ಚಿಕ್ಕಮಗಳೂರು

ರಂಭಾಪುರಿ ಶ್ರೀಗಳಿಂದ ಧರ್ಮ ಸಂರಕ್ಷಣಾ ಕಾರ್ಯ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಜ.7
ಅಖಿಲ ಭಾರತ ವೀರಶೈವ ಮಹಾಸಭಾ ಚಿಕ್ಕಮಗಳೂರು ಘಟಕದ ವತಿಯಿಂದ ಜಗದ್ಗುರು ಬಾಳೆಹೊನ್ನೂರು ವೀರಸೋಮೇಶ್ವರ ರಂಭಾಪುರಿ ಶ್ರೀಗಳ 59ನೇ ಜನ್ಮದಿನಾಚರಣೆಯನ್ನು ನಗರದ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ಮಂಗಳವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ, ರಂಭಾಪುರಿ ಶ್ರೀಗಳು ಬಹುಎತ್ತರಕ್ಕೆ ಬೆಳೆದು ಧರ್ಮಸಂರಕ್ಷಣಾ ಕಾರ್ಯವನ್ನು ರಾಜ್ಯವ್ಯಾಪ್ತಿ ಕೈಗೊಂಡಿದ್ದಾರೆ. ಇವರ ಧರ್ಮಸೇವಾ ಮನೋಭಾವಕ್ಕೆ ವಂದಿಸುತ್ತಾ ಇಂದು ಅವರ ಜನ್ಮದಿನಾಚರಣೆಯನ್ನು ವಯೋವೃದ್ಧರ ನಡುವೆ ಆಚರಿಸುತ್ತಿರುವುದು ತುಂಬಾ ಸಂತೋಷಕರ ಎಂದು ಹೇಳಿದರು.
ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ ಕೋಟೆ ಮಾತನಾಡಿ, ವಯೋವೃದ್ಧರ ಜೊತೆ ಕೆಲಹೊತ್ತು ಕಾಲ ಕಳೆದು ಪರಮಪೂಜ್ಯ ರಂಭಾಪುರಿ ಶ್ರೀಗಳ ಜನ್ಮದಿನ ಆಚರಿಸುತ್ತಿರುವುದು ನಮಗೆಲ್ಲಾ ಖುಷಿ ತಂದಿದೆ. ವೀರಶೈವ ಮಹಾಸಭಾ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
ವೀರಶೈವ ಮಹಾಸಭಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಿ. ವೀರೇಶ್ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಪ್ರಪಂಚದಲ್ಲಿ ಯಾವುದು ಶಾಶ್ವತವಲ್ಲ. ಪ್ರೀತಿ ಮತ್ತು ನಿಸ್ವಾರ್ಥ ಸೇವೆ ಮತ್ತು ನೆನಪುಗಳು ಮಾತ್ರ ಶಾಶ್ವತ. ವಯೋವೃದ್ಧರು ತಮ್ಮ ಕೊನೆ ದಿನಗಳನ್ನು ದೇವರನಾಮ, ಚಪ ತಪ ಭಜನೆ ಇತ್ಯಾದಿ ಧಾರ್ಮಿಕ ಚಟುವಟಿಕೆ ಮಾಡಿ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಗಳಿಸಬಹುದು ಎಂದು ಹೇಳಿದರು.
ವೀರಶೈವ ಮಹಾಸಭಾ ಖಜಾಂಚಿ ಚಂದ್ರಮೌಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಣ್ಣು ಮತ್ತು ಬಿಸ್ಕೆಟ್‌ಗಳನ್ನು ವಯೋವೃದ್ಧರಿಗೆ ವಿತರಿಸಲಾಯಿತು. ರಾಜ್ಯ ರಕ್ಷ ಸೇನೆಯ ಎಂ.ಆರ್. ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀರಶೈವ ಮಹಾಸಭಾದ ಪದಾಧಿಕಾರಿಗಳಾದ ಏಕಾಂತರಾಮು, ವೀರಶೈವ ಪತ್ತಿನ ಸಹಕಾರ ಸಂಘದ ಓಂಕಾರಸ್ವಾಮಿ, ಚೇತನ್, ಮಿಥುನ್ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಜರಿದ್ದರು.
--
ಜ್ಞಾನಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಶಾರೀರಿಕ ಉತ್ಸವ
ಶೃಂಗೇರಿ: ಪಟ್ಟಣದ ಮಾನಗಾರು ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಾರೀರಿಕ ಉತ್ಸವ ಕಾರ್ಯಕ್ರಮ ನಡೆಯಿತು. ಡಾ. ನಿರಂಜನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾರೀರಿಕವಾಗಿ ಸದೃಢರಾದರೆ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಜ್ಞಾನಭಾರತೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಲಕ್ಷ್ಮಿನಾರಾಯಣಭಟ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ. ಸತೀಶ್ ಮೊದಲಾದರು ಉಪಸ್ಥಿತರಿದ್ದರು. ಪಂಜಿನ ಕವಾಯತು, ಸೈಕಲ್ ಸ್ಪರ್ಧೆ, ಘೋಷ್, ಸಮತಾ, ಸಾಮೂಹಿಕ ಯೋಗಾಸನ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಣಿ ಸ್ವಾಗತಿಸಿದರು.

ಮಲೆನಾಡು ಉತ್ಸವ
ಶೃಂಗೇರಿ: ಡಾ. ಗೌರೀಶಂಕರ ಸಭಾಂಗಣದಲ್ಲಿ ಜ. 11 ರಿಂದ ಮಲೆನಾಡು ಉತ್ಸವ ಆರಂಭವಾಗಲಿದೆ. ಜ. 11ರಿಂದ 14 ನಾಲ್ಕು ದಿನಗಳ ಕಾಲ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.