ಚಿಕ್ಕಮಗಳೂರು

ಕರ್ತವ್ಯ ಅರಿವಿನಿಂದ ಸುಭದ್ರ ದೇಶ ಕಟ್ಟಲು ಸಾಧ್ಯ

Published On :

ಕ.ಪ್ರ.ವಾರ್ತೆ, ಕಡೂರು, ಜ.27
ದೇಶದಲ್ಲಿ ಗಣತಂತ್ರ ವ್ಯವಸ್ಥೆ ರಚನೆ ಮೂಲಕ ಭಾರತೀಯ ಸಂವಿಧಾನವು ಪ್ರಜೆಗಳಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಆದರೂ, ಇಂದು ನಾವು ಹಕ್ಕುಗಳನ್ನು ಮಾತ್ರ ಕೇಳುತ್ತಿದ್ದೇವೆಯೇ ಹೊರತು ದೇಶದ ಸುಭದ್ರತೆಗೆ ನಮ್ಮ ಕರ್ತವ್ಯ ಅರಿಯುತ್ತಿಲ್ಲ ಎಂದು ಶಾಸಕ ವೈ.ಎಸ್.ವಿ. ದತ್ತ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 65ನೇ ಗಣರಾಜ್ಯೋತ್ಸವ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕರ್ತವ್ಯಗಳನ್ನು ಅರಿತು ಕಾರ್ಯನಿರ್ವಹಿಸಿದಲ್ಲಿ ಸುಭದ್ರ ದೇಶ ಕಟ್ಟಬಹುದು. ಈ ಹಿನ್ನೆಲೆಯಲ್ಲಿ ದೇಶದ ಸಮಗ್ರತೆ, ಐಕ್ಯತೆ ಒಗ್ಗೂಡಿಸಲು ಯುವ ಸಮೂಹ ಮುಂದಡಿಯಿಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ ಹೆಚ್ಚಿ ಎಂದರು.
ಸಂವಿಧಾನ ಅರಿವು ಅವಶ್ಯ:  ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ತಿಮ್ಮಾಭೋವಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮರ್ಥ ನಾಯಕತ್ವದಲ್ಲಿ ರಚನೆಯಾದ ಭಾರತ ಸಂವಿಧಾನವು ಅಂದಿನ ರಾಷ್ಟ್ರ ನಾಯಕರಿಂದ ಅನುಮೋದನೆಗೊಂಡು ಭಾರತ ಗಣರಾಜ್ಯವಾಯಿತು. ಸಂವಿಧಾನ ರಚನೆ ಅಂಗೀತಕೃತವಾದ ದಿನವನ್ನು ಭಾರತದ ಗಣರಾಜ್ಯ ದಿನ ಎಂದು ಕರೆಯಲಾಗುತ್ತಿದೆ.
 ಈ ಹಿನ್ನೆಲೆ ಭಾರತ ಸಂವಿಧಾನದ ಎಲ್ಲ ವಿಚಾರಗಳು ಅದರ ಸಮಗ್ರ ಉಲ್ಲೇಖಗಳು ಪ್ರತಿಯೊಬ್ಬರಿಗೂ ತಿಳಿಯಬೇಕು ಎಂದರು.
ಇದೇ ಸಂದರ್ಭ ಶಾಸಕರ ಮತ್ತು ತಹಸೀಲ್ದಾರರ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಗಣರಾಜ್ಯೋತ್ಸವದಲ್ಲಿ ಧ್ವಜವಂದನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾ.ಪ. ಅಧ್ಯಕ್ಷ ಬಸವರಾಜಪ್ಪ, ಫಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಲ್ಲೇಶಪ್ಪ, ವೃತ್ತ ನಿರೀಕ್ಷಕ ಮಧುಸೂದನ್, ತಾಲೂಕು ಮಟ್ಟದ ಅಧಿಕಾರಿಗಳಾದ ಪ್ರಭಾಕರ್, ಬಿಇಒ ರಂಗನಾಥ್, ಇ.ಒ. ಮೂಕಪ್ಪಗೌಡ, ಡಾ. ಎಸ್.ಕೆ.ಪ್ರಭು, ಶಿವಣ್ಣ, ಆರ್.ಎಫ್.ಒ.ಗಳಾದ ಗಂಗಾಧರ್ ಮತ್ತು ರವೀಂದ್ರನಾಥ್, ಗುರುರಾಜ್, ಸತ್ಯನಾರಾಯಣ,ಪ್ರಸನ್ನ, ವೀರೇಶನಾಯ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.