ಚಿಕ್ಕಮಗಳೂರು

'ಹಿರಿಯ ನಾಗರಿಕರಿಗೆ ಹಕ್ಕುಗಳ ಜಾಗೃತಿ ಅಗತ್ಯ'

Published On :

ತರೀಕೆರೆ: ಹಿರಿಯ ನಾಗರಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾ. ಹಿದಾಯತ್‌ವುಲ್ಲಾ  ಷರೀಫ್ ತಿಳಿಸಿದ್ದಾರೆ.
ಸಮೀಪದ ಕಣಬಗಟ್ಟೆ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜನಚಿಂತನ ಸಂಸ್ಥೆ, ಬುಕ್ಕಾಂಬುದಿ ಗ್ರಾಮ ಜಲಾನಯನ ಸಮಿತಿ, ನಬಾರ್ಡ್ ವತಿಯಿಂದ ಏರ್ಪಡಿಸಲಾಗಿದ್ದ ಹಿರಿಯ ನಾಗರಿಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪಾಶ್ಚಾತ್ಯೀಕರಣ, ಆಧುನೀಕರಣದ ಹೆಸರಿನಲ್ಲಿ ಎಲ್ಲವೂ ವ್ಯಾಪಾರೀಕರಣದಿಂದಾಗಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹಿರಿಯ ನಾಗರಿಕರು ಇಂದು ಆರ್ಥಿಕ, ಆರೋಗ್ಯ ಮಾನಸಿಕ ಸಮಸ್ಯೆಗಳಲ್ಲಿ ಸಿಲುಕಿದ್ದು, ಅವರಿಗಾಗಿ ಕಾನೂನಿನಲ್ಲಿರುವ ಹಕ್ಕುಗಳ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿದ್ದು, ಆವರಿಗೆ ಜಾಗೃತಿ ಅಗತ್ಯವಿದೆ ಎಂದು ಅವರು ತಿಳಿಸಿದರು.
ಅರ್ಹ ಹಿರಿಯ ನಾಗರಿಕರು ತಮ್ಮ ಹಕ್ಕುಗಳಿಗಾಗಿ ಉಚಿತ ಕಾನೂನು ನೆರವು, ಲೀಗಲ್ ಕ್ಲಿನಿಕ್ ಸಹಾಯ, ಲೋಕ ಅದಾಲತ್ ಮೂಲಕ ನ್ಯಾಯ ಪಡೆಯಲು ಅವಕಾಶವಿರುವುದಾಗಿ ತಿಳಿಸಿದರು.
ವಕೀಲರಾದ ಕೆ. ಲಿಂಗರಾಜು ಹಿರಿಯ ನಾಗರಿಕರಿಗಾಗಿ ಇರುವ ಕಾನೂನುಗಳ ಬಗ್ಗೆ, ಎಂ.ಕೆ. ತೇಜಮೂರ್ತಿ ಮಾಹಿತಿ ಹಕ್ಕು ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಉಪನ್ಯಾಸ ಮಾಡಿದರು. ಗ್ರಾಪಂ ಸದಸ್ಯೆ ಸುಧಾ ಸುರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್, ವಕೀಲರಾದ ಎಸ್. ಸುರೇಶ್ ಚಂದ್ರ, ಬಸವರಾಜ್, ಮಮತ ಮಾತನಾಡಿದರು. ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್. ವೀರಭದ್ರಪ್ಪ, ಹಿರಿಯ ನಾಗರಿಕರಾದ ಕೆ.ಎಂ. ರಾಜಪ್ಪ, ಜಯ್ಯಮ್ಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.