ಚಿಕ್ಕಮಗಳೂರು

ಯುವತಿ ಕೊಲೆಗೆ ಸಹಕರಿಸಿದ್ದವನ ಸೆರೆ

Published On :

ನರಸಿಂಹರಾಜಪುರ:  ಮೇ ತಿಂಗಳಲ್ಲಿ ಮುತ್ತಿನಕೊಪ್ಪದಲ್ಲಿ ನಡೆದ ಯುವತಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕೊಲೆಗೆ ಸಹಕಾರ ನೀಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದಾರೆ.
ಮುತ್ತಿನಕೊಪ್ಪದಲ್ಲಿ ಯುವತಿಯ ಶವ ದೊರೆತ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರಿಗೆ ಈ ಯುವತಿಯ ಶವವು ಭದ್ರಾವತಿಯ ರೋಶನಿ ಎಂಬುದಾಗಿ ಮಾಹಿತಿ ಸಿಕ್ಕಿತ್ತು. ಪ್ರೇಮ ಪ್ರಕರಣದಲ್ಲಿ ಸಿಕ್ಕಿದ್ದ ಯುವತಿಯ ಪ್ರಿಯಕರ ಭದ್ರಾವತಿಯ ನಾಗೇಶ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಮಧ್ಯೆ ಯುವತಿಗೆ ಸೇರಿದ ಮಗುವೊಂದು ಉಂಬಳೆಬೈಲು ಸಮೀಪದ ಲಿಂಗಾಪುರದ ಗ್ರಾಮದಲ್ಲಿ ಸಿಕ್ಕಿತ್ತು. ನರಸಿಂಹರಾಜಪರ ಆರಕ್ಷಕ ವೃತ್ತ ನಿರೀಕ್ಷಿಕ ಸದಾನಂದ ಹಾಗೂ ಕೊಪ್ಪ ಆರಕ್ಷಕ ವೃತ್ತ ನಿರೀಕ್ಷಿಕ ನಂದಕುಮಾರ್ ನೇತೃತ್ವದ ಪೊಲೀಸರ ತಂಡ ತನಿಖೆ ಮುಂದುವರಿಸಿ ಮೃತ ನಾಗೇಶನ ಗೆಳೆಯ ಭದ್ರಾವತಿಯ ನವೀನ್‌ನನ್ನು ವಶಕ್ಕೆ ಪಡೆದು ವಿಚಾರಿಸಿದರು. ಆಗ ನಾಗೇಶನೊಂದಿಗೆ ಸೇರಿ ರೋಶನಿಯನ್ನು ಕೊಂದು ಶವವನ್ನು ಮುತ್ತಿನಕೊಪ್ಪದ ಸಮೀಪದ ತಂದು ಹಾಕಿರುವುದಾಗಿ ತಿಳಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.