ಚಿಕ್ಕಮಗಳೂರು

ಕಾಮಗಾರಿ ಅನುಮೋದನೆಗೆ ಒತ್ತಾಯಿಸಿ ಏಕಾಂಗಿ ಧರಣಿ

Published On :

ಕ.ಪ್ರ.ವಾರ್ತೆ  ಮೂಡಿಗೆರೆ  ಫೆ.17
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯಿತಿ ಕಾಮಗಾರಿಯನ್ನು ಎಂಜಿಎನ್ ಆರ್‌ಜಿಎನಲ್ಲಿ ಕೈಗೆತ್ತಿಕೊಳ್ಳುವಂತೆ ಅನುಷ್ಠಾನಗೊಳಿಸಿದ್ದು, ತಕ್ಷಣವೇ ಕಾಮಗಾರಿಗೆ ಅನುಮೋದನೆ ನೀಡುವಂತೆ ಒತ್ತಾಯಿಸಿ ಬಣಕಲ್ ಕ್ಷೇತ್ರದ ದೇವರಾಜ್ ಸಬ್ಲಿ ಒಬ್ಬಂಟಿಯಾಗಿ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ.
2013- 14ನೇ ಸಾಲಿನಲ್ಲಿ ಬಣಕಲ್ ಗ್ರಾಪಂ ಸಬ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ನಿರ್ಮಾಣಕ್ಕೆ ಕಾಮಗಾರಿ ಅನುಮೋದನೆ ಮಾಡಿದ್ದು. ನಂತರ ಬಣಕಲ್ ಗ್ರಾಪಂನ ಸಬ್ಲಿ ಹಿಂದೂ ಸ್ಮಶಾನದ ರಸ್ತೆ ಅಭಿವೃದ್ಧಿಗೆ 60 ಲಕ್ಷದ ಕಾಮಗಾರಿಯನ್ನು ಬದಲಾವಣೆ ಮಾಡಿದ್ದರು. ನಂತರ ಬದಲಾವಣೆ ಪಟ್ಟಿಯನ್ನು ತಾಪಂ ಮೂಲಕ ಜಿಪಂಗೆ ಕಳುಹಿಸಿದಾಗ ತಾಪಂ ಕಾಮಗಾರಿಯನ್ನು ಎಂಜಿಎನ್ ಆರ್‌ಜಿಎ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವಂತೆ ಅನುಷ್ಟಾನಗೊಳಿಸಿದ್ದು ಸರಿಯಲ್ಲ.
 ತಾಪಂ ಕಾಮಗಾರಿಯನ್ನು ಉದ್ಯೋಗ ಖಾತ್ರಿಯಲ್ಲಿ ಮಾಡಲು ಬರುವುದಿಲ್ಲ. ಉದ್ಯೋಗ ಖಾತ್ರಿ ಗ್ರಾಮ ಪಂಚಾಯಿತಿ ಮಾತ್ರ ಮೀಸಲು ಎಂಬುದನ್ನು ಮರೆತಿದ್ದಾರೆ. ತಮ್ಮ ಕೇತ್ರಕ್ಕೆ ಅನುಮೋದನೆ ನೀಡುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪಟ್ಟುಹಿಡಿದು ಕುಳಿತುಕೊಂಡರು.
ಸ್ಥಳಕ್ಕೆ ತಾಪಂ ಸದಸ್ಯ ಮಾಜಿ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್, ಸುಧಾ, ಎ.ಜೆ. ಸುಬ್ರಾಯಗೌಡ ಮತ್ತು ಜಿಪಂ ಸದಸ್ಯ ಎಂ.ಎಸ್. ಅನಂತು ಆಗಮಿಸಿ ರಂಜನ್ ಅಜಿತ್‌ಕುಮಾರ್ ತಾಲೂಕು ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒಂದು ದಿನದಲ್ಲಿ ಅನುಮೋದನೆಯನ್ನು ಕೊಡಿಸದೇ ಇದ್ದಲ್ಲಿ ತಾಪಂ ಸದಸ್ಯರು ಮತ್ತು ಜಿಪಂ ಸದಸ್ಯರು ತಾ.ಪಂ ಕಚೇರಿ ಎದುರು ಶಾಮೀಯಾನ ಹಾಕಿ ನಿರಂತರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಆಗ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಅವರು 18ನೇ ಮಂಗಳವಾರ ಮಧ್ಯಾಹ್ನದೊಳಗೆ ಅನುಮೋದನೆ ಪತ್ರವನ್ನು ಸದಸ್ಯ ದೇವರಾಜ್ ಸಬ್ಲಿ ಅವರಿಗೆ ತಲುಪಿಸುವ ಭರವಸೆ ನೀಡಿದ ನಂತರ ಧರಣಿಯನ್ನು ಕೈಬಿಟ್ಟರು.
ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸಿದ ದೇವರಾಜ್ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮಾತಿಗೆ ಬೆಲೆ ಕೊಟ್ಟು ತನ್ನ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತಿರುವುದಾಗ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.