ಚಿಕ್ಕಮಗಳೂರು

ಸರ್ಕಾರದ ಸವಲತ್ತು ಸರಿಯಾಗಿ ತಲುಪಿಸಿ: ಪದ್ಮರಾಜ್ ಸಲಹೆ

Published On :

ತರೀಕೆರೆ: ಸರ್ಕಾರೀ ಸವಲ್ತತ್ತುಗಳನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಪುರಸಭಾ ಸದಸ್ಯ ಡಿ.ವಿ. ಪದ್ಮರಾಜ್ ತಿಳಿಸಿದ್ದಾರೆ.
ತಾಪಂ, ಜಿಪಂ ಅಕ್ಷರ ದಾಸೋಹ, ಮಧ್ಯಾಹ್ನ ಉಪಹಾರ ಯೋಜನೆ ವತಿಯಿಂದ ಪಟ್ಟಣದ ಶಾಸಕರ ಮಾದರಿ ಹಿ.ಪ್ರಾ. ಶಾಲೆಯಲ್ಲಿ ನಾಲ್ಕು ಕ್ಲಸ್ಟರ್ ಮಟ್ಟದ ಅಡುಗೆ ಸಿಬ್ಬಂದಿ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎಲ್ಲಾ ಕಡೆ ಈ ತರಬೇತಿ ನಡೆಸಲಾಗುತ್ತಿದ್ದು, ಸರ್ಕಾರದ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದರು.
ವಿಶಿಷ್ಠ ಯೋಜನೆ; ಯೋಜನೆ ಸಹಾಯಕ ನಿರ್ದೇಶಕ ಚೌಡಯ್ಯ ಮಾತನಾಡಿ, ಸರ್ಕಾರದ ವೈಶಿಷ್ಠ್ಯಪೂರ್ಣ  ಯೋಜನೆ, ಕ್ಷೀರಭಾಗ್ಯ ಕೂಡ ನಡೆಯುತ್ತಿದೆ. ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ಅಜ್ಜಂಪುರ ಮತ್ತು ಶಿವನಿ ಭಾಗಗಳಲ್ಲೂ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎನ್. ವೆಂಕಟೇಶ್ ಮಾತನಾಡಿ, ಯೋಜನೆ ಉಪಯುಕ್ತವಾದುದು, ಶಾಲೆಗಳಲ್ಲಿ ಕೈತೋಟ ಮಾಡಿ ತರಕಾರಿ ಬೆಳೆಯಿರಿ, ಯೋಜನೆಯಿಂದಾಗಿ ಒಳ್ಳೆಯ ತರಕಾರಿ ಸಿಗುವುದರಿಂದ ಮಕ್ಕಳ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಪರಿಸರ ಚೊಕ್ಕಟವಾಗಿಟ್ಟುಕೊಳ್ಳಬೇಕು. ಸುರಕ್ಷತೆ ಕೂಡ ಅಷ್ಟೇ ಮುಖ್ಯವಾದುದು ಎಂದು ತಿಳಿಸಿದರು.
ಚರ್ಚೆ ಅಗತ್ಯ: ಯುವಕವಿ ದಾದಪೀರ್ ಮಾತನಾಡಿ, ಬಿಸಿಯೂಟ ಕಾರ್ಯಕರ್ತೆಯರ ಸವಾಲುಗಳ ಬಗ್ಗೆ ಚರ್ಚೆ ಅಗತ್ಯವಾಗಿದೆ, ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ಬಗ್ಗೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಪರಿಹರಿಸಬೇಕು ಎಂದರು.
ಪುರಸಭೆ ಸದಸ್ಯ ಟಿ.ಜಿ. ಅಶೋಕ್ ಕುಮಾರ್ ಮಾತನಾಡಿ, ಪುರಸಭೆ ವತಿಯಿಂದ, ಎಲ್ಲ ಸದಸ್ಯರ ಸಹಕಾರದಿಂದ ಶಾಲೆಗಳಲ್ಲಿ ಬೋರ್‌ವೆಲ್ ಮತ್ತು ಸಿಹಿ ನೀರು ಸರಬರಾಜು ವ್ಯವಸ್ಥೆಯನ್ನು ಖಂಡಿತ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಸದಸ್ಯ ನಾಗರಾಜ್, ಯೋಜನೆ ಸಂಪನ್ಮೂಲ ವ್ಯಕ್ತಿ ಚಂದ್ರಮ್ಮ, ಶಾಲೆ ಮುಖ್ಯೋಪಾಧ್ಯಾಯ   ಸಾದಿಕ್ ಬಾಷ, ಹೊನ್ನಲಿಂಗಪ್ಪ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.