ಚಿಕ್ಕಮಗಳೂರು

ಪ್ರೆಸ್ ಕ್ಲಬ್ ನೂತನ ಉಪಾಧ್ಯಕ್ಷ ತಾರಾನಾಥ್

Published On :

ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರೆಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಹೊಸದಿಗಂತ ವರದಿಗಾರ ಸಿ. ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಈ ಟಿ.ವಿ. ವರದಿಗಾರ ಎನ್.ಕೆ. ಗೋಪಿ, ಖಜಾಂಚಿಯಾಗಿ ಉದಯ ಟಿವಿ ವರದಿಗಾರ ದಿನೇಶ್ ಪಟವರ್ಧನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ವಿಜಯವಾಣಿ ವರದಿಗಾರ ಎಂ.ಎನ್. ಮಂಜುನಾಥ್ ಹಾಗೂ ಕನ್ನಡಪ್ರಭ ವರದಿಗಾರ ಆರ್. ತಾರಾನಾಥ್, ಕಾರ್ಯದರ್ಶಿಗಳಾಗಿ ಈ ಸಂಜೆ ವರದಿಗಾರ ಎಂ.ಎಸ್. ಉಮೇಶ್ ಕುಮಾರ್, ಅಮೋಘ ಟಿವಿ ವರದಿಗಾರ ಶಿವು ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರುಗಳಾಗಿ ಮಹಾರುದ್ರ (ಸಮಯ ಟಿವಿ ಕ್ಯಾಮೆರಾಮೆನ್), ಬಿ.ಎಂ. ರವಿ (ಮಲೆನಾಡು ಸಂಗತಿ ವರದಿಗಾರ), ಆರಗ ರವಿ (ವಿಜಯ ಕರ್ನಾಟಕ ವರದಿಗಾರ), ಸಂತೋಷ್ ಕುಮಾರ್ (ಪ್ರಜಾವಾಣಿ ವರದಿಗಾರ), ಎ.ಎನ್. ಪ್ರಸನ್ನ (ವಿಜಯ ಕರ್ನಾಟಕ ಛಾಯಾಗ್ರಾಹಕ) ಹಾಗೂ ಪಿ. ರಾಜೇಶ್ (ಸಂಪಾದಕರು, ಅಕ್ಷರ ತೋರಣ) ಆಯ್ಕೆಯಾಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುದ್ರಣ ಮಾಧ್ಯಮ ಹಾಗೂ ದೃಶ್ಯಮಾಧ್ಯಮದ ಪತ್ರಕರ್ತರ ಸಭೆಯಲ್ಲಿ ಚಿಕ್ಕಮಗಳುರು ಪ್ರೆಸ್ ಕ್ಲಬ್‌ನ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.