ರಸ್ತೆಗೆ ಬೇಲಿ ಹಾಕಿ ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ.ವಾರ್ತೆ ಮೂಡಿಗೆರೆ ಜ.16
ಕಳಸ ಮಹಾವೀರ ರಸ್ತೆಯನ್ನು ದುರಸ್ತಿಗೊಳಿಸಿ ಎಂದು ಕಳಸ ಗ್ರಾಮಸ್ಥರ ಹಕ್ಕು ಸಂರಕ್ಷಣಾ ಪಡೆ ಮತ್ತು ಮಹಾವೀರ ರಸ್ತೆ ಯ ಅಂಚಿನಲ್ಲಿರುವ ವರ್ತಕರು, ಆಟೋ ಚಾಲಕರು ಮತ್ತು ಮಾಲಕರು ರಸ್ತೆಗೆ ಬೇಲಿ ಹಾಕಿ ರಸ್ತೆ ತಡೆ ಮಾಡಿ ಚಂದಾ ಎತ್ತು ವುದರ ಮೂಲಕ ಪ್ರತಿಭಟನೆ ಮಾಡಿದರು.
ಹಲವಾರು ವರ್ಷಗಳಿಂದ ಕಳಸ ಪಟ್ಟಣದ ಮಹಾವೀರ ರಸ್ತೆ ದುರಸ್ತಿಯಾಗದೆ ಹೊಂಡದಿಂದ ಕೂಡಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗಲಾಗದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆ, ಶಾಲೆಗಳು ಇದೇ ಮಾರ್ಗದ ಅಂಚಿನಲ್ಲಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹಾಗೂ ಪಿಡಿಒ ಮುಜೇಬ್ ರೆಹಮಾನ್, ಪಂಚಾಯಿತಿ ಸದಸ್ಯರುಗಳಾದ ವಾಸುದೇವ್, ಭರತ್‌ರಾಜ್ ಆಗಮಿಸಿದರು. ಈ ಸಂದರ್ಭದಲ್ಲಿ ರಸ್ತೆ ದುರಸ್ತಿ ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಉಷಾ ಮಾತನಾಡಿ ಪಂಚಾಯಿತಿಯಲ್ಲಿ ರಸ್ತೆ ದುರಸ್ತಿಗೆ ಬೇಕಾಗುವಷ್ಟು ಅನುದಾನವಿಲ್ಲ. ವಿಷಯವನ್ನು ಸಂಬಂದಪಟ್ಟವರ ಗಮನಕ್ಕೆ ತರುತ್ತೇವೆ ಎಂದಾಗ ಪ್ರತಿಭಟನಾ ಕಾರರು ಒಪ್ಪಲಿಲ್ಲ.
ಹೊರನಡೆದ ಅಧ್ಯಕ್ಷರು: ಮಾಹಾವೀರ ರಸ್ತೆಯನ್ನು ಖಾಸಾಗಿ ವ್ಯಕ್ತಿಗಳಿಗೆ ಗುತ್ತಿಗೆ ಕೊಟ್ಟುಬಿಡಿ. ನಾವೇ ರಸ್ತೆ ದುರಸ್ತಿ ಮಾಡಿಕೊಳ್ಳುತ್ತೇವೆ. ಆಡಳಿತ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಈ ರಸ್ತೆ ಇಷ್ಟೊಂದು ಹದೆಗೆಟ್ಟಿದೆ ಎಂದಾಗ ಅಧ್ಯಕ್ಷರು ಹಾಗೂ ಪಿಡಿಒ ಸ್ಥಳದಿಂದ ಹೊರ ನಡೆದರು.
ಇದರಿಂದ ಆಕ್ರೋಶಕೊಂಡ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಕಳಸ ಠಾಣಾಧಿಕಾರಿ ರಾಮಚಂದ್ರ ನಾಯಕ್ ಯತ್ನಿಸಿ ವಿಫಲರಾದರು. ಪ್ರತಿಭಟನಾಕಾರರು ಕಳಸದ ಮುಖ್ಯ ರಸ್ತೆಯುದ್ದಕ್ಕೂ ಪ್ರತಿಭಟನಾ ಮೆರವಣಿಗೆ ಮಾಡಿ ಚಂದಾ ಸಂಗ್ರಹಿಸಿ ಡಬ್ಬಿಯನ್ನು ಗ್ರಾಪಂ ಕಟ್ಟೆಯ ಬಳಿ ಇಟ್ಟರು. ಸುಮಾರು ಅರ್ಧಗಂಟೆಗಳ ಕಾಲ ಪ್ರತಿಭಟನಾಕಾರರು ಮಹಾವೀರ ರಸ್ತೆಗೆ ಬೇಲಿ ಹಾಕಿ ರಸ್ತೆ ತಡೆ ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ, ಸುದರ್ಶನ್ ಕುಮಾರ್, ಮಹೇಶ್, ಸುನೀಲ್ ಸಿಕ್ವೇರ, ರಮೇಶ್, ಬದ್ರುದ್ದೀನ್, ಇಸ್ಮಾಯಿಲ್, ಬಾಹುಬಲಿ, ಶಮೀರ್, ಇಕ್ಬಾಲ್ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

