ಚಿಕ್ಕಮಗಳೂರು

ಯುವ ಜನರಿಗೆ ಮಾರ್ಗದರ್ಶನ ಅಗತ್ಯ

Published On :

ಬೆಂಗಳೂರು: ಸಮಾಜದಲ್ಲಿ ನಾಶವಾಗುತ್ತಿರುವ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಯುವಜನರಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಇಂಡಿಯನ್ ಸೈನ್ಸ್ ಮಾನಿಟರ್ ಗುರುವಾರ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ “11«æÞ ವಾರ್ಷಿಕ ಸರ್ ಜಗದೀಶ್ಚಂದ್ರ ಬೋಸ್ ಸ್ಮಾರಕ ®ÚâÁÚÑÛQÁÚ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ನ್ಯಾಯ ಮಾರ್ಗದಲ್ಲಿ ಸಂಪತ್ತು ಸಂಪಾದಿಸುವುದು ತಪ್ಪಲ್ಲ. ಆದರೆ ಅನ್ಯರಿಗೆ ಅನ್ಯಾಯವೆಸಗಿ ಸಂಪಾದನೆ ಮಾಡುವುದು ಸರಿಯಲ್ಲ. ಅಂಥ ತಪ್ಪುಗಳಿಂದಾಗಿ ಸಮಾಜದಲ್ಲಿನ ಮೌಲ್ಯ ಮತ್ತು ಮಾನವೀಯತೆ ನಾಶವಾಗುತ್ತಿದೆ. ಅದರ ಮರುಸ್ಥಾಪನೆಗಾಗಿ ಯುವಜನರಿಗೆ ಮಾರ್ಗದರ್ಶನ ನೀಡುವುದು ಅತ್ಯಗತ್ಯ ಎಂದರು. ಜತೆಗೆ, ಸಮಾಜದಲ್ಲಿ ಸಂಪತ್ತು ಮತ್ತು ಅಧಿಕಾರ ಇದ್ದವರಿಗೆ ಮಾತ್ರ ಗೌರವ ಹಾಗೂ ಸನ್ಮಾನ ನೀಡುವ ಪ್ರವೃತ್ತಿ ಹೆಚ್ಚಾಗಿದೆ ಎಂದೂ ವಿಷಾದಿಸಿದರು.
ಮುಖ್ಯ ಅತಿಥಿ ರುಕ್ಮಿಣಿ ದೇವಿ ಅವರು ಮಾತನಾಡಿ, ಭಾರತ ಬೌದ್ಧಿಕವಾಗಿ ಶ್ರೀಮಂತ ರಾಷ್ಟ್ರ. ಭಾರತೀಯರು ಆತ್ಮಬಲ ಕಳೆದುಕೊಳ್ಳಬಾರದು ಎಂದರು.
ಶ್ರೀಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್, ಉದ್ಯಮಿ ಡಾ.ಪಿ. ಸದಾನಂದ ಮಯ್ಯ, ಸಿ.ಪಿ. ರಾಮಸ್ವಾಮಿ ಅಯ್ಯರ್ ಪ್ರತಿಷ್ಠಾನ ಮತ್ತು ಸಿಪಿಆರ್ ಪರಿಸರ ಶಿಕ್ಷಣದ ಗೌರವ ನಿರ್ದೇಶಕಿ ಡಾ. ನಂದಿತ ಕೃಷ್ಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಡಾ. ರಾಮಧರ್ ಸಿಂಗ್, ಯೋಗ ತಜ್ಞ ಡಾ. ಶರಣ್ಯನ್, ಸಮಾಜ ಸೇವಕಿ ಮಂಗಳಾ ಭಾರತಿ ಅವರಿಗೆ ನಿವೃತ್ತ ಮುಖ್ಯ ನ್ಯಾ.ಎಂ.ಎನ್. ವೆಂಕಟಾಚಲಯ್ಯ ಅವರು “11«æÞ ವಾರ್ಷಿಕ ಸರ್ ಜಗದೀಶ್ಚಂದ್ರ ಬೋಸ್ ಸ್ಮಾರಕ ®ÚâÁÚÑÛQÁÚ’ ಪ್ರದಾನ ಮಾಡಿದರು. ಇಂಡಿಯನ್ ಸೈನ್ಸ್ ಮಾನಿಟರ್ ಸಂಪಾದಕ ಟಿ.ಕೆ.ವಿ. ರಾಜನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.