ಚಿಕ್ಕಮಗಳೂರು

ಪದಗ್ರಹಣ ಸಮಾರಂಭ

Published On :


ತರೀಕೆರೆ: ಮಹಿಳೆಯರು ಆರ್ಥಿಕವಾಗಿ ಸಬಲರಾಗುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಬಹಳ ದೊಡ್ಡದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಯೋಜನೆ ವತಿಯಿಂದ ಸಮೀಪದ ಲಕ್ಕವಳ್ಳಿಯಲ್ಲಿ, ಲಕ್ಕವಳ್ಳಿ ಎ ಮತ್ತು ಬಿ ಹಾಗೂ ಕೆಂಚಿಕೊಪ್ಪ ಕಾರ್ಯ ಕ್ಷೇತ್ರದ ಒಕ್ಕೂಟಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ರಾಮಜ್ಯೋತಿ ವಿದ್ಯಾ ಸಂಸ್ಥೆ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಪುರಾಣಿಕ್ ಮಾತನಾಡಿ, ಯೋಜನೆಯಿಂದ ಪಡೆಯುವ ಸಾಲ ಸೌಲಭ್ಯಗಳನ್ನು ಸದುದ್ದೇಶಗಳಿಗೆ ಬಳಸಿಕೊಂಡು ಪ್ರಗತಿ ಹೊಂದಬೇಕು ಎಂದು ತಿಳಿಸಿದರು.
ಜನಪರ ಕಾಳಜಿ: ಯೋಜನೆಯ ಎಂ.ಡಿ. ಮಹೇಶ್ ಅವರು ಯೋಜನೆ ನಡೆದು ಬಂದ ದಾರಿ, ಯೋಜನೆ ಪಡೆದಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಿಳಿಸಿ, ಲಕ್ಕವಳ್ಳಿ ಹೋಬಳಿಯಲ್ಲಿ ಇದುವರೆಗೆ 15 ಕೋಟಿ ಸಾಲ ವಿತರಿಸಿರುವುದು ಯೋಜನೆಯ ಜನಪರ ಕಾಳಜಿಗೆ ಉತ್ತಮ ಉದಾಹರಣೆ. ಯೋಜನೆಯ ಫಲಾನುಭವಿಗಳು ಸುಮಾರು 84 ಲಕ್ಷ ಉಳಿತಾಯ ಮಾಡಿದ್ದಾರೆ ಎಂದರು.
ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್, ತಾಪಂ ಸದಸ್ಯ ಎಲ್.ಎ.ಅನ್ಬು ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಜಯ್ಯಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಕೆಂಚಿಕೊಪ್ಪ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಯೋಜನೆ ಮೇಲ್ವಿಚಾರಕರಾದ ರೇಖಾ ಎ. ಶೆಟ್ಟಿ, ಸೇವಾ ಪ್ರತಿನಿಧಿಗಳಾದ ಮಮತ, ಸಂಗಮ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.