ಚಿಕ್ಕಮಗಳೂರು

ಕ್ರೀಡೆ ಪ್ರೋತ್ಸಾಹಿಸಲು ಆಂದೋಲನ ಅಗತ್ಯ

Published On :

ಕ.ಪ್ರ.ವಾರ್ತೆ, ಚಿತ್ರದುರ್ಗ, ಜ. 12
ಕ್ರೀಡೆಯಲ್ಲಿ ಎಲ್ಲ ತರಹದ ಆಟಗಳು ಯುವಕರಲ್ಲಿ ಪ್ರಚಲಿತಕ್ಕೆ ಬರಬೇಕಾಗಿತ್ತು. ಎಲ್ಲರೂ ಕ್ರಿಕೆಟ್ ಆಟಕ್ಕೆ ಬೆನ್ನು ಹತ್ತಿದ್ದಾರೆ. ಕ್ರಿಕೆಟ್ ಹೊರತಾದ ಆಟಗಳಲ್ಲಿ ಯುವಕರು ತೊಡಗಬೇಕು ಎಂದು ಪೂರ್ವ ವಲಯ ಐಜಿಪಿ ಡಾ.ಎಸ್. ಪರಶಿವಮೂರ್ತಿ ಹೇಳಿದರು.
ಭಾನುವಾರ ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಆರಂಭಗೊಂಡ ನಾಲ್ಕು ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಆಟಗಳು ಇಂದು ಕಣ್ಮರೆಯಾಗಿವೆ. ಹೊಸ ಆಟಗಳು ಯುವಕರ ಮುಂದಿವೆ. ಯುವಕರಿಗೆ ಹೊಸ ಆಟಗಳಿಗೆ ಹೊಂದಿಕೊಳ್ಳಲಾಗದೆ, ಹಳೆಯ ಆಟಗಳು ಗೊತ್ತಿಲ್ಲದೆ ಸೋಮಾರಿ ಕಟ್ಟೆಗಳನ್ನು ಹಿಡಿದು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಆಟಗಳಲ್ಲಿ ತೊಡಗಬೇಕಾದ ಯುವಕರು ಎಡಬಿಡಂಗಿಗಳಾಗಿದ್ದಾರೆ. ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಬೇಕೆನ್ನುವಂತಹ ಆಂದೋಲನಗಳು ಪೋಷಕರು ಮತ್ತು ಜನ ಸಾಮಾನ್ಯರೆಲ್ಲ ಸೇರಿ ಆಗಬೇಕಾಗಿದೆ ಎಂದರು.
ಸೋಲು- ಗೆಲವು ಮುಖ್ಯವಲ್ಲ: ಕ್ರೀಡೆಗಳಲ್ಲಿ ಗೆಲುವು ಒಬ್ಬರಿಗೆ ಮಾತ್ರ ಇರುತ್ತದೆ. ಅಂದ ಮಾತ್ರಕ್ಕೆ ಉಳಿದವರೆಲ್ಲ ಸೋತ ಹಾಗಲ್ಲ. ಭಾಗವಹಿಸಿದ ಪ್ರತಿಯೊಬ್ಬ ಕ್ರೀಡಾಪಟು ಸಹ ಗೆದ್ದಂತೆ. ಸರ್ಕಾರ ಕ್ರೀಡೆ ಕಡೆ ಹೆಚ್ಚು ಗಮನ ವಹಿಸಬೇಕು. ಜೊತೆಗೆ ಸರ್ಕಾರೇತರ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ಕ್ರೀಡೆಗಳ ಕಡೆ ತೊಡಗಿಸುವಂತಹ ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದರು.
ಪೋಷಕರಿಗೆ ಕ್ರೀಡೆಗಳಿಂದ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಮನೋಭಾವನೆಯಿಂದ ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸುತ್ತಿಲ್ಲ. ಹುದ್ದೆಯಷ್ಟೇ ಕ್ರೀಡೆಯೂ ಮುಖ್ಯ ಎಂದರು.
ನಾಯಕತ್ವ ಗುಣ ರೂಢಿಸಿಕೊಳ್ಳಿ: ಕ್ರೀಡೆ ಕೆಲವರಿಗಷ್ಟೆ ಅವಕಾಶ ಸಿಗುತ್ತದೆ ಎಂಬ ಪೋಷಕರ ಅಭಿಪ್ರಾಯ ಸರಿಯಲ್ಲ. ಅದರಾಚೆಗೂ ಆಲೋಚನೆ ಮಾಡಿ ಸಚಿನ್, ದ್ರಾವಿಡ್ ಎಂಬಂತಹವರಿಗೆ ಕೋಟಿಗೊಬ್ಬರಿಗೆ ಸಿಗುವ ಅವಕಾಶ. ಕ್ರೀಡೆಗಳಲ್ಲಿ ತೊಡಗುವ ಮಕ್ಕಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಬದುಕನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕ್ರೀಡಾಪಟುಗಳು ಸಾಮಾಜಿಕ ಬದುಕಿನಲ್ಲಿ ಯಶಸ್ವಿ ಜೀವನ ನಡೆಸುತ್ತಾರೆ. ಅವರಲ್ಲಿ ನಾಯಕತ್ವ ಗುಣಗಳು ಇರುತ್ತವೆ. ಅವರಿಗೂ ನಾಯಕತ್ವ ಎಂದಾಕ್ಷಣ ಕ್ರೀಡೆಯಲ್ಲಿ ನಾಯಕ ಒಬ್ಬನೇ ಲೀಡರ್ ಆಗಿರುವುದಿಲ್ಲ. ಪ್ರತಿಯೊಬ್ಬರೂ ಲೀಡರ್‌ಗಳು ಆಗಿರುತ್ತಾರೆ. ಅಂತಹ ಮನೋಭಾವ ಈಗಿನ ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ಕ್ರೀಡೆಗಳನ್ನು ನಡೆಸಲಾಗುತ್ತದೆ. ಅಂತಹ ಕ್ರೀಡೆಗಳಲ್ಲಿ ಭಾಗವಹಿಸುವಂಥವರ ದೇಹ ಮತ್ತು ಆರೋಗ್ಯ ಮುಖ್ಯ. ಕ್ರೀಡಾಪಟುಗಳ ಮನಸ್ಥಿತಿ ಮತ್ತು ಆರೋಗ್ಯ ಯಾವಾಗಲೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿರುತ್ತದೆ. ಆ ದೃಷ್ಟಿಯಲ್ಲಿ ನಾವು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆ ವಹಿಸಿದ್ದರು. ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಕ್ರೀಡಾಕೂಟದ ಆಯೋಜಕರಾದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮತ್ತಿತರರು ಭಾಗವಹಿಸಿದ್ದರು. ಹಿರಿಯ ವಕೀಲ ಫಾತ್ಯರಾಜನ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.