ಚಿಕ್ಕಮಗಳೂರು

ಬಾಂಗ್ಲಾ ಹಿಂದೂಗಳ ನಿರ್ಲಕ್ಷ್ಯ ಖಂಡನೀಯ: ಬಿಜೆಪಿ

Published On :

ಮೂಡಿಗೆರೆ: ಬಾಂಗ್ಲಾದೇಶದಿಂದ ಬಂದಿರುವ ಹಿಂದೂಗಳಿಗೆ ಭಾರತದ ಪೌರತ್ವ ನೀಡಿ, ಇಲ್ಲಿಯೇ ಅವರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು. ಬಾಂಗ್ಲಾದಿಂದ ಬಂದಿರುವ ಲಕ್ಷಾಂತರ ಮುಸ್ಲೀಮರಿಗೆ ಭಾರತದಲ್ಲಿ ನೆಲೆಯೂರಲು ಅವಕಾಶ ಕೊಟ್ಟು ಅವರಿಗೆ ಎಲ್ಲಾ ಸೌಲಭ್ಯ ನೀಡಿರುವ ಸರ್ಕಾರ ಮೂಲಭಾರತ ನಿವಾಸಿಗಳಾದ ಬಾಂಗ್ಲಾ ಹಿಂದೂಗಳನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ವಕ್ತಾರ ಕೆ.ಎಸ್.ವಿನೋದ್ ಕಣಚೂರು ತಿಳಿಸಿದ್ದಾರೆ.
ಈಗಾಗಲೇ ಬಾಂಗ್ಲಾದಲ್ಲಿ ನೂರಾರು ಹಿಂದೂಗಳ ಹತ್ಯೆಯಾಗಿದೆ. ಅಲ್ಲಿನ ದೇವಸ್ಥಾನಗಳನ್ನು ಒಡೆದುಹಾಕಿದೆ. ದೇಶದಲ್ಲಿ ವಾಸ ಮಾಡದಂತ ಪರಿಸ್ಥಿತಿ ಉಂಟಾಗಿದೆ. ಜವಾಹಾರಲಾಲ್ ನೆಹರು ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳಿಂದಾಗಿ ಭಾರತ ದೇಶ ಭದ್ರತೆ ಹೆಚ್ಚಿನ ಜನಸಂಖ್ಯೆಯನ್ನು ಅವಲಂಬಿಸಬೇಕಾಗಿದೆ.  ಭಾರತದಲ್ಲಿ ಅಲ್ಪಸಂಖ್ಯಾತರು ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚಿನ ನೆಮ್ಮದಿ ಮತ್ತು ಶಾಂತಿಯಿಂದ ಬದುಕುತ್ತಿದ್ದಾರೆ.
ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಸಾವಿಗೆ ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಪ್ರೀತಿಯೇ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದೆಲ್ಲೆಡೆ ಕೋಮುಗಲಭೆಗಳು ಸಂಭವಿಸುತ್ತಿವೆ. ಚಿಕ್ಕಮಗಳೂರಿನ ದರ್ಗಾದ ಮುಂಭಾಗದಲ್ಲಿ ನಡೆದ ಪ್ರಕರಣ ಖಂಡನೀಯ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಕಠಿಣಾ ಕ್ರಮ ಕೈಗೊಳ್ಳಬೇಕು. ಆದರೆ, ಜಿಲ್ಲಾ ಕಾಂಗ್ರೆಸ್ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಾ ಸಮಸ್ಯೆ ಜೀವಂತವಾಗಿರಿಸಿರಲು ಪ್ರಯತ್ನಿಸುತ್ತಿದ್ದಾರೆ.
ಮೂಡಿಗೆರೆಯ ಬಿಳಗುಳ ದೇವಸ್ಥಾನದ ಮುಖಮಂಟಪ ಜಖಂಗೊಳಿಸಿದ ಮುಸ್ಲಿಂ ಯುವಕರ ಬಂಧನವಾಗಿದ್ದರೂ ಸಹ ಅವರ ಕರ್ತವ್ಯವನ್ನು ಖಂಡಿಸಿ, ರಾಜ್ಯ ಅಥವಾ ಜಿಲ್ಲೆಯ ಯಾವ
ಕಾಂಗ್ರೆಸ್ ನಾಯಕರು ಹೇಳಿಕೆಯನ್ನು ಕೊಡದೇ ಇರುವುದನ್ನು ಗಮನಿಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಿಂದೂಗಳ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.