ಚಿಕ್ಕಮಗಳೂರು

ಸಮಾನತೆ ಸಂದೇಶ ಸಾರಿದ ಶರಣರು

Published On :

ಕಡೂರು:  ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬಿ ಜಾತೀಯತೆ ಕಿತ್ತೊಗೆಯುವ ಸಲುವಾಗಿಯೇ 12ನೇ ಶತಮಾನದಲ್ಲಿ ಶಿವಶರಣರು ಸಮಾನತೆಯ ಸಂದೇಶದ ಕ್ರಾಂತಿ ಆರಂಭಿಸಿದರು ಎಂದು ಮಾಜಿ ಸಚಿವ ಬಿ.ಎಲ್. ಶಂಕರ್ ಹೇಳಿದರು.
ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಸಿದ್ದಾರಾಮೇಶ್ವರರ ಜಯಂತಿ ಪ್ರಯುಕ್ತ ಸಿದ್ದರಾಮ ಸಾಹಿತ್ಯಗೋಷ್ಠಿಯಲ್ಲಿ ಮಾತನಾಡಿದರು.
ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮನುಷ್ಯರಿಗೆ ಮುಖ್ಯವಾಗಿ ಶಿಕ್ಷಣ, ಮನೆ, ಕುಡಿಯುವ ನೀರು ನೀಡುವ ಉದ್ದೇಶ ಹೊಂದಿ 100 ಮನೆಗೆ 1 ಬಾವಿ, 1 ಸಾವಿರ ಮನೆಗೆ ಒಂದು ಊರು ಎಂಬ ಪರಿಕಲ್ಪನೆಯೊಂದಿಗೆ ಸಿದ್ದರಾಮರು ಸಂಘಜೀವಿ ಮಾನವನ ಬಗ್ಗೆ ಅರಿತಿದ್ದುದನ್ನು ಇಂದು ನಾವು ಅಳವಡಿಸಿಕೊಂಡಿದ್ದರೆ ದೇಶಕ್ಕೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದರು.
ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಮಾತನಾಡಿ, ಸಿದ್ದರಾಮರನ್ನು ಪಂಚಾಚಾರ್ಯ ಧರ್ಮದಲ್ಲಿ ವಿಲೀನಗೊಳಿಸಲು ತಂತ್ರ ನಡೆಯುತ್ತಿದೆ. ಈ ಬಗ್ಗೆ ನೊಳಂಬ ಸಮಾಜವು ಬಹು ಎಚ್ಚರಿಕೆಂಯಿಂದ ನೊಳಂಬ ಮೂಲಪುರುಷನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ವೈಎಸ್‌ವಿ ದತ್ತ ಸಿದ್ದರಾಮರ ಪುಸ್ತಕ ಬಿಡುಗಡೆ ಮಾಡಿದರು. ಯಳನಡು ಸ್ವಾಮೀಜಿ ಕರಡಿ ಗವಿಮಠ, ಕೇದಿಗೆ ಮಠ, ಹುಲಿಕೆರೆ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಸಿದ್ದರಾಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್,ಸ್ವಾಗತ ಸಮಿತಿ ಅಧ್ಯಕ್ಷ ಕೆ. ಗುರುಪ್ರಸಾದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.