ಚಿಕ್ಕಮಗಳೂರು

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಶ್ರಮದಾನ

Published On :

ತರೀಕೆರೆ: ಇಲ್ಲಿನ ನಾಗೇನಹಳ್ಳಿಯಲ್ಲಿ ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್‌ಗೆ ಸುಣ್ಣ ಬಳಿಯುವ ಮೂಲಕ ಶ್ರಮದಾನ ಮಾಡಲಾಯಿತು.
ಶಿಬಿರಾಧಿಕಾರಿಗಳಾದ ಡಾ.ಜಗದೀಶ್, ಪಿ.ಜಿ. ಶಿವಮೂರ್ತಿ ಅವರ ಮಾರ್ಗದರ್ಶನ, ಶಾಲೆ ಎಸ್‌ಡಿಎಂಸಿ ನೆರವಿನಿಂದ ಶಾಲೆಯ ಸುತ್ತ ಇದ್ದ 6 ಅಡಿ ಎತ್ತರದ ಸುಮಾರು ನಾನೂರು ಮೀಟರ್ ಕಾಂಪೌಂಡ್ ಪಕ್ಕದಲ್ಲಿ ಬೆಳೆದ ಗಿಡಗಳನ್ನು ಕಿತ್ತು ಹಾಕಿ ಸ್ವಚ್ಛಗೊಳಿಸಿ, ತಡೆ ಗೋಡೆ ಫಳಫಳ ಹೊಳೆಯುವಂತೆ ಅಚ್ಚುಕಟ್ಟಾಗಿ ಸುಣ್ಣ-ಬಣ್ಣ ಹಚ್ಚಿದರು. ಸಮಾರಂಭದಲ್ಲಿ ಚಿತ್ರದುರ್ಗ ಎಸ್‌ಜೆ.ಎಂ. ಕಾಲೇಜು ಪ್ರಾಧ್ಯಾಪಕ ಡಾ. ಎಚ್.ಕೆ.ಎನ್.ಸ್ವಾಮಿ 'ಗಾಂಧಿತತ್ವ ಮತ್ತು ಪರಿಸರ', ಹುಲಿ ಸಂರಕ್ಷಣಾ ಪ್ರತಿಷ್ಠಾನದ ಸದಸ್ಯ ಹೇಮ್ಲಾನಾಯ್ಕ 'ಪಕ್ಷಿ ಸಂಕುಲದ ಪ್ರಾಮುಖ್ಯತೆ, ಕೃಷಿಯಲ್ಲಿ ಕೀಟಗಳನ್ನು ನಾಶಪಡಿಸುವಲ್ಲಿ ಪಕ್ಷಿಗಳ ಪಾತ್ರ ಹಾಗೂ ವಿವಿಧ ಪಕ್ಷಿಗಳು' ಕುರಿತು ಉಪನ್ಯಾಸ ನೀಡಿದರು. ಉಪವಲಯ ಅರಣ್ಯಾಧಿಕಾರಿ ಶ್ರೀಹರೀಶ್ ಅರಣ್ಯ ಬೆಂಕಿಗೆ ಆಹುತಿಯಾದ ಸಂದರ್ಭ ಸಾರ್ವಜನಿಕರು ಅರಣ್ಯ ರಕ್ಷಿಸುವ ಬಗ್ಗೆ ಇಲಾಖೆ ಸಂದರ್ಶನ ಮತ್ತು ದೂರವಾಣಿ ಸಂಖ್ಯೆ ನೀಡಿದರು. ಓಂಕಾರಮೂರ್ತಿ 'ಏಡ್ಸ್ ಹರಡುವಿಕೆ ಮತ್ತು ನಿಯಂತ್ರಣ', ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಸಂದೇಶ್ 'ನಿರುದ್ಯೋಗ ನಿವಾರಣೆ' ಕುರಿತು ಉಪನ್ಯಾಸ ನೀಡಿದರು. ತೋಟಗಾರಿಕೆ ಅಧಿಕಾರಿ ಕರಿಬಸವನಾಯ್ಕ 'ಅಡಕೆ ರೋಗಗಳಿಗೆ ತಗಲುವ ರೋಗ-ನಿವಾರಣೆ' ಕುರಿತು ಉಪನ್ಯಾಸ ನೀಡಿದರು. ಪಶು ವೈದ್ಯಾಧಿಕಾರಿ ಡಾ.ಜಯ್ಯಣ್ಣ ಜಾನುವಾರುಗಳಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.