ವಿದ್ಯಾಸಂಸ್ಥೆ ವಿರುದ್ಧ ಪೋಷಕರ ಆಕ್ರೋಶ
ಕ.ಪ್ರ.ವಾರ್ತೆ, ಕಡೂರು, ಜ.6 ಶಾಲೆ ಪ್ರಾರಂಭವಾಗಿ 16 ವರ್ಷವಾದರೂ ಮಕ್ಕಳಿಗೆ ಅಗತ್ಯ ಮೂಲ ಸವಲತ್ತುಗಳಾದ ಪ್ರಯೋಗಾಲಯ, ಶೌಚಾಲಯ, ಶಾಲಾ ಅಭಿವೃದ್ಧಿ ಸಮಿತಿಯನ್ನೂ ರಚಿಸದೆ ಶಾಲೆ ನಡೆಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಮಕ್ಕಳು ಹಾಗು ಪೋಷಕರು ಬೇಡಿಕೆ ಈಡೇರಿಕೆಗಾಗಿ ಸಂಸ್ಥೆ ವಿರುದ್ಧ ಪ್ರತಿಭಟಿಸಿದ ಘಟನೆ ಕಡೂರು ತಾಲೂಕು ಪಿ. ಕೋಡೀಹಳ್ಳಿಯಲ್ಲಿ ನಡೆಯಿತು.
ತಾಲೂಕಿನ ಯಗಟಿ ಹೋಬಳಿ ಪಿ. ಕೋಡೀಹಳ್ಳಿಯ ಅಂಬೇಡ್ಕರ್ ಗ್ರಾಮಾಂತರ ವಿದ್ಯಾಸಂಸ್ಥೆಯ ಸ್ವಾಮಿ ವಿವೇಕಾನಂದ ಫ್ರೌಢಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆ ವಿರುದ್ಧ ಪುರ ಗ್ರಾಪಂ ಅಧ್ಯಕ್ಷ ಸಿದ್ದಪ್ಪ, ಸದಸ್ಯ ಎಸ್. ಶಿವಣ್ಣ, ಎಚ್.ಎಸ್. ಈಶ್ವರಪ್ಪ ಮೊದಲಾದವರ ನೇತೃತ್ವದಲ್ಲಿ ಶಾಲಾ ಮಕ್ಕಳು ಹಾಗೂ ಪೋಷಕರು ಪ್ರತಿಭಟಿಸಿದರು.
ವ್ಯವಸ್ಥೆ ಸರಿಯಿಲ್ಲ: ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮುಖಂಡರಾದ ಸಿದ್ದಪ್ಪ ಮಾತನಾಡಿ, ಈ ಶಾಲೆಯಲ್ಲಿ 8 ರಿಂದ 10ನೇ ತರಗತಿ ಓದುತ್ತಿರುವ ಸುಮಾರು 76 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಪಿ. ಕೋಡೀಹಳ್ಳಿ, ಗರ್ಜೆ, ಹಿರೇಬಳ್ಳೇಕೆರೆ ಸೇರಿದಂತೆ ಸುತ್ತಮುತ್ತಲಿನ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರು. ಆದರೆ 1986ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ, ಅಡುಗೆ ಮನೆ ಇಲ್ಲ, ಶಾಲೆ ಕಟ್ಟಡ ಬಿರುಕು ಬಿಟ್ಟಿದ್ದು, ಮಕ್ಕಳು ಅಪಾಯದಲ್ಲಿ ಓದುತ್ತಾ ಬಿಸಿಲಿನಲ್ಲಿ ಪಾಠ ಪ್ರವಚನ ಕೇಳುತ್ತಿದ್ದಾರೆ ಎಂದವರು ಹೇಳಿದರು.ಗ್ರಾಮಸ್ಥರಾದ ಮೂಡ್ಲಗಿರಿಯಪ್ಪ, ನಾಗರಾಜ್, ಪಾಪ್ಪಣ್ಣ, ಹೇಮಣ್ಣ,ನಂಜುಂಡಪ್ಪ, ಹೆಗಡೆ, ರಂಗನಾಥ್, ಮಲ್ಲೇಶಪ್ಪ, ರಾಘವೇಂದ್ರ,ಶಾಲಾ ನಿವೇಶನದ ದಾನಿಗಳಾದ ಪುಟ್ಟಮ್ಮನವರ ಪುತ್ರರಾದ ಚಿಕ್ಕಣ, ರಾಜಣ್ಣ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

