ಸ್ವಾವಲಂಬನೆ ಬದುಕು ಎಲ್ಲರಿಗೂ ಅಗತ್ಯ
ಕ.ಪ್ರ.ವಾರ್ತೆ ಕಡೂರು ಜ.5 ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸಿ ಸಮಾಜದಲ್ಲಿ ಮೇಲ್ಮುಖಿಯಾಗಿ ಬದುಕಬೇಕು ಎಂದು ಮಾನಸ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಂಚಾಲಕ ಕಡೂರು ದೇವೇಂದ್ರ ಹೇಳಿದರು.
ಅವರು ಕಡೂರು ಪಟ್ಟಣದ ಎಚ್.ಡಿ. ದೇವೇಗೌಡ ಬಡಾವಣೆಯಲ್ಲಿ ಮುತ್ತು ಮಾರಿಯಮ್ಮ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಾನಸ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಸಹಯೋಗದಲ್ಲಿ ಸ್ವ ಉದ್ಯೋಗದ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡುಗೆ ಮನೆಗೆ ಸೀಮಿತವಲ್ಲ: ಸಂಸಾರದಲ್ಲಿ ಗೃಹಿಣಿ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಸುತ್ತಮುತ್ತಲಿನ ಜನರ ಸ್ವಾವಲಂಬನೆ ಹಾದಿಗೆ ಬೆಳಕಾಗುವ ಮೂಲಕ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದರು.
ಸಂಸ್ಥೆ ಅಧ್ಯಕ್ಷರಾದ ಎಸ್.ಪಿ. ಜ್ಯೋತಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಇಂತಹ ಕಾರ್ಯಕ್ರಮ ನಡೆಯುವ ಮೂಲಕ ಜನರಿಗೆ ಅದರಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಂಡು ತಮ್ಮ ಕುಟುಂಬದ ಆರ್ಥಿಕ ಚೇತರಿಕೆ ಕಂಡುಕೊಳ್ಳುವ ಇಂತಹ ಕಾರ್ಯಕ್ರಮಗಳ ಅಗತ್ಯತೆ ಹೆಚ್ಚಿದೆ ಎಂದರು.
ಹೆಚ್ಚಿನ ಕಾರ್ಯಕ್ರಮ: ಧರ್ಮಸ್ಥಳ ಯೋಜನೆಯ ಸಮನ್ವಯಾಧಿಕಾರಿ ಶೋಭಾ ಮಾತನಾಡಿ, ಸಾಮಾಜಿಕ ಕೊಡುಗೆಯಾಗಿರುವ ಇಂತಹ ಶಿಬಿರ ಮುಂಬರುವ ದಿನಗಳಲ್ಲಿ ಮಾನಸ ಮಹಿಳಾ ಸ್ವ ಉದ್ಯೋಗ ಸಂಸ್ಥೆ ಸಹ ಯೋಗದಲ್ಲಿ ಇನೂ ಹೆಚ್ಚಿನ ಕಾರ್ಯಕ್ರಮ ಜರುಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾನಸ ಸಂಸ್ಥೆಯ ಸದಸ್ಯ ದೇವನೂರು ಎಸ್.ರಾಜು ಮಾತನಾಡಿದರು. ಶಿಬಿರದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ವಿಮಾ ವಿಭಾಗದ ಲತಾ ಅಮೀನಾ, ಮೇಲ್ವಿಚಾರಕಿ ಲತಾ, ಸಂಸ್ಥೆಯ ಸದಸ್ಯ ಕೆ.ಜೆ. ರಾಮಪ್ರಸಾದ್, ಕುಮಾರಿ ಡಿ. ಮೀನಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

