ಚಿಕ್ಕಮಗಳೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ. ವಾರ್ತೆ, ಕೊಪ್ಪ, ಫೆ.20
ಅಖಿಲ ಭಾರತ ಅಂಚೆ ಗ್ರಾಮೀಣ ನೌಕರರ ಸಂಘದ ಅನಿರ್ಧಿಷ್ಟಾಧಿ ಮುಷ್ಕರದ ಕರೆ ಹಿನ್ನೆಲೆಯಲ್ಲಿ ಇಲ್ಲಿನ ಅಂಚೆ ಕಚೇರಿ ಎದುರು ಶೃಂಗೇರಿ, ಕೊಪ್ಪ, ನ.ರಾ.ಪುರ ತಾಲೂಕಿನ ಅಂಚೆ ನೌಕರರು ಗುರುವಾರ ಪತ್ರಿಭಟನಾ ಧರಣಿ ನಡೆಸಿದರು.
ಗ್ರಾಮೀಣ ಅಂಚೆ ನೌಕರರನ್ನು ಇಲಾಖೆ ನೌಕರರೆಂದು ಪರಿಗಣಿಸದೆ ಇಲಾಖೆಯ ಎಲ್ಲಾ ಕೆಲಸಗಳನ್ನು ಅವಧಿ ಮೀರಿ ದುಡಿಸಿಕೊಳ್ಳುವುದಲ್ಲದೆ ಯಾವುದೇ ನೌಕರರ ಸೇವಾ ಸೌಲತ್ತು ನೀಡುತ್ತಿಲ್ಲ.
ಗ್ರಾಮೀಣ ಅಂಚೆ ನೌಕರರು ಹಲವು ದಶಗಳಿಂದ ಖಾಯಂಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ವೇತನ ತಾರತಮ್ಯದ ಜೊತೆಗೆ ಸೇವಾ ಭದ್ರತೆ, ಪಿಂಚಣಿ ಯಾವ ಸೌಲಭ್ಯವಿಲ್ಲದೇ ಸೇವೆ ಹಿರಿತನಕ್ಕೂ ಬೆಲೆಯಿಲ್ಲದೆ ಇಲಾಖೆಯ ಶೇ.80 ರಷ್ಟು ನೌಕರರು ಕಾರ್ಯನಿರ್ವಹಿಸುತ್ತಿತ್ತಾರೆ ಎಂದು ಆರೋಪಿಸಿದರು.
ಗ್ರಾಮೀಣ ಅಂಚೆ ನೌಕರರನ್ನು ಪೌರ ನೌಕರ ಎಂದು ಪರಿಗಣಿಸಿ, ಅಂಚೆ ನೌಕರರ ಎಲ್ಲಾ ಸೌಲಭ್ಯ ನೀಡಬೇಕು, ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಗ್ರಾಮೀಣ ಅಂಚೆ ನೌಕರರನ್ನು ಒಳಪಡಿಸಬೇಕು, ಅನುಕಂಪದ ಆಧಾರದ ನೌಕರಿಯ ಸೌಲಭ್ಯ ನೀಡುವುದು, ಸೇವಾ ಹಿರಿತನವನ್ನು ಅರ್ಹತೆ ಎಂದು ಪರಿಗಣಿಸಿ ಇಲಾಖಾ ನೌಕರರಾಗಿ ಭಡ್ತಿ ನೀಡುವಂತೆ ಒತ್ತಾಯಿಸಿದರು.
ಅಂಚೆ ನೌಕರ ಸಂಘದ ರವಿ ಮಾತನಾಡಿ, ದೇಶದ 1.55 ಲಕ್ಷ ಅಂಚೆ ಕಚೇರಿಯಲ್ಲಿ 1.28 ಲಕ್ಷ ಗ್ರಾಮೀಣ ಅಂಚೆ ಸೇವೆ ಇದೆ. 5 ಲಕ್ಷ ನೌಕರರಲ್ಲಿ 2.85 ಲಕ್ಷ ಗ್ರಾಮೀಣ  ಅಂಚೆ ನೌಕರರು ಸೇವೆ ಸಲ್ಲಿಸುತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಗ್ರಾಮೀಣ ಅಂಚೆ ನೌಕರ ಸಂಘದ ಉಪಾಧ್ಯಕ್ಷ ರಫೀಕ್, ಸಹಕಾರ್ಯದರ್ಶಿ ರಾಜೇಶ್, ಅನ್ನಪೂರ್ಣ ನಾರ್ವೆ, ಅದ್ದಡ ಸುಜಾತ, ಹೇರೂರು ಶೇಖರ್ ಮೊದಲಾದವರು ಪಾಲ್ಗೊಂಡಿದ್ದರು.

ಗ್ರಾಮೀಣ ಅಂಚೆ ನೌಕರರ ಮುಷ್ಕರ
ತರೀಕೆರೆ: ಅಖಿಲ ಭಾರತ ಅಂಚೆ ಗ್ರಾಮೀಣ ನೌಕರರ ಸಂಘ ಚಿಕ್ಕಮಗಳೂರು ವಿಭಾಗ ತರೀಕೆರೆ ವತಿಯಿಂದ ಪಟ್ಟಣದ ಅಂಚೆ ಕಚೇರಿ ಅವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು.
ಎಐಜಿಡಿಎಸ್‌ಯು ಸಂಘದ ರಾಜ್ಯ ಸಂಚಾಲಕ ಸಿ. ಶಿವಶಂಕರ್, ಟಿ. ಹನುಮಂತಪ್ಪ, ಎಚ್.ಎಂ. ನಾಗರಾಜ, ಟಿ.ಎಸ್. ಬಸವರಾಜ್, ಕಂಪಯ್ಯ ಲಿಂಗದಹಳ್ಳಿ, ಆರ್. ವಾಸುದೇವರಾವ್, ಟಿ.ವಿ. ನಾಗರಾಜು, ಎನ್.ಎಚ್. ರವಿಕುಮಾರ್, ಎನ್.ಎಚ್. ಪರಮೇಶ್ರರಪ್ಪ, ಸಂಘದ ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.