ಬಾಲಕನಿಗೆ ಲಾರಿ ಡಿಕ್ಕಿ: ಗ್ರಾಮಸ್ಥರ ಆಕ್ರೋಶ
ಮೂಡಿಗೆರೆ: ಅಂಗಡಿಯಿಂದ ಹಾಲು ತರಲೆಂದು ರಸ್ತೆ ಬದಿಯಲ್ಲಿ ಬರುತ್ತಿದ್ದ ಬಾಲಕನಿಗೆ, ಮಂಗಳೂರಿನಿಂದ ಚಿಕ್ಕಮಗ ಳೂರಿಗೆ ಹೋಗುತ್ತಿದ್ದ ಹಣ್ಣಿನ ಲಾರಿ ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ, ಬಾಲಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ಹೊರಟ್ಟಿ ಎಂಬಲ್ಲಿ ನಡೆದಿದೆ.
ಆದಿತ್ಯ (13) ಮೃತಪಟ್ಟ ಬಾಲಕ. ಹೊರಟ್ಟಿ ಪಾರ್ವತೇಶ್ವರ ದೇವಾಲಯದ ಪ್ರಧಾನ ಅರ್ಚಕ ಶಂಕರ ಕಣರಾಯಿ ಮತ್ತು ಟಿ.ಎಸ್. ಅನುರಾಧ ದಂಪತಿಯ ದ್ವಿತೀಯ ಪುತ್ರ. ಬಣಕಲ್ ವಿದ್ಯಾಭಾರತಿ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿ.
ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಮನೆಯಿಂದ ಅಂಗಡಿಗೆ ಹೊರಡುವಾಗ ಲಾರಿ ಬಾಲಕನಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಹೋಯಿತು. ರಸ್ತೆ ಬದಿಯ ಹೊಟೇಲ್ ಮತ್ತು ಅಂಗಡಿಯಲ್ಲಿದ್ದ ಸಾರ್ವಜನಿಕರು ಲಾರಿಯನ್ನು ಬೆನ್ನಟ್ಟಿದರು. ಚಾಲಕ ಮತ್ತು ಕ್ಲೀನರ್ ಲಾರಿನಿಲ್ಲಿಸಿ ಪರಾರಿಯಾಗಿದರು.
ಹೊರಟ್ಟಿ ಬಂದ್: ವಾಹನಗಳನ್ನು ಮನಬಂದಂತೆ ಚಾಲನೆ ಮಾಡುವ ಚಾಲಕರ ಕ್ರಮದ ವಿರುದ್ಧ ಸ್ಥಳೀಯ ಗ್ರಾಮಸ್ಥರು ಆಕ್ರೋಶಗೊಂಡರು. ಅಂಗಡಿ ಮುಂಗಟ್ಟುಗಳ ವರ್ತಕರು ಸ್ವಯಂ ಪ್ರೇರತರಾಗಿ ವ್ಯವಹಾರ ಸ್ಥಗಿತಗೊಳಿಸಿ ಹೊರಟ್ಟಿ ಬಂದ್ ಆಚರಿಸಿ, ಮೃತ ಬಾಲಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ವಿದ್ಯಾಭಾರತಿ ಶಾಲೆಗೆ ರಜೆ ಘೋಷಿಸಲಾಗಿತ್ತು.
ಮನವಿ: ಲಾರಿ ಅಫಘಾತಕ್ಕೆ ಬಾಲಕ ಬಲಿಯಾದ ಸುದ್ದಿಯಿಂದ ಗ್ರಾಮಸ್ಥರು ಪ್ರತಿಭಟನೆಗೆ ಸಜ್ಜಾಗಿರುವ ಸುದ್ದಿ ತಿಳಿದು ವೃತ್ತ ನಿರೀಕ್ಷಕ ಎಸ್.ಎಸ್. ಹಿರೇಮಠ್ ಸ್ಥಳಕ್ಕೆ ಆಗಮಿಸಿದರು.
ಪ್ರತಿಭಟನಾಕಾರರು ರಸ್ತೆಯಲ್ಲಿ ಹಂಪುಗಳು, ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಲು ಮನವಿ ಸಲ್ಲಿಸಿದರು. ಗ್ರಾಮಸ್ಥರ ಮನವಿ ಸ್ವೀಕರಿಸಿದ ಹಿರೇಮಠ್ ಅವರು ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

