ಛಾಯಾಗ್ರಾಹಕರಿಗೆ ಪ್ಲಾನ್ ಕಾರ್ಡ್ ವಿತರಣೆ
ಚಿಕ್ಕಮಗಳೂರು: ಜಿಲ್ಲಾ ಛಾಯಾಗ್ರಾಹಕರ ಸಂಘದ ವತಿಯಿಂದ ಕೇಂದ್ರ ಸರ್ಕಾರದ ಪಿಂಚಿಣಿ ಯೋಜನೆಯ 2013- 14ನೇ ಸಾಲಿನಲ್ಲಿ ನಗರದಲ್ಲಿ ನೋಂದಣಿಯಾದ ಛಾಯಾಗ್ರಾಹಕರಿಗೆ ಇಲಾಖೆಯಿಂದ ನೀಡುವ ಪ್ಲಾನ್ ಕಾರ್ಡ್ನ್ನು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎ.ಎನ್. ಮೂರ್ತಿ ಶುಕ್ರವಾರ ವಿತರಿಸಿದರು.
ಇದೇ ಸಂದರ್ಭ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಎನ್ಪಿಎಸ್ ಲೈಟ್ ಸ್ವಾವಲಂಬನೆ ಯೋಜನೆ ಜಾರಿಗೆ ತಂದಿದೆ ಎಂದರು.
ಈ ಯೋಜನೆಯನ್ನು ಪಿಂಚಿಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ನವದೆಹಲಿ (ಪಿಎಫ್ಆರ್ಡಿಎ) ಇವರ ಮಾರ್ಗದರ್ಶನ ಹಾಗೂ ನಿಯಂತ್ರಣದಲ್ಲಿ ಜಾರಿಗೊಳಿಸಲಾಗುತ್ತಿದೆ. ಪ್ರತಿ ವರ್ಷ 1200 ವಂತಿಗೆದಾರರು ಪಾವತಿ ಮಾಡಬೇಕು. ರಾಜ್ಯ ಸರ್ಕಾರದಿಂದಲೂ ಸಹ ವಾರ್ಷಿಕ ಗರಿಷ್ಠ 1200 ಸಮಾನಾಂತರ ವಂತಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಗ್ರಹವಾದ ಮೊತ್ತವನ್ನು ಷೇರು ಮತ್ತು ಬಾಂಡ್ಗಳಲ್ಲಿ ಹೂಡಲಾಗುವುದು. ಇದರಿಂದ ಬರುವ ಆದಾಯದ ಮೇಲೆ ಪಿಂಚಣಿ ನಿರ್ಧರಿಸಲಾಗುವುದು. ಒಂದು ವೇಳೆ, ಯೋಜನೆಗೊಳಪಟ್ಟ ಫಲಾನುಭವಿಯು ಆಕಸ್ಮಿಕವಾಗಿ ಅವಧಿಗೆ ಮುಂಚಿತವಾಗಿ ಮರಣ ಹೊಂದಿದಲ್ಲಿ ಆತನು ಅಲ್ಲಿಯವರಗೆ ಯೋಜನೆಗೆ ಪಾವತಿ ಮಾಡಿದ ವಂತಿಗೆಯನ್ನು ಅದರ ಮೌಲ್ಯಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ಮೃತರ ನಾಮಿನಿಯು ಪಡೆಯಬಹುದಾಗಿರುತ್ತದೆ ಎಂದರು.
ಜಿಲ್ಲಾ ಛಾಯಾಗ್ರಾಹಕರ ಸಂಘದಲ್ಲಿ ಸದಸ್ವತ್ವ ಪಡೆದಂತ ಛಾಯಾಗ್ರಾಹಕರಿಗೆ 2ನೇ ಸುತ್ತಿನಲ್ಲಿ ನೋಂದಾಯಿಸಲು ಈ ಯೋಜನೆಯ ಅಧಿಕಾರಿಯನ್ನು ಕರೆಸಲಾಗುವುದು. ಜಿಲ್ಲೆಯ ಎಲ್ಲಾ ಛಾಯಗ್ರಾಹಕರು ಅವಕಾಶವನ್ನು ಉಪಯೋಗಿಸಿಕೊಳ್ಳಲು ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಖಜಾಂಚಿ ಪಿ.ರಾಜೇಶ್, ಸಹ ಕಾರ್ಯದರ್ಶಿ ರೇಣುಕಾ, ಮಾಜಿ ಜಿಲ್ಲಾಧ್ಯಕ್ಷ ಜೀವನ್ ಕೆ. ಶೆಟ್ಟಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

