ಚಿಕ್ಕಮಗಳೂರು

ಶಾಲಾ ಜಮೀನು ಶಾಲೆಗೇ ಉಳಿಸಲು ಸಿಎಂಗೆ ಒತ್ತಾಯ

Published On :

ಕ.ಪ್ರ.ವಾರ್ತೆ    ಭದ್ರಾವತಿ    ಜ.16
ಶಾಲೆ ಜಮೀನು ಶಾಲೆಗೆ ಉಳಿಸಿ ಶಾಲಾ ಕಟ್ಟಡ, ಗ್ರಂಥಾಲಯ, ಆಟದ ಮೈದಾನ ಮುಂತಾದವುಗಳನ್ನು ನಿರ್ಮಿಸಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ರಾಜ್ಯ ಶಾಲಾ ಭೂದಾನ ಜಮೀನು ಶಾಲೆಗೆ ಉಳಿಸಿ ಹೋರಾಟ ಸಮಿತಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಿರುವ ಸಮಿತಿ ಅಧ್ಯಕ್ಷ ಅರಬಿಳಚಿ ಗ್ರಾಮದ ಎಂ.ಎಸ್. ತಿಮ್ಮಪ್ಪ, ಉಪಾಧ್ಯಕ್ಷ ಅಗರದಹಳ್ಳಿಯ ಎಂ.ಎಸ್. ಚಂದ್ರಶೇಖರ್, ಗೌರವಾಧ್ಯಕ್ಷ ಶಿವಮೊಗ್ಗದ ವೀರಭದ್ರಪ್ಪ ಹಾಗೂ ಕಾರ್ಯದರ್ಶಿ ಯಲವಟ್ಟಿಯ ವೈ.ಜಿ. ಮಲ್ಲಿಕಾರ್ಜುನ್ ಅವರು, ರಾಜ್ಯದಲ್ಲಿ ಸುಮಾರು 50 ಸಾವಿರ ಶಾಲಾ- ಜಮೀನುಗಳನ್ನು ಗೇಣಿದಾರರ ಹೆಸರಿನಲ್ಲಿ ಕಬಳಿಸಲು ಹುನ್ನಾರ ನಡೆಯುತ್ತಿದೆ ಎಂದು ದೂರಿದ್ದಾರೆ. ಭೂದಾನದ ಅರ್ಥ ಗೊತ್ತಿದ್ದರೂ ಕೆಲವು ಬುದ್ಧಿಜೀವಿಗಳು ಇಂತಹ ಗೇಣಿದಾರರನ್ನು ಬೆಂಬಲಿಸಿ ಜಮೀನು ಕಬಳಿಸುತ್ತಿರುವವರಿಗೆ ಸಹಕಾರ ನೀಡುತ್ತಿರುವುದು ದುರದೃಷ್ಯಕರ ಎಂದು ವಿಷಾದಿಸಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಎನ್.ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರು ಶಾಲಾ- ಜಮೀನು ಶಾಲೆಗೆ ಉಳಿಸಿ ಹೋರಾಟಕ್ಕೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.
ಕರ್ನಾಟಕ ಕಂದಾಯ ಕಾಯ್ದೆ 1961ರನ್ವಯ ಕಲಂ 107ರಲ್ಲಿ ಉಲ್ಲೇಖಿಸಿರುವಂತೆ ಹಾಲಿ ಭೂದಾನ ವ್ಯಾಪ್ತಿಗೊಳಪಟ್ಟಿರುವ ಜಮೀನಿನ ಅನುಭೋಗದಾರಿಕೆ ಹಕ್ಕನ್ನು ಗೇಣಿದಾರನಿಗೆ ಹಸ್ತಾಂತರಿಸಲು ಅವಕಾಶವಿರುವುದಿಲ್ಲ ಎಂದು ಹಿಂಬರಹ ಕೊಟ್ಟಿರುತ್ತಾರೆ. ಆದ್ದರಿಂದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲೆ ಜಮೀನು ಶಾಲೆಗೇ ಬಿಟ್ಟುಕೊಡಲು ಸ್ಪಂದಿಸಬೇಕೆಂದು ಹೋರಾಟ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.