'ಕನ್ನಡ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ'
ತರೀಕೆರೆ: ಕನ್ನಡ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ತಿಳಿಸಿದ್ದಾರೆ.
ಪಟ್ಟಣದ ಕೋಡಿಕ್ಯಾಂಪ್‌ನ ಓಂ ಯುವಕ ಸಂಘದ ವತಿಯಿಂದ ಓಂ ವೃತ್ತದಲ್ಲಿ ಏರ್ಪಾಡಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಈ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿದೆ. ಭಾಷೆಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವ ಕಾರ್ಯ ಸರ್ಕಾರಗಳಿಂದ ಆಗಬೇಕಿದೆ. ಭಾಷೆಗೆ ಪ್ರಥಮ ಆದ್ಯತೆ ನೀಡುವುದು ಅದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಸಾಪ ಘಟಕ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಮಾತನಾಡಿ, ಕನ್ನಡಕ್ಕೆ 2500 ವರ್ಷ ಇತಿಹಾಸವಿದೆ. ಕನ್ನಡ ಪದಗಳು ಗ್ರೀಕ್ ಮತ್ತು ರೋಮ್‌ನ ನಾಟಕಗಳಲ್ಲಿ ಅಡಕವಾಗಿದೆ. ಭಾಷೆಯ ಬೆಳವಣಿಗೆ ಆಗಬೇಕಾದರೆ ಇನ್ನಿತರ ಭಾಷೆಯ ಪದಗಳು ಅಗತ್ಯ. ಹಾಗಾಗಿ ಭಾಷೆ ಮಡಿವಂತಿಕೆ ಇರಕೂಡದು. ಆಂಗ್ಲ ಭಾಷೆಯ ಅರ್ಥಕೋಶದಲ್ಲಿ ಎಲ್ಲ ಭಾಷೆಯ ಪದಗಳು
ಒಳಗೊಂಡಿರುವ ಮೂಲಕ ಇಂದು ವಿಶ್ವದ ಶ್ರೀಮಂತ ಭಾಷೆಯಾಗಲು ಕಾರಣವಾಗಿದೆ. ಕನ್ನಡ ಶ್ರೀಮಂತಿಕೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಟಿ.ಜಿ. ಆಶೋಕ್‌ಕುಮಾರ್ ಮಾತನಾಡಿ, ಕನ್ನಡ ಅಂತಃಸತ್ವವನ್ನು ಮಕ್ಕಳಲ್ಲಿ ಮೂಡಿಸಬೇಕಿದೆ. ಕೇವಲ ಆಂಗ್ಲ ಭಾಷೆಯಿಂದಲೇ ಬದುಕು ಎಂಬ ಭ್ರಮೆ ದೂರ ಮಾಡುವ ಕೆಲಸ ಆಗಬೇಕು ಎಂದು ತಿಳಿಸಿದರು.
ವಿವಿಧ ಕ್ಷೇತ್ರದ ಗಣ್ಯರನ್ನು ಮಾಜಿ ಕುಸ್ತಿ ಪೈಲ್ವಾನರನ್ನು ಗೌರವಿಸಲಾಯಿತು. ಕುಸ್ತಿ ಪೈಲ್ವಾನ್ ವಗ್ಗಪ್ಪರ ಮಂಜಣ್ಣ, ಪುರಸಭಾ ಸದಸ್ಯರು, ಓಂ ಯುವಕ ಸಂಘದ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

