3 ತಿಂಗಳಲ್ಲಿ ಸರ್ಕಾರಿ ನಿವೇಶನ
ಕಡೂರು: ಮೂರು ತಿಂಗಳಲ್ಲಿ ಕಡೂರು ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಿ ನಿವೇಶನ ನೀಡಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ಭರವಸೆ ನೀಡಿದರು.
ಕಡೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರು ನನ್ನನ್ನು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಮತ್ತಷ್ಟು ಜವಬ್ದಾರಿ ವಹಿಸಿದ್ದಾರೆ ಎದರು.
ಶಾಶ್ವತ ಪರಿಹಾರ: ಒಬ್ಬ ಶಾಸಕನಾದವನು ಜನಪ್ರಿಯತೆಗಿಂತ ಜನಪರಮುಖಿ ಶಾಸಕನಾದರೆ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಂಘ ನೀಡಿರುವ ಬೇಡಿಕೆಯಂತೆ ಕಟ್ಟಡ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ಹಾಗೂ ಆರ್ಥಿಕ ಸಹಾಯ ಕೋರಿದ್ದು, ಇದಕ್ಕೆ ತಾವು ಸಮ್ಮತಿ ಸೂಚಿಸುವ ಜೊತೆ ನಿವೇಶನ ನೀಡಲು ಸಿದ್ದನಿದ್ದೇನೆ. ದುರದೃಷ್ಟ ಎಂದರೆ ಕಡೂರು ಪಟ್ಟಣದಲ್ಲಿ ಯಾವುದೇ ಒಂದು ಸರ್ಕಾರಿ ಜಾಗ ಇರದಿರುವುದು ವಿಷಾದನೀಯ ಎಂದರು.
ಆದರೆ ನಮ್ಮ ಗುರುಗಳಾದ ವೈ.ಕೆ. ರಂಗಪ್ಪನವರ ಆಣತಿ ಹಾಗೂ ಮನವಿಯಂತೆ ಮೂರು ತಿಂಗಳಲ್ಲಿ ಸಂಘಕ್ಕೆ ನಿವೇಶನದ ವ್ಯವಸ್ಥೆ ಮಾಡಲಾಗುವುದು. ಆನಂತರ ಸಂಸದರ ಮತ್ತು ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾಸಿಕ ಪಿಂಚಣಿ: ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎನ್. ಸಂಪತ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಒಂದೇ ರೀತಿಯ ಮಾಸಿಕ ಪಿಂಚಣಿ ಜಾರಿಯಾಗಬೇಕು ಎಂದು ಈಗಾಗಲೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈ ಹೋರಾಟಕ್ಕೆ ನಾವು ನೀವು ಎಲ್ಲರೂ ಸೇರಿ ಕೈ ಜೋಡಿಸಿದಲ್ಲಿ ಅನುಕೂಲವಾಗಲಿದೆ ಎಂದರು.
ತಾಪಂ ಅಧ್ಯಕ್ಷ ಕುಂಕಾನಾಡು ಬಸವರಾಜಪ್ಪ ಮಾತನಾಡಿ, ವೃತ್ತಿ ಮತ್ತು ಪ್ರವೃತ್ತಿ ಮನುಷ್ಯನ ಬದುಕಿನಲ್ಲಿರುವ ಸಂಬಂಧಗಳ ನಡುವಿನ ವೃತ್ತಿಯ ಅಂಚಿನಲ್ಲಿರುವ ನಿವೃತ್ತಿಯು ಒಂದು ಕಾಲ್ಪನಿಕವಾದುದು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವೈ.ಕೆ. ರಂಗಪ್ಪ ಮಾತನಾಡಿ, ನಾನು ಯಾವುದೇ ಸ್ಥಾನಮಾನಕ್ಕೆ ಆಸೆ ಪಟ್ಟವನಲ್ಲ. ತೆರೆ ಮರೆಯಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದು ಸದಸ್ಯರ ಅಪ್ಪಣೆ ಮೇರೆಗೆ ನನಗೆ ಈ ಸ್ಥಾನ ನೀಡಲಾಗಿದೆ. ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು. ಸಮಾರಂಭದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯ, ಜಿಲ್ಲಾಧ್ಯಕ್ಷ ಎಚ್.ಎನ್. ಗಂಗಾಧರ್, ನಿಕಟಪೂರ್ವ ಅಧ್ಯಕ್ಷ ಎಚ್.ಡಿ. ಪರಮೇಶ್ವರಯ್ಯ ಮಾತನಾಡಿದರು. ಸಂಘದ ಕಾರ್ಯದರ್ಶಿ ಬಿ.ಎಂ. ಈಶ್ವರಪ್ಪ, ಖಜಾಂಚಿ ಗಿರಿಯಪ್ಪ ಸಂಘದ ಸರ್ವ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

