ಹಣ ವಸೂಲಿ ಮಾಡುತ್ತಿದ್ದವರಿಗೆ ಗ್ರಾಮಸ್ಥರಿಂದ ಗೂಸಾ
ಮೂಡಿಗೆರೆ: ಗ್ಯಾಸ್ ಸೇರಿದಂತೆ ಇನ್ನಿತರ ಸರ್ಕಾರಿ ಕಚೇರಿ ಮತ್ತು ಬ್ಯಾಂಕಿಗೆ ಅನುಕೂಲವಾಗಲೆಂದು ಕೇಂದ್ರಸರ್ಕಾರ ಉಚಿತವಾಗಿ ಆಧಾರ್ ಕಾರ್ಡ್ ಹಂಚುತ್ತಿದ್ದರೆ. ತಾಲೂಕಿನ ತ್ರಿಪುರ ಗ್ರಾಪಂನಲ್ಲಿ ಒಬ್ಬೊಬ್ಬರಿಂದ ರು. 20 ವಸೂಲಿ ಮಾಡುತ್ತಿದ್ದ ಸಿಬ್ಬಂದಿಗೆ ಗ್ರಾಮಸ್ಥರೇ ಗೂಸಾ ಕೊಟ್ಟ ಘಟನೆ ಶನಿವಾರ ವರದಿಯಾಗಿದೆ.
ತಾಲೂಕಿನ ತ್ರಿಪುರ ಗ್ರಾಪಂನಲ್ಲಿ ಕಳೆದ 2 ದಿನಗಳಿಮದ ಪಿನೋ ಕಂಪೆನಿಯ ವತಿಯಿಂದ ಆಧಾರ್ ಕಾರ್ಡ್ಗಳನ್ನು ತೆಗೆಯಲು ಆಂಧ್ರದ ಅಚ್ಚೀರೆಡ್ಡಿ ಎಂಬುವವರು ಗುತ್ತಿಗೆ ವಹಿಸಿಕೊಂಡಿದ್ದರು.
ಆಧಾರ್ ಕಾರ್ಡ್ಗೆ ಫೋಟೋ ತೆಗೆಯಲು ಬಂದ ಸಿಬ್ಬಂದಿ ಅಂಗಡಿ ಶೇಖರ ಮತ್ತು ಸ್ವಾಮಿ ಎಂಬುವವರು ಗ್ರಾಮಸ್ಥರಿಂದ ತಲಾ ಇಪ್ಪತ್ತನ್ನು ನೀಡಿದಲ್ಲಿ ಕಾರ್ಡ್ ನೀಡುವುದಾಗಿ ತಿಳಿಸಿ, ಬಲಾತ್ಕಾರವಾಗಿ ಹಣ ವಸೂಲಿ ಮಾಡುತ್ತಿದ್ದರೆನ್ನಲಾಗಿದೆ.
ಶನಿವಾರ ಹಣ ವಸೂಲಿಯಲ್ಲಿ ತೊಡಗಿದ್ದಾಗ ಕೆಲವು ಗ್ರಾಮಸ್ಥರು ಸರ್ಕಾರ ಸಂಬಳ ನೀಡುತ್ತಿದ್ದರೂ, ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದುದ್ದರ ಬಗ್ಗೆ ಕೇಳಿದಾಗ ಉಡಾಫೆ ಉತ್ತರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಿಬ್ಬಂದಿಗೆ ಗೂಸಾ ನೀಡಿ, ಕೆಲವು ಗಂಟೆಗಳ ಕಾಲ ಗ್ರಾಪಂನಲ್ಲಿ ಕೂಡಿ ಹಾಕಿದರು. ನಂತರ ಬಣಕಲ್ ಪೊಲೀಸರು ಆಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಗ್ರಾಮಸ್ಥರಿಂದ ಪಡೆದ ಹಣವನ್ನು ಹಿಂದಕ್ಕೆ ಕೊಡಿಸಿ ಮುಂದಿನ ದಿನಗಳಲ್ಲಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದರೆ ಶಿಸ್ತಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದಭಂದಲ್ಲಿ ಸುಧಾಕರ್, ಭರತ್ ಸೇರಿದಂತೆ ಗ್ರಾಮಸ್ಥರನೇಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

