ವಾರ್ಷಿಕೋತ್ಸವ
ಮೂಡಿಗೆರೆ: ಪಟ್ಟಣದ ಸಂತ ಅಂತೋಣಿ ದೇವಾಲಯದ 144ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಸಂತ ಅಂತೋಣಿಯವರ ಪ್ರತಿಮೆಯನ್ನು ಭವ್ಯಲಾಂಕೃತ ವಾಹನದಲ್ಲಿ ಕೂರಿಸಿ ಭಕ್ತರು ಗೂಡು ದೀಪಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಚರ್ಚ್ಗೆ ಹಿಂದಿರುಗಿದರು.
ಇದೇ ವೇಳೆಯಲ್ಲಿ ಚರ್ಚ್ನಲ್ಲಿ ಪ್ರಧಾನ ಗುರು ಜ್ಞಾನಪ್ರಕಾಶ್ ಅವರೊಂದಿಗೆ ಗುರುಗಳು ಭಾಗವಹಿಸಿ ಬಲಿಪೂಜೆಯನ್ನು ಅರ್ಪಿಸಿದರು. ಧರ್ಮಕೇಂದ್ರದ ಫಾ. ಲ್ಯಾನ್ಸಿ ಪಿಂಟೋ ಆಶೀರ್ವಚನ ನೀಡಿದರು.
ಏಕಪಾತ್ರಾಭಿನಯ ದ್ವಿತೀಯ ಪ್ರಶಸ್ತಿ
ನರಸಿಂಹರಾಜಪುರ: ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಮ ಪಂಚಾಯ್ತಿಯ ವಿಶ್ವೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ನಡೆದ ಇತ್ತೀಚೆಗೆ ನಡೆದ 2012-13ನೇ ಸಾಲಿನ ರಾಜ್ಯಮಟ್ಟದ ಯುವಜನ ಮೇಳದಲ್ಲಿ ವಿವಿಧ ಸ್ಫರ್ಧೆಗಳನ್ನು ನಡೆಸಲಾಯಿತು. ಮೇಳದಲ್ಲಿ ಭಾಗವಹಿಸಿದ್ದ ತಾಲೂಕಿನ ಸೀತೂರು ಸೀತಾ ಯುವತಿ ಮಂಡಳಿ ಅಧ್ಯಕ್ಷೆ ರಂಗಿಣಿ ಯು. ರಾವ್ ಅವರು ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದಿದ್ದಾರೆ.
ಆರಾಧನೆ
ಕೊಪ್ಪ: ಇಲ್ಲಿನ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಶಾಲೆಯ 18ನೇ ವರ್ಷದ ಪುರಂದರ ದಾಸರ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವನ್ನು ಇತ್ತೀಚೆಗೆ ಕೊಪ್ಪದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ 2 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಮೊದಲನೇ ದಿನ ಬೆಳಗ್ಗೆ ವೃತ್ತಿ ಸಾಂಕೇತಿಕ ಬೀದಿ ಉತ್ಸವದೊಂದಿಗೆ ಪ್ರಾರಂಭವಾಗಿ, ನಂತರದಲ್ಲಿ ವೇದಘೋಷ ಹಾಗೂ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ, ಗಾಯನ, ನಾದಬ್ರಹ್ಮ ವಿದ್ಯಾರ್ಥಿಗಳಿಂದ ಸ್ಥಳೀಯ ಮತ್ತು ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ದಿನವಿಡೀ ನಡೆಯಿತು.
ಆರ್. ತಿಲಕ್ಗೆ ಚಿನ್ನದ ಪದಕ
ಕೊಪ್ಪ: ಬಳ್ಳಾರಿಯ ಹೊಸಪೇಟೆಯಲ್ಲಿ ಫೆ.3ರಿಂದ 5ರ ವರೆಗೆ ನಡೆದ ಪೈಕಾ ಅಂತಾರಾಜ್ಯ ಮಟ್ಟದ ಷಟಲ್ ಬ್ಯಾಟ್ಮಿಂಟನ್ ಪಂದ್ಯಾವಳಿಯಲ್ಲಿ ಕೊಪ್ಪ ತಾಲೂಕಿನ ಶಾರದ ವಿದ್ಯಾಮಂದಿರ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆರ್. ತಿಲಕ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರ ಸಾಧನೆಯನ್ನು ಪಟ್ಟಣದ ಕ್ರೀಡಾ ಅಭಿಮಾನಿಗಳು ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಇವರು ಪಟ್ಟಣದ ಉದ್ಯಮಿ ರವಿಕುಮಾರ್ ಮತ್ತು ಜಯಶ್ರೀ ದಂಪತಿಗಳ ಪುತ್ರರಾಗಿದ್ದು, ಪೋಷಕರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

