ಚಿಕ್ಕಮಗಳೂರು

ನೆಮ್ಮದಿ ಅರಸುವುದೇ ದೈವಾರಾಧನೆ ಉದ್ದೇಶ

Published On :

ಕ.ಪ್ರ.ವಾರ್ತೆ  ಕಡೂರು  ಜ.20
ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಮನಸ್ಸಿಗೆ ಸಮಾಧಾನ ಪಡೆಯುವುದಕ್ಕಾಗಿ ದೇವರ ಮೊರೆಹೋಗುವ ಮೂಲಕ ಜನರು ದೈವತ್ವವನ್ನು ಆರಾಧಿಸುವ ಸಂಸ್ಕಾರ ಬೆಳೆದುಬಂದಿದೆ ಎಂದು ಶಾಸಕ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ವೆಂಕಟೇಶ್ವರ ದೇವಾಲಯದಲ್ಲಿ 20ನೇ ವರ್ಷದ ಶ್ರೀವೈಕುಂಠ ಏಕಾದಶಿ ಪ್ರಯುಕ್ತ ಏರ್ಪಡಿಸಿದ್ದ ಸಂಗೀತೋತ್ಸವ ಮತ್ತು ಪತ್ನಿ ನಿರ್ಮಲಾ ದತ್ತ ಅವರೊಂದಿಗೆ ದಂಪತಿ ಸಮೇತ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದಲ್ಲಿ ಸಾವಿರಾರು ದೇವರಿದ್ದರೂ ಕೂಡ ಅದರಲ್ಲೂ ವಿಶೇಷವಾಗಿ ವೆಂಕಟೇಶ್ವರ ಬಗ್ಗೆ ಸ್ತೋತ್ರದಲ್ಲಿ ಹೇಳಿರುವಂತೆ ಸುಲಭಾಯ ಸರಳಾಯ ಎಂಬಂತೆ ಶ್ರೀತಿರುಪತಿ ತಿಮ್ಮಪ್ಪನು ಜನರಿಗೆ ಸುಲಭವಾಗಿ ಮತ್ತು ಸರಳವಾಗಿ ಎಲ್ಲರಿಗೂ ಸಿಗುವಂತವನಾದ್ದರಿದಂದ ಸುಲಭಾಯ ಸರಳಾಯ ಎಂಬ ಶ್ಲೋಕ ಇರುವ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ ಅಪಾರ ಭಕ್ತ ಸಂಖ್ಯೆ ಇದೆ. ಭಕ್ತರು ತಮ್ಮ ಶ್ರದ್ಧಾಭಕ್ತಿಗಳನ್ನು ಮೆರೆಯುತ್ತಿದ್ದಾರೆ ಎಂದರು.
ತಿರುಪತಿ ತಿಮ್ಮಪ್ಪನು ಕೂಡ ಜಾತ್ಯತೀತವಾದ ಎನ್ನುವುದಕ್ಕೆ ತಿಮ್ಮಪ್ಪನನ್ನು ಪೂಜಿಸುವವರು ಮತ್ತು ಪ್ರಥಮ ದರ್ಶನ ಪಡೆಯುವವರು ಯಾದವ ಸಮುದಾಯದವರು ಎನ್ನುವುದು ವಿಶೇಷ. ತಿಮ್ಮಪ್ಪನ ಬೆಳಗಿನ ಸುಪ್ರಭಾತ ಸೇವೆ ಮತ್ತು ರಾತ್ರಿಯ ಏಕಾಂತಸೇವೆ ನಡೆಯುವುದಂತೂ ಪುಣ್ಯವಿಶೇಷ. ಶ್ರದ್ಧೆ ಮತ್ತು ಭಕ್ತಿಯಿಂದ ವೈಕುಂಠ ವಾಸಿ ಶ್ರೀವೆಂಕಟೇಶ್ವರನನ್ನು ಆರಾಧಿಸಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಕಡೂರು ತಾಲೂಕು ಬರಪೀಡಿತ ಪ್ರದೇಶವಾಗಿದೆ. ತಿಮ್ಮಪ್ಪನ ಆಶೀರ್ವಾದದಿಂದ ಕಡೂರು ತಾಲೂಕಿಗೆ ಜನ ಜಾನುವಾರುಗಳಿಗೆ ನೀರಿನ ಬವಣೆ ಹೋಗಲಾಡಿಸುವಂತೆ ಆತನನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿ, ತಮಗೆ ಸನ್ಮಾನ ನೀಡಿದ ದೇವಾಲಯದ ಸಮಿತಿಗೆ ಕೃತಜ್ಞತೆ ಅರ್ಪಿಸಿದರು.
ಮತ್ತೋರ್ವ ಸನ್ಮಾನಿತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಡೂರು ಸಿ.ನಂಜಪ್ಪ ಮಾತನಾಡಿದರು. ಆಂಧ್ರ ಪ್ರದೇಶದ ಧರಿಶ್ರೀ ಶ್ರೀನಿವಾಸ್, ಮೈಸೂರಿನ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಮಚಂದ್ರಗುಪ್ತ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಜಾ ಕೃಷ್ಣಮೂರ್ತಿ, ಸಮಿತಿ ಸದಸ್ಯರಾದ ಜೆಡಿಎಸ್ ಮುಖಂಡ ಡಿ. ಪ್ರಶಾಂತ್, ಕೆ.ಜಿ. ಶ್ರೀನಿವಾಸಮೂರ್ತಿ, ಎನ್.ಎಚ್. ನಂಜುಂಡಸ್ವಾಮಿ, ರಾಜೇಶ್‌ಕುಮಾರ್, ಜೆ.ಭರಮಪ್ಪ ದಂಡಾವತಿ, ಡಿ. ನಾಗೇಶ್ವರರಾವ್, ಮಂಜುನಾಥ ಪ್ರಸನ್ನ, ಅನಘ ಮಂಜುನಾಥ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.