ಚಿಕ್ಕಮಗಳೂರು

ಬಂಡೆ ನಿಧನಕ್ಕೆ ಕನ್ನಡ ಸೇನೆ ಶ್ರದ್ಧಾಂಜಲಿ

Published On :


ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಜ.16
ಭೂಗತ ಪಾತಕಿಯೊಂದಿಗೆ ನಡೆಸಿದ ಹೋರಾಟದಲ್ಲಿ ಮೃತಪಟ್ಟ ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ನಿಧನಕ್ಕೆ ಜಿಲ್ಲಾ ಕನ್ನಡ ಸೇನೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.
 ನಗರದ ಬಸವನಹಳ್ಳಿಯ ಕನ್ನಡ ಸೇನೆ ಜಿಲ್ಲಾ ಕಚೇರಿ ಮುಂಭಾಗ ಗುರುವಾರ ಮಲ್ಲಿಕಾರ್ಜುನ ಬಂಡೆಯವರ ಭಾವಚಿತ್ರ ಇಟ್ಟು ಪುಷ್ಪಾರ್ಚನೆ ಮೂಲಕ ನಮನ ಸಲಿಸಿದ ಕಾರ್ಯಕರ್ತರು ಒಂದು ನಿಮಿಷ ಮೌನಾಚರಣೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಅಧಿಕಾರಿ ಕಾರಣ: ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಬಂಡೆಯವರ ಭಾವಚಿತ್ರಕ್ಕೆ ಪುಷ್ಪಾರ್ಪನೆ ಮಾಡಿ ಮಾತನಾಡಿ, ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಭೂಗತ ಪಾತಕಿಯನ್ನು ಹಿಡಿದು ಅವರ ಅಟ್ಟಹಾಸಕ್ಕೆ ತಿಲಾಂಜಲಿ ಹಾಡಲು ಹೋದ ದಕ್ಷ ಅಧಿಕಾರಿ ಬಂಡೆಯವರ ಸಾವಿಗೆ ಅದೇ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಕಾರಣ ಎಂಬುದು ನಾಚಿಕೆಗೇಡಿನ ಸಂಗತಿ ಎಂದರು.
 ಭೂಗತ ಪಾತಕಿ ಮುನ್ನಾನಂತಹ ದುಷ್ಟ ಶಕ್ತಿಗಳ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ಪೋಲಿಸರ ಸ್ವಯಂ ರಕ್ಷಣೆಗೆ ಸರ್ಕಾರಗಳು ಸೂಕ್ತವಾದ ಶಸ್ತ್ರಾಸ್ತ್ರ ಒದಗಿಸಿ ಧೈರ್ಯ ತುಂಬಬೇಕು, ರಾಜ್ಯದ ಸಾಮಾನ್ಯ ಜನರನ್ನು ಕಾಯುತ್ತಿರುವ ರಕ್ಷಣಾ ಸಿಬ್ಬಂದಿಗೆ ರಾಜಕೀಯದ ನೆಪದಲ್ಲಿ ಒತ್ತಡ ಹೇರುವ ಬದಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿದರೆ ಮಾತ್ರ ರಾಮರಾಜ್ಯ ನಿರ್ಮಾಣವಾಗಲು ಸಾಧ್ಯ ಎಂದರು.
ನೆರವಿಗೆ ಮೀನಮೇಷ: ನಗರಾಧ್ಯಕ್ಷ ಬಿ.ಎಲ್. ಪ್ರವೀಣ್ ಮಾತನಾಡಿ, ಉಗ್ರಗಾಮಿಗಳು, ಕ್ರಿಮಿನಲಲ್ಯ್ಗಳು ಮತ್ತು ಸಮಾಜವಿರೋಧಿ ಚಟುವಟಿಕೆಯಲ್ಲಿ ತೊಡಗಿದವರನ್ನು ಪತ್ತೆ ಹಚ್ಚಲು ಹತ್ತಾರು ಕೋಟಿ ತಲೆದಂಡ ಘೋಷಣೆ ಮಾಡುವ ರಾಜ್ಯ ಸರ್ಕಾರ, ಜನರ ಹಿತಕ್ಕಾಗಿ ತನ್ನ ಪ್ರಾಣ ಒತ್ತೆ ಇಟ್ಟು ವೀರ ಮರಣ ಹೊಂದಿದ ಬಂಡೆ ಚಿಕಿತ್ಸೆಗೆ ಸಹಾಯಹಸ್ತ ನೀಡಲು ಮೀನಮೇಷ ಎಣಿಸಿರುವುದು  ಆರೂವರೆ ಕೋಟಿ ಕನ್ನಡಿಗರು ತಲೆತಗ್ಗಿಸುವ ವಿಷಯ ಎಂದು ವಿಷಾದಿಸಿದರು.
 ಜಿಲ್ಲಾ ಸಂಘಟನಾ ಕಾರ್ಯದರ್ಶಿ ನೀಲೇಶ್, ರಾಜು, ಮಂಜುನಾಥ್, ಅರುಣ್, ರಂಜಿತ್ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.