ಚಿಕ್ಕಮಗಳೂರು

ಶಿವರುದ್ರಪ್ಪ ವಿಶ್ವಪಥ ಕವಿ: ಪ್ರೊ. ಶೆಟ್ಟರ್

Published On :

ಕ.ಪ್ರ.ವಾರ್ತೆ  ತರೀಕೆರೆ  ಜ.7
ಮತ- ಮನುಜ ಮತವಾಗಲಿ, ಪಥ ವಿಶ್ವಪಥವಾಗಲಿ ಎಂದು ಸಾರಿದ ಕುವೆಂಪುರವರ ವಿಶ್ವಮಾನವ ಸಂದೇಶದಂತೆ ಬಾಳಿದ ಜಿ.ಎಸ್.ಶಿವರುದ್ರಪ್ಪ ವಿಶ್ವಪಥದ ಕವಿ ಎಂದು ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ.  ಕೆ.ವಿ. ಸಜ್ಜನ ಶೆಟ್ಟರ್ ತಿಳಿಸಿದರು.
ಅವರು, ಮಂಗಳವಾರ ಕಾಲೇಜು ಸಭಾಂಗಣದಲ್ಲಿ ಏರ್ಪಾಡಾಗಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ  ಮಾತನಾಡಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಬಹುಮುಖ ವ್ಯಕ್ತಿತ್ವದ ಜಿ.ಎಸ್.ಎಸ್. ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದ ವ್ಯಕ್ತಿತ್ವ ಪಡೆದಿದ್ದಾರೆ ಎಂದು ಅವರು  ತಿಳಿಸಿದರು.
ಮಾನವತೆಯನ್ನು ಹಂಬಲಿಸಿದ ಕವಿ: ಕನ್ನಡ ಪ್ರಾಧ್ಯಾಪಕ ಪ್ರೊ. ಜಿ.ಎನ್. ಬಸವರಾಜಪ್ಪ ಮಾತನಾಡಿ, ಕುವೆಂಪು, ತೀನಂಶ್ರೀ, ತ.ಸು. ಶ್ಯಾಮರಾಯರಂತಹ ಗುರುಗಳ ನೇರ ಶಿಷ್ಯರಾದ ಜಿಎಸ್‌ಎಸ್ ಅಧುನಿಕ ಕನ್ನಡ ಸಂದರ್ಭದಲ್ಲಿ ಕಳೆದ 6 ದಶಕಗಳ ಕಾಲದಲ್ಲಿ ಕನ್ನಡದ ಒಂದು ದಿವ್ಯ ಶಕ್ತಿಯಾಗಿ  ಬೆಳೆದರು, ಕನ್ನಡ ಸಾಹಿತ್ಯದ ನವೋದಯ, ನವ್ಯ, ದಲಿತ ಮತ್ತು ಬಂಡಾಯದ ಕಾಲಘಟ್ಟಗಳ ಪ್ರಖರತೆಯಲ್ಲೂ ಒಂದು ಇಸಂಗೆ ಒಳಗಾಗದೆ ಮಾನವತೆಯನ್ನು ಹಂಬಲಿಸಿದ ಕವಿ ಎಂದರು.
ಪ್ರೊ. ಬಿ.ಈ. ಕುಮಾರಪ್ಪ, ಡಾ.ಆರ್.ವಿ. ಹೆಗಡಾಳ್, ಕೆ.ಆರ್. ವೀರೇಶ್, ಎಂ. ಈ. ವೀರಭದ್ರಪ್ಪ, ಬಿ.ಆರ್. ಡಮ್ಮಳ್ಳಿ,ತ, ಚಿದಾನಂದ್, ರಜಪೂತ, ಕೆ.ಬಿ. ಮಲ್ಲಪ್ಪ, ಜಯದೇವಪ್ಪ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.