ಸೇವೆಗೆ ಕವನ ಪ್ರೇರಕವಾದರೆ ಸಾರ್ಥಕ್ಯ
ಬೀರೂರು (ಅಜ್ಜಂಪುರ ಜಿ.ಸೂರಿ ವೇದಿಕೆ)
....ಇಂದಿನ ಯುವ ಕವಿಗಳ ಕವನಗಳಲ್ಲಿ
ಸಾಹಿತ್ಯದ ಒಳ ಹೊರಗು
ಕಾಣದಿರುವುದಕ್ಕೆ ಅಧ್ಯಯನ
ಕೊರತೆಯೇ ಕಾರಣ...
ಸಮಾಜಕ್ಕೆ ಸೇವೆ ನೀಡುವ ನಿಟ್ಟಿನಲ್ಲಿ ಕವನಗಳು ಪ್ರೇರಕವಾದರೆ ಅಥವಾ ಉತ್ತೇಜಕವಾದರೆ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದರು.
ಅವರು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಯುವ ಕವಿಗಳಿಂದ ರಚಿತವಾಗುತ್ತಿರುವ ಕವನಗಳಲ್ಲಿ ಸಾಹಿತ್ಯದ ಒಳ ಹೊರಗು ಕಾಣಲಾಗುತ್ತಿಲ್ಲ. ಇದಕ್ಕೆ ಕಾರಣ ಅಧ್ಯಯನದ ಕೊರತೆ. ಕವಿತೆ ಒಂದು ವಿಸ್ಮಯ, ಇಂದಿನ ಯುವ ಕವಿಗಳು ವಿಚಾರಶೀಲತೆ ಜಾಗೃತಗೊಳಿಸಿ ಕೊಂಡು ಎಲ್ಲಿಯೂ ಪರಿಪೂರ್ಣತೆ ಕಂಡುಕೊಳ್ಳಲು ಆಗಿಲ್ಲ.
ತಾವು ಕೂಡಾ ಕಳೆದ 50 ವರ್ಷದಿಂದ ಕವಿತೆ ಬರೆಯುತ್ತಿದ್ದರೂ ಹೊಸ ಹೊಸ ವಿಚಾರಗಳು ಪ್ರತಿನಿತ್ಯ ನಮ್ಮ ಬರವಣಿಗೆಯಲ್ಲಿ ವಿಶೇಷತೆ ತರುತ್ತದೆ. ಉತ್ತಮ ಕವಿತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಹಾಗೂ ಜನರಲ್ಲಿ ಅರಿವು ಮೂಡಿಸುವ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಬಲ್ಲದು.ಕವಿಯ ಒಳ ಮನಸ್ಸು ಆ ವಿಚಾರದಲ್ಲಿ ಬದ್ಧತೆ ಪ್ರತಿಬಿಂಬಿಸುತ್ತದೆ. ಬದುಕಿನಲ್ಲಿ ಪ್ರತಿದಿನ ನಡೆಯುವ ಸಣ್ಣಪುಟ್ಟ ಘಟನೆಗಳು ಒಳ ದೃಷ್ಟಿಯಿಂದ ನೋಡುವ ಕಣ್ಣಿಗೆ ಬರವಣಿಗೆಗೆ ಸ್ಪೂರ್ತಿ ನೀಡುತ್ತದೆ ಎಂದು ನುಡಿದರು.
ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ತಮ್ಮ ಅನುಭವ ವಿಚಾರಗಳನ್ನು ತಮ್ಮ ಕವಿತೆಗಳ ಮೂಲಕ ವಾಚಿಸಿ ಸಾಮಾಜಿಕ ಪಿಡುಗುಗಳಾದ ಅತ್ಯಾಚಾರ, ಸ್ತ್ರೀಶೋಷಣೆ, ಪರಿಸರ ಕುರಿತು ತಮ್ಮ ಕಾಳಜಿ ವ್ಯಕ್ತಪಡಿಸಿದರು. ಸಾಹಿತಿ, ಜಿ.ಸಿ.ಸಿದಪ್ಪ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಶೃಂಗೇರಿ ವೀರಪ್ಪಗೌಡ, ಕಡೂರಿನ ಮೂರ್ತಿ, ಜನ್ನಾಪುರದ ರಘು, ಚಿಕ್ಕಮಗಳೂರಿನ ಸುರೇಶ್ರನ್ನು ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

