ಚಿಕ್ಕಮಗಳೂರು

2 ಹಂತದಲ್ಲಿ ಶಿಕ್ಷಕರಿಗೆ ವಿಷಯವಾರು ತರಬೇತಿ

Published On :

ಕಡೂರು: 2014-2015 ನೇ ಸಾಲನ್ನು ರಾಜ್ಯ ಸರ್ಕಾರ ಗುಣಾತ್ಮಕ ಶಿಕ್ಷಣ ಸಂವರ್ಧನಾ ವರ್ಷ ಎಂದು ಘೋಷಿಸಿದ್ದು ಅದಕ್ಕೆ ತಕ್ಕಂತೆ 3, 4, 7 ಹಾಗೂ 10ನೇ ತರಗತಿ ಪಠ್ಯಗಳು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗೆ ಬದಲಾಗಿವೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  3, 4, 7 ಮತ್ತು 10ನೇ ತರಗತಿ ಪಠ್ಯಗಳು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗೆ ಬದಲಾಗಿರುವುದರಿಂದ ಪಠ್ಯಗಳಲ್ಲಿ ಬದಲಾವಣೆ ಆಗಿರುವ ಕಾರಣ ಶಿಕ್ಷಕರಿಗೆ ವಿಷಯವಾರು ತರಬೇತಿಯನ್ನು 2 ಹಂತದಲ್ಲಿ ಆಯೋಜಿಸುತ್ತಿದೆ. ಗಿರಿಯಾಪುರದ ಗುರುಕೃಪಾ ಪ್ರೌಢಶಾಲೆ ಮತ್ತು ಪಟ್ಟಣದ ಯಾವುದಾದರೂ ಪ್ರೌಢಶಾಲೆಯಲ್ಲಿ ತಲಾ 3 ವಿಷಯಗಳಿಗೆ ವಿಷಯ ತಜ್ಞರಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 160 ಶಾಲೆಗಳಲ್ಲಿ 1307 ಸೀಟುಗಳು ಲಭ್ಯವಿದೆ. 1302 ಸೀಟುಗಳು ಈಗಾಗಲೇ ಭರ್ತಿ ಆಗಿವೆ. ಇನ್ನುಳಿದ 5 ಸೀಟುಗಳಿಗೆ ಆಯ್ಕೆ ನಡೆದಿದೆ. ರಾಜ್ಯದಲ್ಲಿಯೇ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಜಿಲ್ಲೆಯದ್ದಾಗಿದೆ. ಕಳೆದ ಸಾಲಿನಲ್ಲಿ ಆರ್‌ಟಿಇ ಅನ್ವಯ ಖಾಸಗಿ ಶಾಲೆಗಳಿಗೆ 1.5 ಕೋಟಿ ನೀಡಿದೆ. ಈ ಬಾರಿ ಸುಮಾರು 5 ಕೋಟಿ ನೀಡುವ ಅಂದಾಜಿದೆ ಎಂದರು.
 ಜಿಲ್ಲೆಯಲ್ಲಿ 1.57 ಲಕ್ಷ ಮಕ್ಕಳು ಎಲ್‌ಕೆಜಿಯಿಂದ 10ನೇ ತರಗತಿವರೆಗೆ ವ್ಯಾಸಾಂಗ ಮಾಡುತ್ತಿದ್ದಾರೆ ಎಂದ ಅವರು, ಮುಖ್ಯ ಇಲಾಖೆ ಆಗಿರುವ ಶಿಕ್ಷಣ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಬಗ್ಗೆ ಭಯ ಇಟ್ಟುಕೊಳ್ಳುವುದಕ್ಕಿಂತ ಗೌರವ ಇದ್ದರೆ ಮಾತ್ರ ಸಾಕು ಎಂದರು.
ಶಿಕ್ಷಕರಿಗೆ ವಾರ್ಷಿಕ ಕಾರ್ಯ ಯೋಜನೆ ರೂಪಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವಂತೆ ಸೂಚಿಸಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪೋಷಕರಿಗೆ ಇನ್ನೂ ಶಿಕ್ಷಣದ ಮಹತ್ವ ಅರಿವಾಗಬೇಕಿದೆ ಎಂದು ತಿಳಿಸಿದರು.
ತಾ.ಪಂ. ಅಧ್ಯಕ್ಷ ಕೆ.ಎಂ. ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಶಾಲಾ ದಾಖಲಾತಿ ಆಂದೋಲನ ಯಶಸ್ವಿ ಆಗಲಿ ಎಂದು ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.