ಚಿಕ್ಕಮಗಳೂರು

ಶಿಕ್ಷಣ ಗುಣಮಟ್ಟದ್ದಾಗಿರಲಿ: ಡಾ.ಹೆಗಡಾಳ್

Published On :

ಕ.ಪ್ರ.ವಾರ್ತೆ, ತರೀಕೆರೆ, ಜ.31
ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಗುಣಮಟ್ಟದ್ದಾಗಿರಬೇಕು ಎಂದು ಪಟ್ಟಣದ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಆರ್.ವಿ. ಹೆಗಡಾಳ್ ತಿಳಿಸಿದ್ದಾರೆ.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅರುಣೋದಯ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟಿ.ಸಿ. ಬಸಪ್ಪ ದತ್ತಿ ಮತ್ತು ಗಿರಿಜಾ ಯೋಗೀಶ್ ದತ್ತಿ ಉಪನ್ಯಾಸದಲ್ಲಿ,  'ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟದ ಸಾಧನೆ' ವಿಷಯ ಕುರಿತು ಅವರು ಮಾತನಾಡಿದರು.
ಕಸಬಾ ಹೋಬಳಿ ಕಸಾಪ ಅಧ್ಯಕ್ಷೆ ದತ್ತಿ ದಾನಿಗಳಾದ ಶ್ಯಾಮಲ ಮಂಜುನಾಥ್ ಮಾತನಾಡಿ, ಮಾಜಿ ಶಾಸಕ ಟಿ.ಸಿ. ಬಸಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರು, ಜೈಲುವಾಸ ಅನುಭವಿಸಿದವರು. ಜೀವನ ಒಳ್ಳೆಯ ರೀತಿಯಲ್ಲಿ ನಡೆಸಿ ಸಾರ್ಥಕತೆ ಪಡೆದವರು ಎಂದು ತಿಳಿಸಿದರು.
ಪರಿಷತ್ತಿನ ಬೆಳವಣಿಗೆಗೆ ಸಹಕರಿಸಲು ಕೋರಿಕೆ:  ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಹೆಸರಿನಲ್ಲಿ ದಾನಿಗಳು ನೀಡಿದ ಹಣದಿಂದ ಬರುವ ಬಡ್ಡಿ ಹಣದಲ್ಲಿ ನಾಡು-ನುಡಿ ಮತ್ತಿತರ ವಿಷಯಗಳನ್ನು ಕುರಿತು ದತ್ತಿ ಉಪನ್ಯಾಸಗಳನ್ನು ನಿರಂತರವಾಗಿ ಪ್ರತಿವರ್ಷ ನಡೆಸಲಾಗುವುದು. ದಾನಿಗಳು ಹಿರಿಯರ ಹೆಸರಿನಲ್ಲಿ ದತ್ತಿ ಉಪನ್ಯಾಸ ನೀಡಿ ಪರಿಷತ್ತಿನ ಬೆಳವಣಿಗೆಗೆ ಸಹಕರಿಸಬೇಕೆಂದು ಕೋರಿದರು.
ಕನ್ನಡಶ್ರೀ ಬಿ.ಎಸ್.ಭಗವಾನ್ ಕನ್ನಡ ಗೀತೆ ಹಾಡಿದರು. ಬೆಂಗಳೂರು, ಸಿನಿಮಾ ಮತ್ತು ಕಿರುತೆರೆ ಕಲಾವಿದ ಕೆ.ಸಿ. ನಿರಂಜನಕುಮಾರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಜಿ ಶಾಸಕ ಟಿ.ಸಿ. ಬಸಪ್ಪ ಅವರ ಮಕ್ಕಳಾದ ಅಶೋಕ್‌ಕುಮಾರ್, ಡಾ.ಪ್ರಸಾದ್ ಮಾತನಾಡಿದರು. ಪ್ರಕೃತಿಶ್ರೀ ಕಲಾ ಕುಟೀರದ ಅಧ್ಯಕ್ಷೆ, ಕಲಾವಿದೆ ಉಮಾ ಪ್ರಕಾಶ್ ಅವರಿಂದ ವೀಣಾ ವಾದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಿರುತೆರೆ ಕಲಾವಿದ ಕೆ.ಸಿ.ನಿರಂಜನಕುಮಾರ್ ಏಕಪಾತ್ರಾಭಿನಯ, ಮೂಕಾಭಿನಯ ಪ್ರದರ್ಶಿಸಿದರು. ಸುಚೇತ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗಮಕ ಕಲಾ ಪರಿಷತ್ ಅಧ್ಯಕ್ಷ ಸಿದ್ದರಾಮಯ್ಯ, ಉಪನ್ಯಾಸಕಿ ಅನ್ನಪೂರ್ಣಮ್ಮ, ಶಾರದಾ ಅಶೋಕ್, ನವೀನ್, ರೇಣುಕ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.