ಚಿಕ್ಕಮಗಳೂರು

ಉತ್ತಮ ಜೀವನಕ್ಕೆ ಜ್ಞಾನವೇ ಬಲ

Published On :

ಚಿಕ್ಕಮಗಳೂರು: ಜ್ಞಾನದ ಬಲದಿಂದ ಜೀವನ ಉತ್ತಮಪಡಿಸಿಕೊಳ್ಳಬಹುದು. ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಅಧ್ಯಾಪಕಿ ಹೇಮಮಾಲಿನಿ ಓಂಕಾರಪ್ಪ ಹೇಳಿದ್ದಾರೆ.
ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ಜಯನಗರ ಬಡಾವಣೆಯ ಶರಣೆ ಸತ್ಯಕ್ಕ ತಂಡ ಗುರುವಾರ ಏರ್ಪಡಿಸಿದ್ದ ಬನದ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.
ಏಕತಾ ಮನೋಭಾವವಿರಲಿ:  ಧರ್ಮ, ನೈತಿಕತೆ, ಒಳ್ಳೆ ಚಾರಿತ್ರ್ಯ, ಎಲ್ಲರೂ ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಹೃದಯ, ಮನಸ್ಸುಗಳು ಒಂದುಗೂಡಿಸುವ ಸೇತುವೆಗಳಾಬೇಕು. ಜೀವನದಲ್ಲಿ ಒಳ್ಳೆಯದರಲ್ಲಿ ನಂಬಿಕೆ, ಅಪನಂಬಿಕೆಯಿಂದ ಹೊರ ಇರುವುದು, ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ, ಸಹಕಾರ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು. ವೇದಕಾಲದಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಪುರುಷರಿಗೆ ಸರಿಸಮಾನವಾಗಿ ಯಜ್ಞ, ಯಾಗಾದಿ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಳು ಎಂದು ಮೈತ್ರಿ, ಗಾರ್ಗಿ ಅವರನ್ನು ಉದಾಹರಿಸಿದರು.
ಜವಾಬ್ದಾರಿ @ÈÚËÚÀ”  ಕಂಚಿನ ಕಂಠದ ಮಿಂಚಿನ ಮಾತಿನ ವಿಶ್ವಮಾನವ ಸ್ವಾಮಿ ವಿವೇಕಾನಂದರು ಹೇಳುವಂತೆ ಪಕ್ಷಿ ಆಕಾಶದಲ್ಲಿ ಲೀಲಾಜಾಲವಾಗಿ ಹಾರಾಡಲು ಎರಡು ರೆಕ್ಕೆಗಳು ಅವಶ್ಯಕ. ಅದೇ ರೀತಿ ಹೆಣ್ಣು, ಗಂಡು ಸಂಸಾರದ ಎರಡು ರೆಕ್ಕೆಗಳಿದ್ದಂತೆ. ಮಹಿಳೆಯಲ್ಲಿರುವ ಸಹನೆ, ವಾತ್ಸಲ್ಯ, ತ್ಯಾಗ, ಮಮತೆ, ಜವಾಬ್ದಾರಿಯಿಂದ ಜೀವನ ಭವ್ಯಗೊಳ್ಳುತ್ತದೆ ಎಂದರು.
ಮಹಿಳೆಯನ್ನು ಎಲ್ಲಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಶಾರದೆ, ಲಕ್ಷ್ಮೀ, ನ್ಯಾಯದೇವತೆ, ಭೂಮಾತೆ, ಗೋಮಾತೆಯೂ ಹೆಣ್ಣು. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ 2ನೇ ಸ್ಥಾನ ನೀಡಿದ್ದಾರೆ.  ತೊಟ್ಟಿಲ ತೂಗುವ ಕೈ ಜಗತ್ತನ್ನೆ ತೂಗ ಬಲ್ಲದು. ಮಹಿಳೆಗೆ ಪ್ರೋತ್ಸಾಹ, ಮೆಚ್ಚುವ ವಿಶಾಲ ಹೃದಯ ಸಮಾಜಕ್ಕೆ ಅವಶ್ಯಕ ಎಂದು ತಿಳಿಸಿದರು.
ಅಕ್ಕ ಮಹಾದೇವಿ ಮಹಿಳಾ ಸಂಘ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಮಾಜ ಸುಧಾರಕ ಕೆಲಸಗಳನ್ನು ಎಲ್ಲರೂ ಒಳ್ಳೆ ಮನಸ್ಸಿನಿಂದ ಮಾಡಿದಾಗ ಸಾರ್ಥಕತೆ ಇರುತ್ತದೆ. ಗೋಹತ್ಯೆ ಮಾಡದೆ ಗೋಮಾತೆಯನ್ನು ರಕ್ಷಿಸುವ ಪಣತೊಡಬೇಕೆಂದರು.
ಡಾ.ಸುಷ್ಮಾ, ಮಂಜುಳಾ ರುದ್ರಪ್ಪ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಖಜಾಂಚಿ ಯಮುನಾ ಸಿ. ಶೆಟ್ಟಿ, ಸಹ ಖಜಾಂಚಿ ರೇಖಾ ಉಮಾಶಂಕರ್, ಕಾರ್ಯದರ್ಶಿ ಹೇಮಾಲತಾ, ವಕೀಲೆ ಮಮತಾ, ಉಪಾಧ್ಯಕ್ಷೆ ಮಂಜುಳಾ ಯೋಗೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಂಡದ ಉಪಾಧ್ಯಕ್ಷೆ ಮಂಜುಳಾ ಯೋಗೇಶ್ ಸ್ವಾಗತಿಸಿದರು. ಲಾವಣ್ಯ ಚಂದ್ರಶೇಖರ್ ನಿರೂಪಿಸಿ, ವಿದ್ಯಾ ದೇವಾನಂದ ವಂದಿಸಿದರು. ದಾಕ್ಷಾಯಣಿ, ಸುಧಾ ತಂಡ ವಚನ ಗಾಯನ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.