ಚಿಕ್ಕಮಗಳೂರು

ತೆಂಗು ಬೆಳೆಗಾರರಿಗೂ ಪ್ಯಾಕೆಜ್‌ಗೆ ಆಗ್ರಹ

Published On :

ಕ.ಪ್ರ.ವಾರ್ತೆ  ಕಡೂರು  ಫೆ.7
 ನಷ್ಟಕ್ಕೆ ಒಳಗಾಗಿರುವ ರಾಜ್ಯದ ತೆಂಗು ಬೆಳೆಗಾರರಿಗೆ ಕೇರಳದ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಲು ಮುಂದಿನ ವಾರ ಕೇಂದ್ರ ಕೃಷಿ ಸಚಿವರ ಬಳಿ ನಿಯೋಗ ಹೋಗಲಾಗುವುದು ಹಾಗು ರೈಲ್ವೆ ಗೂಡ್ಸ್ ಶೆಡ್ಡನ್ನು ಕಡೂರು ತಾಲೂಕು ಬಳ್ಳೇಕೆರೆಯಲ್ಲೇ ಉಳಿಸುವಂತೆ ರೈಲ್ವೆ ಸಚಿವರಿಗೆ ಒತ್ತಾಯಿಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಹೇಳಿದರು.
 ಅವರು ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತೆಗೆ ಭೇಟಿ ನೀಡಿ ಕಳೆದ ಬುಧವಾರ ಕಡೂರು ತಾಲೂಕಿನ ಚಿಕ್ಕದೇವನೂರು ಬಳಿ ಬಸ್ ಪಲ್ಟಿಯಾಗಿ ಅಫಘಾತಕ್ಕೆ ಒಳಗಾಗಿ ಗಾಯಗೊಂಡಿರುವರ ಆರೋಗ್ಯ ವಿಚಾರಿಸಿ ಕಡೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ಯಾಕೇಜ್ ನೀಡಲು ಆಗ್ರಹ: ರಾಜ್ಯದ ಎಲ್ಲೆಡೆ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತೆಂಗಿನ ಮರಗಳು ರೋಗ ಪೀಡಿತವಾಗಿವೆ. ಈ ಹಿನ್ನೆಲೆಯಲ್ಲಿ ಗೋರಕ್ ಸಿಂಗ್ ತಂಡವು ರಾಜ್ಯದ ಪ್ರತೀ ತಾಲೂಕುಗಳಲ್ಲಿ ತೋಟಗಳ ಅಧ್ಯಯನ ನಡೆಸಿ ತೆಂಗು ಹಾಗು ಅಡಿಕೆ ಬೆಳೆಗಳ ನಷ್ಟದ ಪ್ರಮಾಣದ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಷ್ಟಕ್ಕೆ ಒಳಗಾಗಿರುವ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರವು ಕೇರಳ ರೈತರಿಗೆ ನೀಡಿರುವ ಪರಿಹಾರದ ರೀತಿಯಲ್ಲೇ ವಿಶೇಷ ಪ್ಯಾಕೇಜ್ ನೀಡಲು ಈಗಾಗಲೇ ಒತ್ತಾಯಿಸಲಾಗಿದೆ ಎಂದರು.
 ಇದೀಗ ಮತ್ತೆ ಕೇಂದ್ರ ಕೃಷಿ ಸಚಿವರಾದ ಶರದ್ ಪವಾರ್ ಅವರನ್ನು ಮುಂದಿನ ವಾರ ರಾಜ್ಯದ ಸಂಸದರೊಂದಿಗೆ ಭೇಟಿ ಮಾಡಿ ಶೀಘ್ರವೇ ಪರಿಹಾರದ ಜಾರಿಗೆ ಒತ್ತಾಯಿಸಲಾಗುವುದು ಎಂದರು.
ಗೂಡ್ಸ್‌ಶೆಡ್ ಸ್ಥಳಾಂತರ ಬೇಡ: ಕಡೂರು ರೈಲ್ವೆ ಗೂಡ್ಸ್‌ಶೆಡ್ಡನ್ನು ಬೇರೆಡೆಗೆ ಸ್ಥಳಾಂತರಿಸದೆ ತಾಲೂಕಿನ ಬಳ್ಳೇಕೆರೆಯಲ್ಲಿಯೇ ಉಳಿಸಿಕೊಡಬೇಕೆಂಬ ಲಾರಿ ಮಾಲೀಕರು ಹಾಗು ಚಾಲಕರು ಮಾಡಿರುವ ಮನವಿಗೆ ಉತ್ತರಿಸಿದ ಸಂಸದರು, ಫೆ. 23 ರಂದು ಕೇಂದ್ರದ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ  ಖರ್ಗೆಯವರು ಚಿಕ್ಕಮಗಳೂರು- ಸಕಲೇಶಪುರದ ನೂತನ ರೈಲ್ವೆ ನೂತನ ಮಾರ್ಗದ ಕಾಮಗಾರಿ, ಮಂಗಳೂರು ಮಡ್‌ಗಾವ್ ಮಾರ್ಗ ಮತ್ತು ಭಟ್ಕಳ ತಲ್ಲೂರು ಮಾರ್ಗದ ಶಂಕುಸ್ಥಾಪನೆಗೆ ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಅಂದು ಗೂಡ್ಸ್‌ಶೆಡ್ ಕುರಿತಂತೆ ಲಾರಿ ಮಾಲೀಕರು ಹಾಗು ಚಾಲಕರು ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.       
  ಅಡಕೆ ನಿಷೇಧದ ಕುರಿತು ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದ್ದಲ್ಲಿ ಅಡಕೆಯನ್ನು ನಿಷೇಧಿಸಬೇಕೆಂಬ ಯಾವುದೇ ಪದ ಪ್ರಯೋಗ ಮಾಡಿಲ್ಲ. ಆದರೆ ವಿರೋಧ ಪಕ್ಷಗಳು ಸುಖಾ ಸುಮ್ಮನೆ ತಮ್ಮ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಸಲ್ಲದ ಆರೋಪಗಳನ್ನು ಮಾಡುತ್ತಿವೆ.  ಯಾವ ಕಾರಣಕ್ಕೂ ಅಡಿಕೆನಿಷೇಧ ಮಾಡುವುದಿಲ್ಲ ಎಂದರು.
ನಾನೇ ಅಭ್ಯರ್ಥಿ: ತಮ್ಮ ಮುಂದಿನ ರಾಜಕಿಯದ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಗ್ಗೆಡೆ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ನಮ್ಮ ಪಕ್ಷದಲ್ಲಿ ಬೇರೆ ಯಾರೂ ಅಭ್ಯರ್ಥಿಯಾಗುವುದಿಲ್ಲ,  ಪಕ್ಷದಲ್ಲಿ ತಮ್ಮ ಸ್ಪರ್ಧೆಗೆ ಯಾವುದೇ ಗೊಂದಲ ಇಲ್ಲ ರ್ದರು.
 ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಎಸ್.ಆನಂದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಕಡೂರು ಬೀರೂರು ಬ್ಲಾಕ್ಕಾಂಗ್ರೆಸ್ ಅಧ್ಯಕ್ಷರು, ಪುರಸಭಾ ಸದಸ್ಯರಾದ ತೋಟದ ಮನೆ ಮೋಹನ್, ಎಂ.ಸೋಮಶೇಖರ್, ಕೋಳಿ ಲೋಕೇಶ್, ರೇಣುಕಾರಾಧ್ಯ, ಮುಖಂಡರಾದ ಎಂ.ರಾಜಪ್ಪ, ಬಳ್ಳೇಕೆರೆ ವಿಶ್ವನಾಥ್,ಖಾದರ್,ದೇವನೂರು ಅಶೋಕ್, ಬಾಸೂರು ಚಂದ್ರಮೌಳಿ,ಲಾರಿ ಮಾಲೀಕರ ಸಂಘಧ ಅಧ್ಯಕ್ಷ ಅನ್ವರ್,ಜಫ್ರುಲ್ಲಾ, ಪಕ್ಷದ ಕಾರ್ಯಕರ್ತರು ಮತ್ತಿತರರುಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.