ಸ್ವಾತಂತ್ರ್ಯ ಯೋಧರ ಬೇಡಿಕೆ; ಗೊತ್ತುವಳಿ
ಕ.ಪ್ರ.ವಾರ್ತೆ, ಚಿತ್ರದುರ್ಗ, ಜ. 12
ಐತಿಹಾಸಿಕ ಚಿತ್ರದುರ್ಗ ಮುರುಘಾಮಠದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಯೋಧರ ಮತ್ತು ಉತ್ತರಾಧಿಕಾರಿಗಳ ರಾಜ್ಯಮಟ್ಟದ ಮಹಾ ಸಮ್ಮೇಳನದಲ್ಲಿ ಮುರುಘಾ ಶರಣರ ಸನ್ನಿಧಿ ಮತ್ತು ಸ್ವಾತಂತ್ರ್ಯ ಯೋಧರ ರಾಜ್ಯಾಧ್ಯಕ್ಷ ಎಸ್‌ವಿಟಿ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಯೋಧರ ಬೇಡಿಕೆಗಳು ಬಗ್ಗೆ ಸರ್ವಾನುಮತದ ಗೊತ್ತುವಳಿಗಳನ್ನು ಅಂಗೀಕರಿಸಲಾಯಿತು.
ಸ್ವಾತಂತ್ರ್ಯ ಯೋಧರ ವಿಧವಾ ಪತ್ನಿಯರಿಗೆ ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಹಾಗೂ ಸಿಟಿ ಬಸ್‌ಗಳಲ್ಲಿ ಪ್ರಯಾಣಿಸಲು ನೀಡಲಾಗಿರುವ 2000 ಮೊತ್ತದ ಉಚಿತ ಕೂಪನ್ ಕಡಿಮೆ ಆಗಿರುವುದರಿಂದ ಸ್ವಾತಂತ್ರ್ಯ ಯೋಧರಿಗೆ ನೀಡಿರುವಂತೆ ಅವರ ವಿಧವಾ ಪತ್ನಿಯರಿಗೆ ಉಚಿತ ಬಸ್‌ಪಾಸ್ ಕಾರ್ಡ್ ವಿತರಿಸಿ ಅವರ ಸಂಗಡ ಒಬ್ಬ ಸಹಾಯಕರನ್ನು ಉಚಿತವಾಗಿ ಕರೆದುಕೊಂಡು ಹೋಗಲು ಆದೇಶ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರುವುದು.
ಮುಖ್ಯಮಂತ್ರಿಗಳ ಗಮನಕ್ಕೆ ತರಲು ಮಂಡಿಸಲಾದ ಗೊತ್ತುವಳಿ ವಿವರ ಇಂತಿದೆ.
- ಸ್ವಾತಂತ್ರ್ಯ ಯೋಧರ ಮತ್ತು ಉತ್ತರಾಧಿಕಾರಿಗಳ ಮಕ್ಕಳು, ಮೊಮ್ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಲು ಈ ಹಿಂದೆ ಶೇ.5 ಮೀಸಲಾತಿ ನೀಡುತ್ತಿದೆ. ಸರ್ಕಾರ ಅದನ್ನು ಹಿಂದಕ್ಕೆ ಪಡೆದಿದೆ. ಮೊದಲಿನಂತೆ ಶೇ.5 ಮೀಸಲಾತಿ ಒದಗಿಸಬೇಕು. ಸ್ವಾತಂತ್ರ್ಯ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ನೌಕರಿಯಲ್ಲೂ ಮೀಸಲಾತಿ ನೀಡಬೇಕು ಮತ್ತು ವಿದ್ಯಾಭ್ಯಾಸಕ್ಕೆ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸುವಂತೆ ಮನವಿ.
- ಸ್ವಾತಂತ್ರ್ಯ ಯೋಧರು ಮೃತರಾದಾಗ ಅವರ ಅಂತ್ಯ ಸಂಸ್ಕಾರಕ್ಕೆ ಹಾಲಿ ನೀಡುತ್ತಿರುವ 2000 ಇಂದಿನ ಬೆಲೆ ಏರಿಕೆಯಲ್ಲಿ ಯಾವುದಕ್ಕೂ ಸಾಕಾಗುವುದಿಲ್ಲ. ಆದ ಕಾರಣ ಅಂತ್ಯ ಸಂಸ್ಕಾರಕ್ಕೆ ನೀಡುವ ಹಣ 5000ಕ್ಕೆ ಹೆಚ್ಚಿಸುವಂತೆ ಒತ್ತಾಯಿಸುವುದು.
- ಸ್ವಾತಂತ್ರ್ಯ ಯೋಧರು ಕೇಳಿದ ಸ್ಥಳಗಳಲ್ಲಿ ಯಾವುದೇ ಷರತ್ತುಗಳಿಲ್ಲದೆ ಮನೆ, ನಿವೇಶನ ಕೊಡಲು ಮತ್ತು ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡುವಂತೆ ಒತ್ತಡ ಹೇರುವುದು.
- ಕೇಂದ್ರ ಸರ್ಕಾರವು ಕೆಲವು ಸ್ವಾತಂತ್ರ್ಯ ಯೋಧರಿಗೆ ತಾಮ್ರಪತ್ರ ನೀಡಿದ್ದು, ಅದರಂತೆ ರಾಜ್ಯದಲ್ಲಿಯೂ ಸ್ವಾತಂತ್ರ್ಯ ಯೋಧರಿಗೆ ತಾಮ್ರ ಪತ್ರ ನೀಡಿ ಸ್ವಾತಂತ್ರ್ಯ ಯೋಧರ ಮನೆತನವನ್ನು ಸ್ವಾತಂತ್ರ್ಯ ಯೋಧರ ಪರಿವಾರ ಎಂದು ಘೋಷಣೆ ಮಾಡಬೇಕು.
- ಬೆರಳೆಣಿಕೆಯಷ್ಟು ಉಳಿದಿರುವ ಸ್ವಾತಂತ್ರ್ಯ ಯೋಧರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
- ಸ್ವಾತಂತ್ರ್ಯ ಯೋಧರಿಗೆ ಈಗ ರಾಜ್ಯ ಸರ್ಕಾರದ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಹಾಯಕರೊಂದಿಗೆ ಪ್ರಯಾಣಿಸಲು ಉಚಿತ ಸೌಲಭ್ಯವನ್ನು ಒದಗಿಸಲಾಗಿದೆ. ವೋಲ್ವೋ ಬಸ್ ಮತ್ತು ಸ್ಲೀಪರ್ ಬಸ್ಸುಗಳಲ್ಲಿಯೂ ಸಹಿತ ಅವರು ಉಚಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಆದೇಶ ಹೊರಡಿಸುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

