ಅರಣ್ಯಕಾಯ್ದೆ ಬದಲಾಯ್ಸೋ ಶಕ್ತಿ ಸಂಸತ್ತಿಗಿಲ್ಲವೇ?
ಶೃಂಗೇರಿ: ಅರಣ್ಯ ಕಾಯ್ದೆಯಿಂದ ರೈತರಿಗೆ, ಸಣ್ಣ ಹಿಡುವಳಿದಾರರಿಗೆ ತೀರ ತೊಂದರೆಯಾಗುತ್ತಿದ್ದು, ಈ ಕಾಯ್ದೆ ಬದಲಾವಣೆ ಮಾಡು ಶಕ್ತಿ ಸಂಸತ್ತಿಗಿಲ್ಲವೇ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅವರು ಪಟ್ಟಣದ ತಾಲೂಕು ಕಚೇರಿ ಎದುರು ರೈತಪರ ಸಂಘಟನೆಗಳು ಕರೆ ನೀಡಿದ್ದ ಕ್ಷೇತ್ರ ಬಂದ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.
ಭೂಗಳ್ಳರಂತೆ ನೋಡದಿರಿ: ಕಂದಾಯ ಅಧಿಕಾರಿಗಳು ಸಣ್ಣ ಸಣ್ಣ ರೈತರನ್ನು ಪೊಲೀಸ್ ಬಲದ ಮೂಲಕ ಬಲವಂತವಾಗಿ ತೆರವುಗೊಳಿಸುತ್ತಿದ್ದಾರೆ. ಮೊದಲು ಬೆಂಗಳೂರು ಸುತ್ತಮುತ್ತಲೂ ಸಾವಿರಾರು ಎಕರೆ ಜಮೀನು ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಿ, ರೈತರು ಜೀವನೋಪಾಯಕ್ಕಾಗಿ ಒಂದೆರೆಡು ಎಕರೆ ಜಮೀನು ಒತ್ತುವರಿ ಮಾಡಿದ್ದಾರೆ.ಅವರನ್ನು ಭೂಗಳ್ಳರಂತೆ ನೋಡುವುದು ಬೇಡ. ಜೆಡಿಎಸ್ ಸರ್ಕಾರ ರೈತರಿಗೆ ಉತ್ತಮ ಸೌಲಭ್ಯ ನೀಡಿತ್ತು. ಈ ಭಾಗದಲ್ಲಿ 800 ಕೋಟಿಗೂ ಅಧಿಕ ಅಡಕೆ ಬೆಳೆ ನಾಶವಾಗಿದೆ. ಪರಿಹಾರ ಸಿಕ್ಕಿಲ್ಲ. ಜೆಡಿಎಸ್ ಸರ್ಕಾರ ರೈತರಿಗೆ ಸಬ್ಸಿಡಿ, ಗೊಬ್ಬರ ಇತ್ಯಾದಿ ರೀತಿ ಸೌಲಭ್ಯ ಕಲ್ಪಿಸಿತ್ತು ಎಂದರು.
ಶಾಸಕ ಸಿ.ಟಿ.ರವಿ. ಮಾತನಾಡಿ, ಮಲೆನಾಡಿಗರಿಗೆ ಬೆಂಕಿ, ಪ್ರಳಯ, ಭೂಕಂಪ ಒಟ್ಟೊಟ್ಟಿಗೆ ಕಾಡುತ್ತಿದೆ. ರೈತರ ಬದುಕಿಗೆ ಇಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಗೋರಕ್‌ಸಿಂಗ್ ವರದಿ ರೈತರ ಬದುಕಿಗೆ ಪುನಶ್ಟೇತನ ನೀಡಬಹುದೆಂಬ ಆಶಾಭಾವ ಹೊಂದಲಾಗಿತ್ತು ಎಂದರು.
ಆದರೆ ರೈತರ ದುರದೃಷ್ಟವೋ, ಸರ್ಕಾರಗಳ ಅಸಹಾಯಕತೆಯೋ ಅದು ಅನುಷ್ಠಾನಕ್ಕೆ ಬಂದಿಲ್ಲ. ಡಾ.ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿಗರು ಆತಂಕದಲ್ಲಿದ್ದಾರೆ. ಅವರ ಬದುಕಿಗೆ ಕೊಡಲಿಯೇಟು ಬೀಳುತ್ತಿದೆ. ವರದಿ ಭೂತವಾಗಿ ಕಾಡುತ್ತಿದೆ. ಲಾಭದ ಆಸೆಯಿಂದ ಯಾರೂ ಒತ್ತುವರಿ ಮಾಡಿಲ್ಲ. ರಾಷ್ಟ್ರೀಯ ಆದಾಯ ಹೆಚ್ಚಿಸುವ ಕೆಲಸ ಮಾಡಿದ್ದೇವೆ. ರೈತರನ್ನು ಭೂಗಳ್ಳರಿಗೆ ಹೋಲಿಸುವುದು ಬೇಡ ಅವರು ಅಂತಹ ಅಪರಾಧ ಮಾಡಿಲ್ಲ ಎಂದರು.
ಹಾನಿಕಾರವಲ್ಲ: ಅಡಕೆ ವಿಷಕಾರಿ, ಹಾನಿಕಾರಕ ವಸ್ತುವಲ್ಲ. ಅಡಕೆ ಬೆಳೆಗಾರರ ಸಮಸ್ಯೆಗೆ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಹೋರಾಡಬೇಕು. ರೈತರ ಸಾಲ 10 ಲಕ್ಷ ಕೋಟಿಯಾದರೆ, ಕೇಂದ್ರ ಸರ್ಕಾರದ ಹಗರಣದ ಮೊತ್ತ 18 ಲಕ್ಷ ಕೋಟಿ. ರೈತರ ಹೋರಾಟಕ್ಕೆ ಕೈಜೋಡಿಸಬೇಕು ಪಕ್ಷಾತೀತ ಹೋರಾಟ ಅನಿವಾರ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

