ಅಂಬರೀಷ್ ಗುಣಮುಖರಾಗಲು ಪ್ರಾರ್ಥಿಸಿ ಪೂಜೆ
ಚಿಕ್ಕಮಗಳೂರು: ಹಿರಿಯ ಚಲನಚಿತ್ರ ನಟ ಹಾಗೂ ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬೇಗ ಗುಣಮುಖರಾಗಲಿ ಎಂದು ಶಕ್ತಿದೇವತೆ ಕಾಮಧೇನು ಗಣಪತಿ ದೇವಾಲಯದಲ್ಲಿ ರಾಜ್ಯ ರಕ್ಷಾ ಸೇನೆಯ ಕಾರ್ಯಕರ್ತರು ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.
ಸಂಕಷ್ಟಹರ ಗಣಪತಿಯಲ್ಲಿ ಅಂಬರೀಶ್ ಅವರ ಆರೋಗ್ಯ ಸುಧಾರಣೆಗೆ ಭಕ್ತಿಯಿಂದ ಬೇಡಲಾಯಿತು. ಅವರು ಬೇಗ ಗುಣಮುಖರಾಗಿ ಮತ್ತೆ ಕನ್ನಡ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕಾಮಧೇನು ಗಣಪತಿ ಆಶೀರ್ವದಿಸಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರಕ್ಷಾ ಸೇನೆಯ ರಾಜ್ಯಾಧ್ಯಕ್ಷ ಎಂ.ಆರ್. ಗಿರೀಶ್ ಮಾತನಾಡಿ, ಅಂಬರೀಶ್ ಅವರು ನಡೆದು ಬಂದ ಹಾದಿ ಮತ್ತು ಕನ್ನಡದ ಕೆಲಸಗಳಲ್ಲಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕರ್ನಾಟಕಕ್ಕೆ ತೊಂದರೆಯಾದರೆ ಮೊದಲು ಸಿಡಿದೆದ್ದು ಹೋರಾಟ ಮಾಡುವ ವ್ಯಕ್ತಿತ್ವ ಮಂಡ್ಯದ ಗಂಡಿನಲ್ಲಿದೆ. ಕಾವೇರಿ ಹೋರಾಟದಿಂದ ಹಿಡಿದು ಗೋಕಾಕ್ ಚಳವಳಿ ಇನ್ನೂ ಅನೇಕ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು ಎಂದರು.
ರಾಜ್ಯ ರಕ್ಷಾ ಸೇನೆಯ ರಾಜ್ಯ ಖಜಾಂಚಿ ಎಂ. ಓಂಕಾರಸ್ವಾಮಿ ಮತ್ತು ಕಾರ್ಯಕರ್ತರ ದೇವರಲ್ಲಿ ಪ್ರಾರ್ಥಿಸಿ ಅಂಬರೀಶ್ ಅವರು ಬೇಗ ಗುಣವಾಗಲೆಂದು ಆಶಿಸಿದರು.
ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ತಾ. ಅಧ್ಯಕ್ಷ ಸಿ.ಇ. ಚೇತನ್, ನಗರಾಧ್ಯಕ್ಷ ರಘು, ಕಾರ್ಯದರ್ಶಿ ಪರಮ್ ಸಕ್ಲೇಚಾ, ರುದ್ರಮುನಿ, ಪದಾಧಿಕಾರಿಗಳಾದ ಸುಹೀಲ್ ತಾಜ್, ಎ.ಆರ್. ರವಿಕುಮಾರ್, ಕೌಶಿಕ್, ಗಗನ್ ಹಾಗೂ ಕಾರ್ಯಕರ್ತರು ಹಾಜರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

