ಚಿಕ್ಕಮಗಳೂರು

ನಾಳೆಯಿಂದ ದುರ್ಗಾದೇವಿ ಪ್ರತಿಷ್ಠಾಪನೆ

Published On :

ಮೂಡಿಗೆರೆ: ತಾಲೂಕಿನ ಕಣಚೂರು ಗ್ರಾಮದ ಶ್ರೀರಾಮೇಶ್ವರ ಶ್ರೀಕಲ್ಲೇಶ್ವರ, ಶ್ರೀದುರ್ಗಾ ದೇವಸ್ಥಾನ ಸಮಿತಿ, ಗ್ರಾಮಸ್ಥರು ಹಾಗೂ ಭಕ್ತರ ಆಶ್ರಯದಲ್ಲಿ ಮಾ.2 ರಿಂದ ದುರ್ಗಾದೇವಿ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿನೋದ್ ತಿಳಿಸಿದ್ದಾರೆ.
ಮಾ.2ರಂದು ಬೆಳಗ್ಗೆ ಗಂಗಾಪೂಜೆ, ಗೋಪೂಜೆ, ಯೋಗಶಾಲಾ ಪ್ರವೇಶ, ಸಭಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ವಾಚನ, ದೇವನಾಂದಿ, ಪಂಚಗವ್ಯ ಮೇಳನ, ಸಂಜೆ. 5.30 ಗಂಟೆಗೆ ಕಳಸ ಸ್ಥಾಪನೆ, ಪ್ರಸಾದ ವಾಸ್ತುಪೂಜೆ, ಗಣಪತಿ ನವಗ್ರಹ, ಮೃತ್ಯುಂಜಯ ಪೂಜೆ, ದುರ್ಗಾಪೂಜೆ, ಮಂಡಲಪೂಜೆ ಇತ್ಯಾದಿ ಕಾರ್ಯಕ್ರಮವಿರುತ್ತದೆ.
ಮಾ.3 ರಂದು ಬೆಳಗ್ಗೆ ಕಳಸಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾಹೋಮ, ಬಲಿ ಪ್ರಧಾನ, ಮಹಾಪೂರ್ಣಾಹುತಿ, ತೀರ್ಥ-ಪ್ರಸಾದ ವಿನಿಯೋಗ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರಧಾನ ಅರ್ಚಕ ಬೆಂಗಳೂರಿನ ಎಸ್.ರಾಮಚಂದ್ರ ಜೋಯಿಸ್ ಕಾರ್ಯಕ್ರಮ ನೇತೃತ್ವ ವಹಿಸಲಿದ್ದಾರೆ.
2ನೇ ದಿನದ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರ ಹರಿಹರಪುರದ ಶ್ರೀಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಾಧೀಶ್ವರ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳಿಂದ ಆಶೀರ್ವಚನ ಏರ್ಪಡಿಸಲಾಗಿದೆ. ಭಕ್ತರು ಪಾಲ್ಗೊಳ್ಳಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.