ಚಿಕ್ಕಮಗಳೂರು

ಬಾಂಗ್ಲಾ ನುಸುಳುಕೋರರನ್ನು ಹೊರಹಾಕಿ

Published On :

ಚಿಕ್ಕಮಗಳೂರು: ದೇಶದೊಳಗೆ ನುಸುಳಿರುವ ಬಾಂಗ್ಲಾದೇಶಿಗರನ್ನು ಕೂಡಲೇ ದೇಶದಿಂದ ಹೊರ ಹಾಕುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಧರಣಿ ನಡೆಸಿದರು.
ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ನಿರಂತರವಾಗಿ ಭಾರತಕ್ಕೆ ಬರುತ್ತಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಹಾಗೂ ಆಂತರಿಕ ಭದ್ರತೆಗೆ ಅಪಾಯ ತರುತ್ತಿದ್ದಾರೆ. ಅಸ್ಸಾಂನಿಂದ ಪ್ರಾರಂಭವಾದ ಈ ಕಳ್ಳ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿತಿ ತಂದಿದೆ. ಆಯಾ ರಾಜ್ಯಗಳಲ್ಲಿ ನುಸುಳುಕೋರರಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಸೇರಿಕೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.
ನಿರಂತರ ದೌರ್ಜನ್ಯ: ಒಂದೆಡೆ ಕಳ್ಳ ನುಸುಳುವಿಕೆ ಗಂಭೀರ ಅಪಾಯವನ್ನು ತಂದೊಡ್ಡಿದ್ದರೆ ಇನ್ನೊಂದೆಡೆ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದೆ. ಹಿಂದು ಮಂದಿರಗಳನ್ನು ಒಡೆದು ಹಾಕುವುದು, ಮಹಿಳೆಯರ ಮೇಲೆ ಅತ್ಯಾಚಾರ, ಸಂಪತ್ತನ್ನು ಲೂಟಿ ಮಾಡುವುದು ಈ ಕೃತ್ಯಗಳಿಂದ ಬಾಂಗ್ಲಾದೇಶದಿಂದ ಹಿಂದುಗಳು ಓಡಿ ಹೋಗುವ ವಾತಾವರಣ ನಿರ್ಮಾಣ ಮಾಡಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ರಕ್ಷಿಸಿ: ಭಾರತ ಸರ್ಕಾರವು ಸೂಕ್ತ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಬಾಂಗ್ಲಾದೇಶದ ಸರ್ಕಾರದ ಮೇಲೆ ಒತ್ತಡ ತಂದು ಹಿಂದುಗಳನ್ನು ಸುರಕ್ಷಿತರನ್ನಾಗಿ ಮಾಡಬೇಕು. ಬಾಂಗ್ಲಾದೇಶದ ಪರಿಸ್ಥಿತಿಯ ಕಾರಣದಿಂದಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬರುತ್ತಿರುವ ಹಿಂದುಗಳ ವಸತಿ ವ್ಯವಸ್ಥೆ ಭಾರತದಲ್ಲಿ ಆಗಬೇಕು. ಹಿಂದು ಶರಣಾರ್ಥಿ ಮತ್ತು ಬಾಂಗ್ಲಾ ದೇಶಿ ನುಸುಳುಕೋರರನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಗುರುತಿಸುವ ವ್ಯವಸ್ಥೆ ಆಗಬೇಕು. 1951ರ ನಂತರ ಭಾರತದೊಳಗೆ ಬಂದವರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ.
ಅಸ್ಸಾಂನಲ್ಲಿ ಡಿ ವೋಟರ್ ಹೆಸರಿನಲ್ಲಿ ಹೆಸರಿಸಿರುವ ವ್ಯಕ್ತಿಗಳನ್ನು ತಕ್ಷಣವೇ ದೇಶದಿಂದ ಹೊರಹಾಕಬೇಕು ಹಾಗೂ ಗಡಿ ಭದ್ರತಾ ಸೈನಿಕರಿಗೆ ಶಕ್ತಿ ತುಂಬಿ ಹೆಚ್ಚಿನ ಅಧಿಕಾರ ನೀಡಬೇಕು. ಗಡಿ ಜಿಲ್ಲೆಗಳನ್ನು ಭದ್ರಗೊಳಿಸಿ ಬಿಗಿ ಪಹರೆ ಹಾಕಬೇಕೆಂದು ಆಗ್ರಹಿಸಿದರು. ದತ್ತಪೀಠ ಸಂವರ್ಧನಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಪೈ, ವಿಎಚ್‌ಪಿ ಜಿಲ್ಲಾ ಖಜಾಂಚಿ ಯೋಗೀಶ್ ರಾಜ್ ಅರಸ್, ಖಾಂಡ್ಯ ಪ್ರವೀಣ್, ಪ್ರದೀಪ್ ಹಾಗೂ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.