ಚಿಕ್ಕಮಗಳೂರು

ಮರಳು ನೀತಿ ಪಾಲಿಸದ ಜಿಲ್ಲಾ ಉಸ್ತುವಾರಿ: ಆರೋಪ

Published On :

ಮೂಡಿಗೆರೆ: ನದಿಗಳನ್ನು ರಕ್ಷಿಸಲು ಮರಳು ನೀತಿಯನ್ನು ಪ್ರಕಟಿಸಿ ಒಂದು ತಿಂಗಳಾದರೂ, ಜಿಲ್ಲಾ ಉಸ್ತುವಾರಿ ಸಮಿತಿ ಮತ್ತು ತಾಲೂಕು ಸಮಿತಿ ಮರಳು ನೀತಿಯನ್ನು ಅನಿಸರಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಂ. ಮಂಜುನಾಥ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೂಡಿಗೆರೆ ಹೇಮಾವತಿ ನದಿಯಲ್ಲಿ ಅಂಗಡಿ ಮತ್ತು ಬೆಟ್ಟದಮನೆ ನಿಕ್ಷೇಪದಲ್ಲಿ ದೊರೆಯಬಹುದಾದ ಮರಳಿನ ಪ್ರಮಾಣವನ್ನು ನಿರ್ಧರಿಸದೇ ಕ್ವಾರಿಯರ್ ಮತ್ತು ಪರಿಸರ ವಿಮೋಚನ ಪತ್ರವನ್ನು ಪಡೆಯದೇ ನದಿಯ ಸ್ವಾಭಾವಿಕ ಸ್ಥಿತಿಯನ್ನು ರಕ್ಷಣೆ ಮಾಡಲು ಇರುವ ಎಲ್ಲ ನಿಯಮಗಳನ್ನು ಕಡೆಗಣಿಸಿ ಮರಳು ತೆಗೆಯಲು ಲೋಕೋಪಯೋಗಿ ಅಧಿಕಾರಿಗಳು ಪರವಾನಗೆ ನೀಡಿದ್ದಾರೆ ಎಂದು ಆರೋಪಿಸಿದರು. ಕ್ರಮ ಜರುಗಿಸದ್ದಲ್ಲಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಪುಟ್ಟಸ್ವಾಮೇಗೌಡ, ಲಕ್ಷ್ಮಣ್ ಗೌಡ, ಚಂದ್ರೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.