ್ತಿ ಮತ್ತಿತರ ತಂಡವು ಅಭಿನಯಿಸಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

