ಚಿಕ್ಕಮಗಳೂರು

ಕತ್ತಲೆ ಕಳೆಯಲು ಜ್ಞಾನದ ಬೆಳಕು ಅವಶ್ಯ: ಸ್ವಾಮೀಜಿ

Published On :

ಬಾಳೆಹೊನ್ನೂರು: ದುಂದುವೆಚ್ಚ ಮಾಡದೇ ಸರಳ ಸಮಾರಂಭ ಮಾಡುವಲ್ಲಿ ಯುವ ಜನಾಂಗ ಮುಂದಾಗಬೇಕು ಎಂದು ರಂಭಾಪುರಿ ಶಾಖಾ ಮಠದ ಸಂಗೊಳ್ಳಿ ಹೀರೆಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ರಂಭಾಪುರಿ ಪೀಠದ ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸರಳ ವಿವಾಹ, ಚುಟುಕು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ಕೇಂದ್ರ ಚುಸಾಪ  ಪ್ರಧಾನ ಸಂಚಾಲಕ ಡಾ. ಎಂ.ಜೆ.ಆರ್. ಅರಸ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್ ರಚನೆ ಹಾಗೂ ಸಂಪಾದಕತ್ವದ ವೃಶ್ಚಿಕ ಕವನ ಸಂಕಲವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಹರಿಹರ ಪ್ರಭೋದಿನಿ ಗುರುಕುಲದ ವ್ಯವಸ್ಥಾಪಕ ಉಮೇಶ್,  ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ಬೇಲೂರಿನ ಅನ್ನಪೂರ್ಣಮ್ಮ ಗಣೇಶ್, ರಂಭಾಪುರಿ ಪೀಠದ ವ್ಯವಸ್ಥಾಪಕ ಸಂಕಪ್ಪ, ಬಳಕೆದಾರರ ವೇದಿಕೆಯ ಶಂಕರನಾರಾಯಣಭಟ್, ನೂತನ ದಂಪತಿ ಸೌಮ್ಯ ಶಿಶಿರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.