ಚಿಕ್ಕಮಗಳೂರು

ಇಂದು ಅನ್ನಭಾಗ್ಯ ಹಮಾಲಿಗಳಿಂದ ಕೆಲಸ ಸ್ಥಗಿತ

Published On :

ನರಸಿಂಹರಾಜಪುರ: ಅನ್ನಭಾಗ್ಯ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಜ. 6 ರಂದು ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಾಲೂಕು ಹಮಾಲಿ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅನ್ನಭಾಗ್ಯ ಯೋಜನೆ ಪಡಿತರ ವಿತರಣೆಗಾಗಿ ದುಡಿಯುತ್ತಿರುವ ಸಾವಿರಾರು ಹಮಾಲಿ ಕಾರ್ಮಿಕರಿದ್ದಾರೆ. ಕೆ.ಎಸ್.ಎಫ್.ಸಿ ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಗೋದಾಮುಗಳಲ್ಲಿನ ಕಾರ್ಮಿಕರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಕಾನೂನು ಜಾರಿ ಇಲ್ಲ: ಕಳೆದ 30 ವರ್ಷಗಳಿಂದ ಒಂದೇ ಒಂದು ಕಾರ್ಮಿಕ ಕಾನೂನು ಜಾರಿಗೆ ತಂದಿಲ್ಲ. ಕೂಲಿ ಕಾರ್ಮಿಕರ ಪರ ಕಾನೂನು ಜಾರಿಗೆ ಹಾಗೂ ಕೂಲಿ ಹೆಚ್ಚಳಕ್ಕೆ ಬೆಂಗಳೂರಿನಲ್ಲಿ 2013 ರ ಜುಲೈ 14 ರಂದು ಹಾಗೂ ಆಗಸ್ಟ್ 30 ರಂದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಆಹಾರ ಸಚಿವ ದಿನೇಶ್ ಗುಂಡೂರಾವ್ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರು. ಆದರೆ 4 ತಿಂಗಳು ಕಳೆದರೂ ಭರವಸೆ ಈಡೇರಿಲ್ಲ ಎಂದು ದೂರಿದ್ದಾರೆ.
ಸರ್ಕಾರ ಪಡಿತರ ವಿತರಣೆ ಕಮೀಷನ್ ಹೆಚ್ಚಳಕ್ಕೆ ಕ್ರಮ ತೆಗೆದುಕೊಂಡುದೆ. ರೈಸ್‌ಮಿಲ್ ಮಾಲೀಕರ ಒತ್ತಡಕ್ಕೂ ಮಣಿದು ಲೆವಿ ಸಂಗ್ರಹ ಪ್ರಸ್ತಾಪಿತ ಪ್ರಮಾಣಕ್ಕಿಂತ ಅರ್ಧಕ್ಕೆ ಇಳಿಸಿದೆ. ಆದರೆ, ಅನ್ನಭಾಗ್ಯದ ಯೋಜನೆಗೆ ಕೆಳ ಹಂತದಲ್ಲಿ ಯಶಸ್ವಿಗೆ ಕಾರಣರಾದ ಹಮಾಲಿ ಕಾರ್ಮಿಕರನ್ನು ಮಾತ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ಜನವರಿ 6 ಸೋಮವಾರ ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾ  ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.