ಚಿಕ್ಕಮಗಳೂರು

ಏಕರೂಪ ಶಿಕ್ಷಣ ನೀತಿ ಇನ್ನೂ ಜಾರಿಗೆ ಬಂದಿಲ್ಲ

Published On :

ಕ.ಪ್ರ.ವಾರ್ತೆ, ಕಡೂರು. ಫೆ.7
ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ದೃಷ್ಟಿಯಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿ  ಕೇಂದ್ರ ಸರ್ಕಾರವು ಕಡ್ಡಾಯವಾಗಿ ಜಾರಿಗೊಳಿಸಿದ್ದರೂ ಎಲ್ಲರೂ ಒಪ್ಪುವ ಏಕರೂಪ ಶಿಕ್ಷಣ ನೀತಿ ಇನ್ನೂ ಜಾರಿಗೆ ಬಂದಿಲ್ಲ ಎಂದು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ರುಡಾಫ್ ಫಿರೇರಾ ಹೇಳಿದರು.
ಅವರು ಕಡೂರು ಪಟ್ಟಣದ ದೀಕ್ಷಾ ವಿದ್ಯಾಮಂದಿರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಸಾಕ್ಷರತೆ ಮತ್ತು ವಿದ್ಯಾಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಂತಿಸುವ ಶಕ್ತಿ: ಮಾನವರಿಗೆ ಮಾತ್ರ ಸ್ವತಂತ್ರವಾಗಿ ಚಿಂತಿಸುವ ಶಕ್ತಿಯಿದ್ದು, ಅದನ್ನು ಶಿಕ್ಷಣದಿಂದ ಮಾತ್ರ ತುಂಬಲು ಸಾಧ್ಯ. ಶಿಕ್ಷಣದ ಬಗ್ಗೆ ಹಲವಾರು ವರ್ಷದಿಂದ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಎಂತಹ ಶಿಕ್ಷಣ ಬೇಕು ಎಂತಹ ಪಠ್ಯ ಕ್ರಮ ನೀಡಬೇಕು ಎಂಬ ಚಿಂತನೆ ನಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ. ಶ್ರೀನಿವಾಸ್ ಗೌಡ ಶಿಕ್ಷಣ ಕಾಯಿದೆ ಕುರಿತು ಮಾತನಾಡಿದರು.
ಮಾದಕ ಪದಾರ್ಥ ಸೇವನೆ ಮತ್ತು ಲೈಂಗಿಕ ದುರ್ಬಳಕೆಯಾದ ಹೆಣ್ಣು ಮಕ್ಕಳ ಸಂರಕ್ಷಣೆ ಎಂಬ ವಿಷಯದ ಕುರಿತು ವಕೀಲ ಶೇಖರ್ ಮಾತನಾಡಿದರು. ಮಹಿಳೆ ಮತ್ತು ಹೆಣ್ಣುಮಕ್ಕಳ ಲೈಂಗಿಕ ಕಿರುಕುಳದಿಂದ ವೈಜ್ಞಾನಿಕವಾಗಿ ಸ್ವಂಯ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಹಿರಿಯ ವಕೀಲ ಬೊಮ್ಮಣ್ಣ ವಿವರಿಸಿದರು. ದೀಕ್ಷಾ ವಿದ್ಯಾ ಸಂಸ್ಥೆ ಅಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯದರ್ಶಿ ಮಂಜುನಾಥ ಪ್ರಸನ್ನ, ಆಡಳಿತಾಧಿಕಾರಿ ನವೀನ್ ಡಿ ಅಲ್ಮೆಡಾ, ಶಿಕ್ಷಕ ರವಿಕುಮಾರ್, ವಕೀಲರಾದ ಆನಂದ್, ಅಶೋಕ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.