ಚಿಕ್ಕಮಗಳೂರು

ಮಾರ್ಚ್‌ನಿಂದ ಕಡೂರು- ಬೀರೂರಿಗೆ ಭದ್ರೆ ನೀರು

Published On :

ಕ.ಪ್ರ.ವಾರ್ತೆ ,  ಕಡೂರು ,  ಫೆ. 24
ಭದ್ರಾ ಡ್ಯಾಂನಿಂದ ಕಡೂರು ಹಾಗು ಬೀರೂರು ಪಟ್ಟಣಕ್ಕೆ ನೀರೊದಗಿಸುವ ಕಾಮಗಾರಿ ಶೇ. 98ರಷ್ಟು ಮುಗಿದಿದ್ದು ಶೀಘ್ರದಲ್ಲೇ ಎರಡೂ ಪಟ್ಟಣಗಳಿಗೆ ಶುದ್ದ ಕುಡಿಯುವ ನೀರು ಸಿಗಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ರೋಟರಿ ಕ್ಲಬ್ ಸಹಯೋಗದಿಂದ ಪಟ್ಟಣದ ಅಂಬಿಕಾ ಗ್ರೂಪ್ಸ್‌ನ ಎಂ.ಬಿ. ಸಜ್ಜನ್ ಜೈನ್ ಸ್ಮರಣಾರ್ಥ ಗೌತಮ್ ಮೆಹ್ತಾ ಸಹೋದರರು ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ಅವಳಿ ಪಟ್ಟಣ ಸೇರಿದಂತೆ ಮಾರ್ಗ ಮಧ್ಯದ 34 ಗ್ರಾಮಗಳಿಗೆ ನೀರು ಹರಿಯಲಿದೆ ಎಂದರು.  
ಕಡೂರು ಪ್ರವಾಸಿ ಮಂದಿರವನ್ನು ಬೇರೆಡೆಗೆ ಸ್ಥಳಾಂತರಿಸಿ ಅಲ್ಲಿ 7 ಕೋಟಿರೂ ವೆಚ್ಚದ ತಾಯಿ ಮಕ್ಕಳ ಆಸ್ಪತ್ರೆ ತರಲು ಆಲೋಚಿಸಲಾಗುತ್ತಿದೆ. ಅಲ್ಲದೆ ಕಡೂರು ಪಟ್ಟಣದಲ್ಲಿ 20 ಕೋಟಿ ರು. ವೆಚ್ಚದಲ್ಲಿ ಕೆ.ಎಂ.ಎಫ್. ನಿಂದ ಪ್ಯಾಕಿಂಗ್ ಘಟಕ ಆರಂಭಿಸಲು ಕೆಎಂಎಫ್ ಅಧ್ಯಕ್ಷ ಹೆಚ್.ಡಿ.ರೇವಣ್ಣ ನಿರ್ಧರಿಸಿದ್ದು ಶೀಘ್ರದಲೇ ಜಾಗ ಪಡೆದು ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.  
ಮಾಜಿ ಶಾಸಕ ಡಾ ವೈ.ಸಿ.ವಿಶ್ವನಾಥ್ ಮಾತನಾಡಿ, ಜೈನ ಸಮುದಾಯವು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸರ್ಕಾರವೇ ಎಲ್ಲವನ್ನೂ ಮಾಡಲು ಸಾದ್ಯವಿಲ್ಲ. ಎಲ್ಲ ಸಮುದಾಯಗಳೂ ಒಟ್ಟಾಗಿ ಸೇರಿ ಇಂತಹ ಹಲವಾರು ಸಾರ್ವಜನಿಕ ಕ್ಷೇತ್ರಕ್ಕೆ  ಉಪಯೋಗಿ ಕೊಡುಗೆ ನೀಡಿದರೆ ಅಂತಹ ಕಾರ್ಯವನ್ನು ಜನತೆ ಎಂದಿಗೂ ಮರೆಯುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅಂಬಿಕಾ ಗ್ರೂಪ್ಸ್‌ನ ಗೌತಮ್ ಎಸ್. ಮೆಹ್ತಾ ಮತ್ತು ಸಹೋದರರನ್ನು ಕಾಲೇಜಿನ ಪರವಾಗಿ ಪ್ರಾಚಾರ್ಯ ರಾಜಕುಮಾರ್ ಕಂಗ್ಲಾಪುರ್ ಗೌರವಿಸಿದರು.
 ಕಾರ್ಯಕ್ರಮದಲ್ಲಿ  ಫ್ರೌಢಶಾಲೆಯ ಪ್ರಾಂಶುಪಾಲರಾದ ಎ.ಎನ್. ಶೀಲಾ, ರೋಟರಿ ಅಧ್ಯಕ್ಷ ಶಿವಾನಂದಯ್ಯ,ಕಾರ್ಯದರ್ಶಿ ಹರೀಶ್,  ಬೀರೂರು ನಾಗರಾಜ್, ಉಪನ್ಯಾಸಕರಾದ ಕೆಂಪ ಸಿದ್ದಯ್ಯ, ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.