'ಗೃಹರಕ್ಷಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ'
ಕನ್ನಡಪ್ರಭ ವಾರ್ತೆ, ಕೊಪ್ಪ, ಫೆ.16
ಗೃಹರಕ್ಷಕದಳ ಮಲೆನಾಡು ಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ಅಲ್ಪ ವೇತನದಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕೆಂದು ಗೃಹರಕ್ಷಕದಳದ ಕಮಾಡೆಂಟ್ ಫಣಿರಾಜ್ ಹೇಳಿದರು.
ಪಟ್ಟಣ ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿರುವ ರಂಗಮಂದಿರದಲ್ಲಿ ಭಾನುವಾರ ಗೃಹರಕ್ಷಕ ದಳದ ಕಚೇರಿ ಉದ್ಘಾಟಿಸಿ ಮಾತನಾಡಿ, ಗೃಹರಕ್ಷಕರ ಸೇವೆ ಕೇವಲ ಹಬ್ಬ- ಹರಿದಿನಗಳಿಗೆ ಮಾತ್ರ ಸೀಮಿತವಾಗಿದ್ದು, ಇಂದು ವಿಸ್ತರಿಸಪಟ್ಟಿದೆ.
ಅಗ್ನಿಶಾಮಕ ಹಾಗೂ ಜೈಲು ಸೇವೆಯಲ್ಲಿ ದಳದ ಕಾರ್ಯವ್ಯಾಪಿಸಿದೆ. ರಾಷ್ಟ್ರೀಯ ವಿಪತ್ತು ಕಾರ್ಯಪಡೆಯಲ್ಲಿ ಶೇ. 25ರಷ್ಟು ಗೃಹರಕ್ಷಕದಳದ ಸೇವೆ ಪಡೆದುಕೊಳ್ಳುವ ನಿರ್ಣಯಕ್ಕೆ ಬರಲಾಗಿದೆ.
ಶೃಂಗೇರಿಯಲ್ಲಿ ಗೃಹರಕ್ಷಕದಳ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗಿದೆ. ಗೃಹರಕ್ಷಕರ ಸಮವಸ್ತ್ರ,ದಾಖಲೆಗಳನ್ನು ಕರ್ತವ್ಯದ ವೇಳೆ ಜೋಪಾನವಾಗಿಡಲು ಕಚೇರಿಗಳು ಸಹಾಯಕವೆಂದರು.
ಚಿಕ್ಕಮಗಳೂರು ನ್ಯಾಯವಾದಿ ಭರತ್, ಎಎಸ್ಐ ಜಯಕರ್, ನಂಜುಂಡಪ್ಪ,ಅಗ್ನಿಶಾಮಕದಳದ ನಟೇಶ್, ವೆಂಕಟೇಶ್, ಶಿವಪ್ಪ, ಮೊಹಮ್ಮದ್, ವೀರಭದ್ರಪ್ಪ, ಪತ್ರಕರ್ತ ಜಲಂಧರ್ ಮೊದಲಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

